ಬ್ರೇಕಿಂಗ್ ನ್ಯೂಸ್
24-09-23 10:27 pm Udupi Correspondent ಕ್ರೈಂ
ಉಡುಪಿ, ಸೆ.24: ಶಂಕರಪುರ ನಿವಾಸಿಯ ಮೊಬೈಲ್ ಗೆ ಅಪರಿಚಿತನೊಬ್ಬ ಮೆಸೇಜ್ ಮಾಡಿ, ತಾನು ಬ್ಯಾಂಕ್ ಅಧಿಕಾರಿಯೆಂದು ನಂಬಿಸಿ, ಕೆವೈಸಿ ಪಡೆದು ಬ್ಯಾಂಕ್ ಖಾತೆಯಿಂದ 3,38,199 ರೂಪಾಯಿ ಎಗರಿಸಿದ ಘಟನೆ ರವಿವಾರ ಬೆಳಕಿಗೆ ಬಂದಿದೆ.
ಶಂಕರಪುರ ಕೆನರಾ ಬ್ಯಾಂಕ್‌ನಲ್ಲಿ ಅಕೌಂಟ್ ಹೊಂದಿರುವ ಶಂಕರಪುರ ನಿವಾಸಿ ವಲೇರಿಯನ್ ಅವರ ಪತ್ನಿಯ ಮೊಬೆ„ಲ್ ನಂಬರ್‌ಗೆ ಸೆ. 23ರಂದು ಅಪರಿಚಿತನೋರ್ವ 9387666481 ಸಂಖ್ಯೆಯಿಂದ ಮೆಸೇಜ್ ಮಾಡಿ ತಾನು ಬ್ಯಾಂಕ್ ಉದ್ಯೋಗಿಯಾಗಿದ್ದು ನಿಮ್ಮ ಖಾತೆಯ ಕೆವೈಸಿ ಅಪ್‌ಡೇಟ್ ಮಾಡಿಕೊಳ್ಳುವಂತೆ ಸೂಚಿಸಿದ್ದನು. ಅದನ್ನು ನಂಬಿದ ಅವರು ಬ್ಯಾಂಕ್ ಖಾತೆ ಸಹಿತ ಪಾಸ್ ಬುಕ್ ವಿವರವನ್ನು ನೀಡಿದ್ದರು, ಬಳಿಕ ಆತ ಖಾತೆಯ ನಾಮಿನಿಯಾಗಿರುವ ಗಂಡನ ವಿವರವನ್ನು ಕೂಡಾ ಅಪ್‌ಡೇಟ್ ಮಾಡುವಂತೆ ಸೂಚಿಸಿದ್ದನು.
ಇದಾದ ಬಳಿಕ ಎಟಿಎಂ ಕಾರ್ಡ್ ವಿವರವನ್ನು ಪಡೆದುಕೊಂಡ ಅಪರಿಚಿತ ತತ್‌ಕ್ಷಣ ಖಾತೆದಾರರ ಮೊಬೆ„ಲ್‌ಗೆ ಒಟಿಪಿ ಕಳುಹಿಸಿದ್ದು, ಒಟಿಪಿ ವಿವರಗಳನ್ನು ಕೇಳಿ ಪಡೆದುಕೊಂಡು ಅವರ ಖಾತೆಯಿಂದ ಕ್ರಮವಾಗಿ 1,99,999/- , 50,000/- , 80,000/- ಮತ್ತು 8200/- ಹೀಗೆ ಒಟ್ಟು 3,38,199/- ರೂಪಾಯಿ ಹಣವನ್ನು ಡ್ರಾ ಮಾಡಿ ವಂಚಿಸಿರುವುದಾಗಿ ತಿಳಿದು ಬಂದಿದೆ.
ವಂಚನೆಗೊಳಗಾಗಿರುವ ವಲೇರಿಯನ್ ಅವರು ಈ ಬಗ್ಗೆ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಆನ್‌ಲೈನ್ ಮೋಸ ಜಾಲಕ್ಕೆ ಸಿಲುಕಿ ಜನರು ನಿರಂತರವಾಗಿ ವಂಚನೆಗೊಳಗಾಗುತ್ತಿದ್ದು ಇಂತಹ ಘಟನೆಗಳು ಗ್ರಾಮೀಣ ಭಾಗಕ್ಕೂ ಕಾಲಿರಿಸಿರುವುದು ಆಘಾತಕಾರಿ ವಿಚಾರವಾಗಿದೆ. ಇಂತಹ ಜಾಲಗಳು ಮೊಬೈಲ್, ವಾಟ್ಸಾಪ್, ಫೇಸ್ ಬುಕ್ ಮತ್ತು ಇನ್‌ಸ್ಟಾಗ್ರಾಂ ಮೂಲಕವಾಗಿ ನಿರಂತರವಾಗಿ ಜನರನ್ನು ವಂಚಿಸುತ್ತಿದ್ದು ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕಿದೆ. ಎಲ್ಲ ಊರುಗಳಲ್ಲೂ ಬ್ಯಾಂಕ್‌ಗಳು ಹತ್ತಿರದಲ್ಲೇ ಇದ್ದು ಯಾವುದೇ ಅಪರಿಚಿತರು ಮಾಹಿತಿ ಕೇಳಿದಾಗ ಮಾಹಿತಿಯನ್ನು ರವಾನಿಸಿದೇ ನೇರವಾಗಿ ಬ್ಯಾಂಕ್‌ಗೆ ತೆರಳಿ ತಮ್ಮ ಇ ಕೆವೈಸಿ ಅಪ್‌ಡೇಟ್ ಮಾಡಿಕೊಳ್ಳಬೇಕಿದೆ. ಆನ್‌ಲೈನ್ ಮೂಲಕವಾಗಿ ಯಾವುದೇ ಮಾಹಿತಿಗಳನ್ನು ಶೇರ್ ಮಾಡಿಕೊಳ್ಳಬಾರದು. ಇನ್‌ಸ್ಟಾಗ್ರಾಂ, ಫೇಸ್ಬುಕ್, ವಾಟ್ಸಾಪ್ ಜಾಲತಾಣಗಳನ್ನು ಬಳಸುವಾಗ ಎಚ್ಚರ ವಹಿಸ ಬೇಕು ಎಂದು ಕಾಪು ಎಸ್ಐ ಅಬ್ದುಲ್ ಖಾದರ್ ಜನರಲ್ಲಿ ಮನವಿ ಮಾಡಿದ್ದಾರೆ.
Udupi, fraudsters steal Rs 3 lakhs from canara bank after asking for OTP in the name of KYC update.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 11:22 am
HK News Staffer
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm