ಬ್ರೇಕಿಂಗ್ ನ್ಯೂಸ್
15-11-20 11:19 am Bengaluru Crime Correspondent ಕ್ರೈಂ
ಬೆಂಗಳೂರು, ನವೆಂಬರ್ 15: ಇದೊಂದು ವಿಚಿತ್ರ ಘಟನೆ. ಗಂಡಿನ ಮನೆಯವರು ಜೋತಿಷಿಯ ಮಾತು ಕೇಳಿ ಸೊಸೆಯನ್ನೇ ಕಳೆದುಕೊಳ್ಳುವಂತೆ ಆದ ಸುದ್ದಿ, ಹಾಗಾದ್ರೆ ಆಗಿದ್ದೇನು ಗೊತ್ತಾ? ಈ ಸುದ್ದಿ ನೋಡಿ.
ಇಲ್ಲಿ ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತೆ ಅಶ್ವಿನಿ (25). ಮದುವೆಯಾದ ಸೊಸೆ ಮನೆಗೆ ಬಂದಾಗ ಈ ಹೆಣ್ಣಿನ ಜಾತಕವನ್ನು ಜ್ಯೋತಿಷಿಯ ಬಳಿ ಕೇಳಿದ್ದಾರೆ. ಅದಕ್ಕೆ ಜ್ಯೋತಿಷಿ ಅಶ್ವಿನಿಗೆ ಮಕ್ಕಳಾಗಲ್ಲ ಅಂತ ಹೇಳಿದ್ದಾರೆ. ಇದನ್ನ ಬಲವಾಗಿ ನಂಬಿದ ಮನೆಯವರು ಅಶ್ವಿನಿಗೆ ಕಿರುಕುಳ ಕೊಡಲು ಪ್ರಾರಂಭಿಸಿದ್ದಾರೆ. ಇದೇ ವರ್ಷ ಫೆಬ್ರುವರಿಯಲ್ಲಿ ಯುವರಾಜ್ ಜೊತೆ ಅಶ್ವಿನಿ ಮದುವೆಯಾಗಿತ್ತು.

ಸೊಸೆಗೆ ಮಕ್ಕಳಾಗಲ್ಲ ಅಂತ ಜೋತಿಷಿ ಹೇಳಿದ ಮಾತನ್ನ ನಂಬಿದ ಪೋಷಕರು, ಅಶ್ವಿನಿಯನ್ನು ದೂರಮಾಡಲು ವರದಕ್ಷಿಣೆ ಕಿರುಕುಳ ಆರಂಭಿಸಿದ್ದಾರೆ. ಕಾರು, ಚಿನ್ನಾಭರಣ ಕೊಡುವಂತೆ ಪೀಡಿಸಿದ್ದಾರೆ ಅಂತ ಆರೋಪ ಕೇಳಿ ಬರ್ತಿದೆ. ಪ್ರತಿದಿನ ಗಂಡ ಹೆಂಡತಿ ನಡುವೆ ಜಗಳ ನಡೀತಾ ಇತ್ತು. ಅದೇ ರೀತಿ ನಿನ್ನೆಯೂ ಯುವರಾಜ್ ಹಾಗೂ ಅಶ್ವಿನಿ ನಡುವೆ ದೊಡ್ಡ ಗಲಾಟೆನೆ ನಡೆದಿದೆ. ಈ ಗಲಾಟೆಯಿಂದ ನೊಂದ ಅಶ್ವಿನಿ ನೇಣಿಗೆ ಶರಣಾಗಿದ್ದಾಳೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ ಆಸ್ಪತ್ರೆಗೆ ರವಾನಿಸಿದ್ದಾರೆ. ಇದು ನಡೆದಿದ್ದು ಹೆಣ್ಣೂರು ಠಾಣಾ ವ್ಯಾಪ್ತಿಯ ಹೊರಮಾವಿನಲ್ಲಿ. ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೀತಾ ಇದೆ.
A woman allegedly ended her life just nine months after her marriage, allegedly due to harassment by her husband and in-laws after an astrologer's prediction.The deceased has been identified as Ashwini (25). Her husband Yuvaraj has been arrested by the police.
25-10-25 09:33 pm
Bangalore Correspondent
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
25-10-25 09:36 pm
HK News Desk
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
25-10-25 08:08 pm
Mangalore Correspondent
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
25-10-25 02:14 pm
Mangaluru Correspondent
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm