ಬ್ರೇಕಿಂಗ್ ನ್ಯೂಸ್
29-05-25 02:16 pm Mangalore Correspondent ಕ್ರೈಂ
ಪುತ್ತೂರು, ಮೇ 29 : ಬಕ್ರೀದ್ ಹಬ್ಬಕ್ಕಾಗಿ ಆಡುಗಳನ್ನು ಖರೀದಿಸಲು ರಾಜಸ್ಥಾನಕ್ಕೆ ತೆರಳಿದ್ದ ಉಪ್ಪಿನಂಗಡಿಯ ಯುವಕರಿಬ್ಬರನ್ನು ಹಿಡಿದಿಟ್ಟು ಬ್ಲಾಕ್ಮೇಲ್ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಮನೆಯವರು ಆತಂಕಗೊಂಡು ಪೊಲೀಸರ ಗಮನಕ್ಕೆ ತಂದಿದ್ದಾರೆ. 34ನೇ ನೆಕ್ಕಿಲಾಡಿಯ ಮಹಮ್ಮದ್ ಆರಿಸ್ ಝುಬೈರ್ ಮತ್ತು ಆತನ ಸ್ನೇಹಿತರು ರಾಜಸ್ಥಾನದಲ್ಲಿ ಸಿಕ್ಕಿಬಿದ್ದಿದ್ದು, ಝುಬೈರ್ ತಂದೆ ಇಬ್ರಾಹಿಂ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಮಹಮ್ಮದ್ ಝುಬೈರ್ ಮತ್ತು ಅವರ ಸ್ನೇಹಿತರು ಆಡುಗಳನ್ನು ಖರೀದಿಸಲೆಂದು ರಾಜಸ್ಥಾನಕ್ಕೆ ತೆರಳಿದ್ದು, ಅಲ್ಲಿನ ವ್ಯಕ್ತಿಯೊಂದಿಗೆ ಆಡುಗಳನ್ನು ತರಿಸಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದರು. ಇದರಂತೆ, ಲಾರಿ ಬಾಡಿಗೆ ಸಲುವಾಗಿ 2 ಲಕ್ಷ ರೂ.ಗಳನ್ನು ಮೊದಲೇ ಪಾವತಿಸಿದ್ದರು. ಆಡುಗಳು ತಲುಪಿದ ನಂತರ ಉಳಿದ ಹಣವನ್ನು ನೀಡುವುದಾಗಿ ತೀರ್ಮಾನಿಸಲಾಗಿತ್ತು. ಆದರೆ ಝುಬೈರ್ ಮತ್ತು ಸ್ನೇಹಿತರು ರಾಜಸ್ಥಾನ ತಲುಪಿದಾಗ, ಅಲ್ಲಿದ್ದವರು ಮಾತು ಬದಲಿಸಿ 10 ಲಕ್ಷ ರೂ. ಮೊದಲೇ ನೀಡಿದರೆ ಮಾತ್ರ ಆಡುಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಈ ವಿಷಯವನ್ನು ಝುಬೈರ್ ತನ್ನ ಕುಟುಂಬಸ್ಥರಿಗೆ ತಿಳಿಸಿದ್ದು, ಇತ್ತ ಕಡೆಯಿಂದ 10 ಲಕ್ಷ ರೂ.ವನ್ನು ಆತನ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು. ಹಣ ತಲುಪಿದ ಕೂಡಲೇ ಆಡುಗಳನ್ನು ಲಾರಿಗೆ ಲೋಡ್ ಮಾಡಿರುವ ಫೋಟೋವನ್ನು ಝುಬೈರ್ ಕುಟುಂಬಸ್ಥರಿಗೆ ರವಾನಿಸಿದ್ದ.
ಆದರೆ ಕೆಲ ಹೊತ್ತಿನಲ್ಲೇ ಅಲ್ಲಿದ್ದ ವ್ಯಕ್ತಿಗಳು ಝುಬೈರ್ ಬಳಿಯಲ್ಲಿ ಮತ್ತೆ 20 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ ಆಡುಗಳನ್ನೂ ಕೊಡುವುದಿಲ್ಲ. ನಿಮ್ಮನ್ನೂ ಹೋಗಲು ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ. ಈ ಬಗ್ಗೆ ಝುಬೈರ್ ಫೋನಲ್ಲಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಆನಂತರ ಆತನ ಫೋನ್ ಸ್ವಿಚ್ ಆಫ್ ಮಾಡಲಾಗಿತ್ತು. ಆತಂಕಗೊಂಡ ತಂದೆ ಇಬ್ರಾಹಿಂ ಮತ್ತು ಕುಟುಂಬಸ್ಥರು ಉಪ್ಪಿನಂಗಡಿ ಪೊಲೀಸರನ್ನು ಸಂಪರ್ಕಿಸಿದ್ದರು. ಅಲ್ಲಿಂದ ರಾಜಸ್ಥಾನದ ಪೊಲೀಸ್ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ ನೀಡಲಾಗಿತ್ತು. ರಾಜಸ್ಥಾನ ಪೊಲೀಸರಿಗೆ ವಿಷಯ ತಿಳಿಸಿದಾಗ, ಝುಬೈರ್ ಮತ್ತು ಆತನ ಸ್ನೇಹಿತರ ಮೊಬೈಲ್ ಲೊಕೇಶನ್ ಪತ್ತೆಹಚ್ಚಿ ಪೊಲೀಸರು ಅವರನ್ನು ಠಾಣೆಗೆ ಕರೆತಂದಿದ್ದಾಗಿ ಮಾಹಿತಿ ನೀಡಿದ್ದರು. ಆನಂತರ ಪೊಲೀಸರು ಸರಿಯಾಗಿ ಪ್ರತಿಕ್ರಿಯಿಸದೆ ಕರೆ ಕಡಿತಗೊಳಿಸುತ್ತಿದ್ದು, ಇತ್ತ ಕುಟುಂಬಸ್ಥರು ಆತಂಕಗೊಂಡಿದ್ದಾರೆ.
ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಝುಬೈರ್ ಕುಟುಂಬ ಆತಂಕದಲ್ಲಿದ್ದು, ರಾಜಸ್ಥಾನ ಪೊಲೀಸರ ನಡೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದೆ. ಝುಬೈರ್ ಕುಟುಂಬವು ಪುತ್ತೂರು ಶಾಸಕರ ಸಹಾಯ ಕೋರಿದ್ದು, ಸುರಕ್ಷಿತ ವಾಪಸಾತಿಗಾಗಿ ಕೇಳಿಕೊಂಡಿದೆ.
Uppinangady Youth Blackmailed During Goat Purchase Trip to Rajasthan, rs 20 Lakh Demand, No Help from Police, Families Worried.
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
30-01-26 09:01 pm
Giridhar Shetty, Mangaluru
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
30-01-26 10:57 pm
HK News Desk
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm