ಬ್ರೇಕಿಂಗ್ ನ್ಯೂಸ್
09-11-20 09:25 pm Mangaluru Correspondent ಕ್ರೈಂ
ಮಂಗಳೂರು, ನವೆಂಬರ್ 9: ಕಾವೂರಿನ ಮಲ್ಲಿ ಲೇಔಟ್ ನಲ್ಲಿ ನ.3ರಂದು ಹಾಡಹಗಲೇ ನಡೆದಿದ್ದ ಕೇರಳ ಮೂಲದ ವ್ಯಕ್ತಿಯ ಬರ್ಬರ ಕೊಲೆ ಪ್ರಕರಣವನ್ನು ಕಾವೂರು ಪೊಲೀಸರು ಭೇದಿಸಿದ್ದಾರೆ.
ಪ್ರಕರಣ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕೋಡಿಕಲ್ ನಿವಾಸಿ ಸಂತೋಷ್ (43) ಮತ್ತು ಗದಗ ಮೂಲದ ಬೈಕಂಪಾಡಿಯ ಅಂಗಾರಗುಂಡಿ ನಿವಾಸಿ ಸಿದ್ದಪ್ಪ (36) ಬಂಧಿತರು.
ಆರೋಪಿ ಸಂತೋಷ್, ಈ ಹಿಂದೆ ಮೃತ ಸುರೇಂದ್ರನ್ ಮನೆಯಲ್ಲಿ ಅಲ್ಯುಮಿನಿಯಮ್ ಫ್ಯಾಬ್ರಿಕೇಶನ್ ಕೆಲಸ ಮಾಡಿದ್ದು ಅದರಲ್ಲಿ ಹಣ ಪಡೆಯಲು ಬಾಕಿ ಇತ್ತು. ಹಣ ನೀಡದ ದ್ವೇಷ ಇದ್ದುದರಿಂದ ಸಂತೋಷ್, ಸಿದ್ದಪ್ಪನ ಜೊತೆ ಸೇರಿ ನ.3ರಂದು ಕೆಲಸ ಕೇಳುವ ನೆಪದಲ್ಲಿ ಸುರೇಂದ್ರನ್ ಮನೆಗೆ ಬಂದಿದ್ದ. ಸುರೇಂದ್ರನ್ ಮನೆಯಲ್ಲಿ ಹಣ, ಚಿನ್ನ ಸಿಗಬಹುದೆಂದು ಒಬ್ಬಂಟಿಯಾಗಿದ್ದ ಅವರನ್ನು ಬ್ಲೇಡ್ ಕಟರ್ ಮೂಲಕ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದರು. ಆಬಳಿಕ ಮನೆಯಲ್ಲಿ ಸಿಕ್ಕಿದ್ದ ಸ್ವಲ್ಪ ಹಣದೊಂದಿಗೆ ಮನೆಯಿಂದ ಪರಾರಿಯಾಗಿದ್ದರು.
ಕೊಲೆ ಘಟನೆ ಸಂಜೆ ಹೊತ್ತಿಗೆ ಸುರೇಂದ್ರನ್ ಪತ್ನಿ ಮನೆಗೆ ಆಗಮಿಸಿದಾಗ, ಬಯಲಾಗಿತ್ತು. ಮನೆಯ ಒಳಗೆ ರಕ್ತದ ಮಡುವಲ್ಲಿ ಸುರೇಂದ್ರನ್ ಕೊಲೆಯಾಗಿ ಬಿದ್ದಿದ್ದರು. ಪ್ರಕರಣದ ತನಿಖೆಗಾಗಿ ಕಾವೂರು ಠಾಣೆ ಪೊಲೀಸರ ಜೊತೆ ಸಿಸಿಬಿ ಘಟಕ ಮತ್ತು ತಾಂತ್ರಿಕ ತಜ್ಞರ ಜೊತೆ ಮೂರು ತಂಡಗಳಲ್ಲಾಗಿ ಕಾರ್ಯಾಚರಣೆ ನಡೆಸಿದ್ದರು. ಪೊಲೀಸರು ಸಾಂದರ್ಭಿಕ ಸಾಕ್ಷ್ಯಗಳನ್ನು ಕಲೆಹಾಕಿ ಶಂಕೆ ಮೇಲೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಪ್ರಕರಣ ಬೆಳಕಿಗೆ ಬಂದಿದೆ.
ಸುರೇಂದ್ರನ್ ಸಾಕಷ್ಟು ಸ್ಥಿತಿವಂತರಾಗಿದ್ದು ಕೇರಳ ಮತ್ತು ಮಂಗಳೂರಿನಲ್ಲಿ ವಹಿವಾಟು ಹೊಂದಿದ್ದರು. ಪ್ರಕರಣದಲ್ಲಿ ಬೇರೇನಾದ್ರೂ ಕೈವಾಡ ಇದೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಬೇಕಿದೆ.
ಇದನ್ನೂ ಓದಿ: ಕಾವೂರು ; ಕೇರಳ ಮೂಲದ ಉದ್ಯಮಿಯ ಮನೆಯಲ್ಲೇ ಇರಿದು ಕೊಲೆ !!
In connection to the murder of Kerala Businessman in Kavoor, the police have succeeded in arresting two persons. A Kerala native operating his business in the city here was hacked to death in broad daylight. The incident happened in Kavoor on Tuesday, November 3.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am