ಬ್ರೇಕಿಂಗ್ ನ್ಯೂಸ್
21-11-20 02:51 pm Headline Karnataka News Network ಕ್ರೈಂ
ಆಗ್ರಾ, ನ.21: ಸೆಟ್‌ಟಾಪ್ ಬಾಕ್ಸ್‌ಗೆ ರೀ ಚಾರ್ಜ್ ಮಾಡುವ ನೆಪದಲ್ಲಿ ಮನೆಯೊಳಗೆ ಪ್ರವೇಶಿಸಿದ ದುಷ್ಕರ್ಮಿಯೊಬ್ಬ 38 ವರ್ಷದ ದಂತವೈದ್ಯೆಯನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಅತ್ಯಂತ ಭೀಕರ ಹಾಗೂ ಘೋರ ಅಪರಾಧವೊಂದರಲ್ಲಿ ದುಷ್ಕರ್ಮಿಯು ಡಾ. ನಿಶಾ ಸಿಂಘಾಲ್ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಲ್ಲದೆ ಅವರ ಗಂಟಲು ಕತ್ತರಿಸಿದ್ದಾನೆ. ನಿಶಾ ಅವರ ಇಬ್ಬರು ಮಕ್ಕಳು ಮನೆಯ ಮತ್ತೊಂದು ಕೋಣೆಯಲ್ಲಿದ್ದರು. ಪಾತಕಿಯು 8 ಹಾಗೂ 4 ವರ್ಷದ ಮಕ್ಕಳ ಮೇಲೂ ಹಲ್ಲೆ ನಡೆಸಲು ಮುಂದಾಗಿದ್ದು, ಇಬ್ಬರು ಮಕ್ಕಳು ಬದುಕುಳಿದಿದ್ದಾರೆ.
ನಿಶಾ ಅವರ ಪತಿ ಅಜಯ್ ಸಿಂಘಾಲ್ ಶಸ್ತ್ರಚಿಕಿತ್ಸಕರಾಗಿದ್ದು, ತನ್ನ ಪತ್ನಿಯ ಮೇಲೆ ದಾಳಿ ನಡೆದ ಸುದ್ದಿ ಕೇಳಿ ಆಸ್ಪತ್ರೆಯಿಂದ ಮನೆಗೆ ಧಾವಿಸಿ ಬಂದು ನಿಶಾರನ್ನು ಆಸ್ಪತ್ರೆಗೆ ಕರೆದೊಯ್ದರು.ಅಲ್ಲಿ ನಿಶಾ ಅವರು ತೀವ್ರ ಗಾಯದಿಂದಾಗಿ ಮೃತಪಟ್ಟಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳಿಂದ ಆರೋಪಿ ಶುಭಮ್ ಪಾಠಕ್‌ನ ಗುರುತು ಪತ್ತೆ ಹಚ್ಚಲಾಗಿದ್ದು, ಇಂದು ಬೆಳಗ್ಗೆ ಆತನನ್ನು ಬಂಧಿಸಲಾಗಿದೆ.
ಕೇಬಲ್ ಟಿವಿ ತಂತ್ರಜ್ಞನಂತೆ ನಟಿಸುವ ಮೂಲಕ ಸಿಂಘಾಲ್ ಮನೆ ಪ್ರವೇಶಿಸಿದ್ದ ಆರೋಪಿ ದರೋಡೆಗೆ ಹೊಂಚುಹಾಕಿದ್ದ ನೆಂದು ಪೊಲೀಸರು ತಿಳಿಸಿದ್ದಾರೆ.
A 38-year-old dentist was murdered Friday afternoon at her home in Uttar Pradesh's Agra by a man who gained entry to the house on the pretext of recharging the set top box.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 10:58 pm
HK News Desk
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
05-08-25 10:34 pm
Mangalore Correspondent
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
06-08-25 11:04 am
Udupi Correspondent
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm