ಬ್ರೇಕಿಂಗ್ ನ್ಯೂಸ್
12-11-20 10:02 pm Headline Karnataka News Network ಕ್ರೈಂ
ಚಿಕ್ಕಮಗಳೂರು, ನವೆಂಬರ್ 12: ಸರ್ಕಾರಿ ಕೆಲಸ ಕೊಡಿಸೋದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಭೂಪನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಪ್ರಭಾಕರ್ ಬಂಧಿತ. ಈತ ಪೋಸ್ಟಲ್ ಸರ್ವಿಸ್, ಇಸ್ರೋ, ಮೆಸ್ಕಾಂ, ಪಿಯುಸಿ, ಎಸ್.ಎಸ್.ಎಲ್.ಸಿ ಶಿಕ್ಷಣ ಇಲಾಖೆಯ ಬೋರ್ಡ್ ನಲ್ಲಿ ಕೆಲಸ ಕೊಡಿಸೋದಾಗಿ ಹೇಳಿ ಸುಮಾರು 2 ಕೋಟಿಗೂ ಅಧಿಕ ಹಣ ಪಡೆದು ವಂಚಿಸಿದ್ದ ಬಗ್ಗೆ ತನಿಖೆಯಲ್ಲಿ ತಿಳಿದುಬಂದಿದೆ.
ವಂಚನೆ ದುಡ್ಡಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದ ಪ್ರಭಾಕರ್, ಅದೇ ದುಡ್ಡಲ್ಲಿ ತಿರುಪತಿ ತಿಮ್ಮಪ್ಪನಿಗೂ 5 ಲಕ್ಷ ಕಾಣಿಕೆ ಹಾಕಿದ್ದ ವಿಚಾರ ಬಯಲಾಗಿದೆ. ಅಷ್ಟೇ ಅಲ್ಲ, ಉತ್ತರ ಭಾರತದ ವಿವಿಧೆಡೆಗೆ ಹೆಲಿಕಾಪ್ಟರ್ ನಲ್ಲೇ ತೀರ್ಥಯಾತ್ರೆ ನಡೆಸುತ್ತಿದ್ದ ಎನ್ನುವ ವಿಚಾರವೂ ತನಿಖೆಯಲ್ಲಿ ಪೊಲೀಸರಿಗೆ ತಿಳಿದುಬಂದಿದೆ.
ಸುಮಾರು 48 ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪೊಲೀಸರು ಆತನಿಂದ ವಶಕ್ಕೆ ಪಡೆದಿದ್ದಾರೆ. ತುಂಬಾ ಖತರ್ನಾಕ್ ಆಗಿದ್ದ ಕಿಲಾಡಿ, ರಾಜ್ಯಾದ್ಯಂತ ನೂರಾರು ಯುವಕ - ಯುವತಿಯರಿಗೆ ವಂಚಿಸಿದ್ದಾನೆ. ಉದ್ಯೋಗ ಕೊಡಿಸುವ ಆಮಿಷದಲ್ಲಿ ನಕಲಿ ಆಫರ್ ಲೆಟರ್ ನೀಡಿ, ಒಬ್ಬೊಬ್ಬರಿಂದ 10-15 ಲಕ್ಷ ರೂ. ಪೀಕುತ್ತಿದ್ದ. ಈ ಬಗ್ಗೆ ವಂಚನೆಗೊಳಗಾದ ಯುವಕನೊಬ್ಬ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. ಆರೋಪಿಯ ಬೆನ್ನತ್ತಿದ ಪೊಲೀಸರಿಗೆ ಆತನ ಕಾರ್ಯಶೈಲಿ, ಐಷಾರಾಮಿ ಜೀವನ ನೋಡಿ ಅಚ್ಚರಿಗೆ ಒಳಗಾಗಿದ್ದಾರೆ.
A man was arrested in Chikmagalur by police for cheating people on the promise of offering government job offer and extorted money crores from them.
25-10-25 09:33 pm
Bangalore Correspondent
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
25-10-25 09:36 pm
HK News Desk
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
25-10-25 08:08 pm
Mangalore Correspondent
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
25-10-25 02:14 pm
Mangaluru Correspondent
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm