ಬ್ರೇಕಿಂಗ್ ನ್ಯೂಸ್
28-11-20 06:09 pm Mangaluru Correspondent ಕ್ರೈಂ
ಮಂಗಳೂರು, ನ.28: ಬೊಕ್ಕಪಟ್ಣದ ರೌಡಿಶೀಟರ್ ಇಂದ್ರಜಿತ್ ಕೊಲೆ ಪ್ರಕರಣದಲ್ಲಿ ಬರ್ಕೆ ಪೊಲೀಸರು ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ.
ಮೋಕ್ಷಿತ್ (19), ಉಲ್ಲಾಸ್ (20), ಆಶಿಕ್ (23), ಗೌತಮ್ (25), ಕೌಶಿಕ್ (25), ನಿತಿನ್ (25), ರಾಕೇಶ್ (28), ಶರಣ್ (19), ಜಗದೀಶ್ (53) ಮತ್ತು ಶರಣ್ ಬಂಧಿತರು. ಆರು ವರ್ಷದ ಹಿಂದಿನ ಕೊಲೆ ಪ್ರಕರಣದ ಪ್ರತೀಕಾರಕ್ಕಾಗಿ ಇಂದ್ರಜಿತ್ ಕೊಲೆ ಮಾಡಲಾಗಿದೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಬುಧವಾರ ರಾತ್ರಿ ಬೊಕ್ಕಪಟ್ಣದಲ್ಲಿ ಗೆಳೆಯನ ಮನೆಗೆ ಮೆಹಂದಿ ಪಾರ್ಟಿಗೆ ಬಂದಿದ್ದ ಇಂದ್ರಜಿತ್, ಬಗ್ಗೆ ಅಲ್ಲಿನವರೇ ಯಾರೋ ಹಂತಕರಿಗೆ ಮಾಹಿತಿ ಕೊಟ್ಟಿದ್ದರು. ಮೆಹಂದಿ ಪಾರ್ಟಿ ಮಧ್ಯೆ ತಂಡಗಳ ಮಧ್ಯೆ ಸಣ್ಣ ಮಟ್ಟಿನ ಗಲಾಟೆಯೂ ನಡೆದಿತ್ತು. ಆಬಳಿಕ ಅಲ್ಲಿಂದ ಹೊರಬಂದಿದ್ದ ಇಂದ್ರಜಿತ್ ನನ್ನು ಹಿಂಬಾಲಿಸಿಕೊಂಡು ಹೋಗಿದ್ದ ರೌಡಿಗಳ ತಂಡ, ಬೋಳೂರಿನ ಕರ್ನಲ್ ಗಾರ್ಡನ್ ಬಳಿ ತಲವಾರು ದಾಳಿ ನಡೆಸಿದೆ. ಯದ್ವಾತದ್ವಾ ತಲವಾರು ಬೀಸಿದ್ದು ಸ್ಥಳದಲ್ಲೇ ಇಂದ್ರಜಿತ್ ಸಾವು ಕಂಡಿದ್ದ. ದೇಹದಲ್ಲಿ 42 ಕಡೆ ತಲವಾರಿನ ಏಟು ಕಂಡುಬಂದಿದ್ದು ಭೀಕರವಾಗಿ ಕೊಚ್ಚಿ ಹಾಕಿದ್ದರು.
ಏನಿತ್ತು ಅಂಥ ಪ್ರತೀಕಾರ !
2014, ಮೇ 22 ರಂದು ತಲ್ವಾರ್ ಜಗ್ಗ ಯಾನೆ ಜಗದೀಶ್ ಪುತ್ರ ವರುಣ್ ಕೊಲೆ ನಡೆದಿತ್ತು. ಉರ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಹೊಯ್ಗೆಬೈಲಿನಲ್ಲಿ ವರುಣ್ ಹುಟ್ಟುಹಬ್ಬದ ದಿನವೇ ಕೊಲೆಯಾಗಿದ್ದ. ಕೊಲೆ ಪ್ರಕರಣದಲ್ಲಿ ಇಂದ್ರಜಿತ್ ಭಾಗಿಯಾಗಿದ್ದ ಎನ್ನಲಾಗಿದೆ. ತಲ್ವಾರ್ ಜಗ್ಗ ಯಾನೆ ಜಗದೀಶ್ ರೌಡಿಸಂನಲ್ಲಿ ಹಳೆ ತಲೆಯಾಗಿದ್ದು ಗಾಂಜಾ ಮತ್ತಿನಲ್ಲಿ ಆರೋಪಿಗಳು ಆತನ ಪುತ್ರನನ್ನೇ ಮುಗಿಸಿದ್ದರು. ಪುತ್ರ ಸಣ್ಣ ಪ್ರಾಯದಲ್ಲೇ ಸತ್ತಿದ್ದು ತಂದೆಗೆ ಪ್ರತೀಕಾರ ಬೆಳೆದಿತ್ತು. ಆನಂತರ, ಇದೇ ದ್ವೇಷದಿಂದ ಇಂದ್ರಜಿತ್ ಮೇಲೆ ಬೋಳಾರದಲ್ಲಿ ಒಮ್ಮೆ ಕೊಲೆಯತ್ನ ನಡೆದಿತ್ತು. ಕೈಗೆ ಕಡಿದ ಗಾಯಗೊಂಡು ಅಪಾಯದಿಂದ ಪಾರಾಗಿದ್ದ. ಆಬಳಿಕ ಬೋಳೂರಿನ ಗ್ಯಾಂಗ್ ನಡುವಲ್ಲೇ ದ್ವೇಷ ಹುಟ್ಟಿಕೊಂಡಿತ್ತು.
ಮೂರು ವರ್ಷಗಳ ಹಿಂದೆ ತೊಕ್ಕೊಟ್ಟಿನಲ್ಲಿ ಕೊಲೆಯಾಗಿದ್ದ ಸೈಕೋ ವಿಕ್ಕಿಯ ಜೊತೆಗೆ ಓಡಾಡಿಕೊಂಡಿದ್ದ ಇಂದ್ರಜಿತ್, ವಿಕ್ಕಿಯ ಕೊಲೆಯಾದ ಬಳಿಕ ಸೈಲೆಂಟ್ ಆಗಿದ್ದ. ವರುಣ್ ಕೊಲೆ ಪ್ರಕರಣದಲ್ಲಿ ಪುನೀತ್ ಕೂಡ ಆರೋಪಿಯಾಗಿದ್ದ. ಬಂಧನಕ್ಕೊಳಗಾಗಿ ಹೊರಬಂದಿದ್ದಾಗಲೇ ಆತನ ಮನೆಗೆ ಜಗ್ಗ ಮತ್ತು ತಂಡ ದಾಳಿ ನಡೆದಿತ್ತು. 2014ರ ಆಗಸ್ಟ್ ತಿಂಗಳಲ್ಲಿ ಹೊಯ್ಗೆಬೈಲಿನ ಪುನೀತ್ ಮನೆಗೆ ತಲ್ವಾರ್ ಜಗ್ಗ, ಮೋಕ್ಷಿತ್, ರಾಜೇಶ್ ಸೇರಿ ಮನೆಗೇ ದಾಳಿ ನಡೆಸಿದ್ದರು. ಪುನೀತ್, ಮನೆಯ ಒಳಗೆ ಅವಿತುಕೊಂಡಿದ್ದರೆ ಹೊರಗಿನಿಂದ ಕಿಟಕಿ, ಬಾಗಿಲು ಒಡೆದು ಹೋಗಿದ್ದರು. ಹೊರಗೆ ನಿಲ್ಲಿಸಿದ್ದ ಕಾರನ್ನು ಪುಡಿಗಟ್ಟಿದ್ದರು. ಇವತ್ತು ಬಂಧನ ಆಗಿರುವ ಜಗ್ಗ ಮತ್ತು ಬಳಗ ಆವತ್ತು ಕೂಡ ಪುನೀತ್ ಮನೆಗೆ ದಾಳಿ ನಡೆಸಿದ್ದ ಪ್ರಕರಣದಲ್ಲಿ ಭಾಗಿಯಾಗಿತ್ತು.
ಆಬಳಿಕ, ಮಗನನ್ನು ಕೊಂದವರನ್ನು ಬಿಡುವುದಿಲ್ಲ. ತಲವಾರು ಹಾಕ್ತೀನಿ ಎನ್ನುತ್ತಲೇ ಓಡಾಡಿಕೊಂಡಿದ್ದ ಬೋಳೂರಿನ ಜಗ್ಗನಿಗೆ ಇಂದ್ರಜಿತ್ ಮತ್ತು ತಂಡ ಎದುರಾಗಿತ್ತು. ಕುಡಿದ ಮತ್ತಿನಲ್ಲಿದ್ದ ಜಗ್ಗನ ಮೇಲೇ ಇಂದ್ರಜಿತ್ ಹೊಡೆದಿದ್ದ. ಈ ದ್ವೇಷ ಮತ್ತು ಮಗನನ್ನು ಕೊಂದವ್ರ ಜೊತೆಗಿದ್ದಾನೆ ಎಂಬ ದ್ವೇಷದಲ್ಲಿ ಜಗ್ಗ ಮತ್ತು ಬೋಳೂರಿನ ಒಂದು ಗ್ಯಾಂಗ್ ಇಂದ್ರಜಿತ್ ಮುಗಿಸಲು ಸಂಚು ಹೆಣೆದಿತ್ತು.
Also Read: ಕುದ್ರೋಳಿಯ ರೌಡಿಶೀಟರ್ ಬರ್ಬರ ಹತ್ಯೆ ; ಕೊಂದು ಶವ ಎಸೆದುಹೋದ ದುಷ್ಕರ್ಮಿಗಳು !!
In connection to the murder of rowdy-sheeter Indrajith, the Barke police have arrested nine persons. Indrajith was found murdered at Karnal Garden at Bokkapatna here, late after midnight on Thursday, November 26.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
06-08-25 01:06 pm
Wecare
Puttur Doctor Dr Keerthana Joshi, Suicide, Ma...
05-08-25 10:34 pm
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
06-08-25 11:23 am
Mangalore Correspondent
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm