ಬ್ರೇಕಿಂಗ್ ನ್ಯೂಸ್
23-07-23 10:13 pm Mangalore Correspondent ಕ್ರೈಂ
ಉಳ್ಳಾಲ, ಜು.23: ಮಂಗಳೂರು ನಗರದಾದ್ಯಂತ ಮಟ್ಕಾ ಧಂದೆ ವ್ಯಾಪಿಸಿದ್ದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರು ದಂಧೆಗೆ ಕಡಿವಾಣ ಹಾಕಲು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರೂ ಮಾರ್ನಮಿಕಟ್ಟೆಯ ಜನರಲ್ ಸ್ಟೋರ್ ಒಂದರಲ್ಲಿ ಖುಲ್ಲಂ ಖುಲ್ಲ ಮಟ್ಕಾ ಧಂದೆ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದು ಹೆಡ್ ಲೈನ್ ಕರ್ನಾಟಕ ರಹಸ್ಯ ಕಾರ್ಯಾಚರಣೆ ನಡೆಸಿದ್ದು ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದೆ. ಆಯುಕ್ತರ ಸೂಚನೆ ಮೇರೆಗೆ ಪಾಂಡೇಶ್ವರ ಪೊಲೀಸರು ದಾಳಿ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.
ನಗರದ ಅನೇಕ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆಯುತ್ತಿದ್ದ ಮಟ್ಕಾ ಧಂದೆ, ಜೂಜು ಅಡ್ಡೆಗಳಿಗೆ ಮಂಗಳೂರು ಕಮಿಷನರ್ ಕುಲದೀಪ್ ಜೈನ್ ಅವರು ದಾಳಿ ನಡೆಸುತ್ತಿದ್ದಾರೆ. ನಿನ್ನೆ ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟಿನ ಮಟ್ಕಾ ಅಡ್ಡೆಗೂ ದಾಳಿ ನಡೆಸಿದ್ದ ಪೊಲೀಸರು ಐವರನ್ನ ಬಂಧಿಸಿದ್ದರು.

ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರ್ನಮಿಕಟ್ಟೆ ಎಂಬಲ್ಲಿನ ಮಂಗಳಾಂಬ ಎಂಟರ್ ಪ್ರೈಸಸ್ ಹೆಸರಿನ ಜನರಲ್ ಸ್ಟೋರಲ್ಲಿ ರಾಜಾರೋಷ ಮಟ್ಕಾ ಧಂದೆ ನಡೆಯುತ್ತಿರುವುದಾಗಿ ಹೆಡ್ ಲೈನ್ ಕರ್ನಾಟಕಕ್ಕೆ ಮಾಹಿತಿ ದೊರಕಿದೆ. ಭಾನುವಾರ ಬೆಳಗ್ಗೆ ರಹಸ್ಯ ಕಾರ್ಯಾಚರಣೆಗೆ ಇಳಿದಾಗ, ಮಾರ್ನಮಿಕಟ್ಟೆಯ ಜನರಲ್ ಸ್ಟೋರಲ್ಲಿ ಇಬ್ಬರು ಖುಲ್ಲಂ, ಖುಲ್ಲ ಮಟ್ಕಾ ಧಂದೆ ನಡೆಸುತ್ತಿರುವುದು ತಿಳಿದುಬಂದಿದ್ದು ಅದನ್ನ ರಹಸ್ಯ ಕ್ಯಾಮೆರಾದಲ್ಲಿ ಚಿತ್ರೀಕರಿಸಿ ಪೊಲೀಸ್ ಆಯುಕ್ತರಿಗೆ ವೀಡಿಯೋ ಕಳಿಸಲಾಗಿದೆ. ತಕ್ಷಣ ಸ್ಪಂದಿಸಿದ ಆಯುಕ್ತರು ಪಾಂಡೇಶ್ವರ ಠಾಣಾ ಪೊಲೀಸರ ಮೂಲಕ ಮಟ್ಕಾ ಅಡ್ಡೆಗೆ ದಾಳಿ ನಡೆಸಿದ್ದು ಈ ವೇಳೆ ಧಂದೆಯಲ್ಲಿ ನಿರತನಾಗಿದ್ದ ಆರೋಪಿ ಎಕ್ಕೂರು ನಿವಾಸಿ ಪುಷ್ಪರಾಜ್(47) ಎಂಬಾತನನ್ನ ಬಂಧಿಸಿದ್ದು 300 ರೂ.ಗಳನ್ನ ವಶ ಪಡಿಸಿದ್ದಾರೆ.
ಮಾರ್ನಮಿಕಟ್ಟೆ ಪೇಟೆಯ ನಡುವಲ್ಲೇ ನಡೆಯುತ್ತಿದ್ದ ಮಟ್ಕಾ ದಂಧೆ ಪಕ್ಕದಲ್ಲೇ ಇರುವ ಪಾಂಡೇಶ್ವರ ಪೊಲೀಸರಿಗೆ ತಿಳಿಯದ ಸಂಗತಿಯೇನೂ ಅಲ್ಲ. ಇದೀಗ ಕಮೀಷನರ್ ಸೂಚನೆಯಂತೆ ಒಲ್ಲದ ಮನಸಲ್ಲಿ ಪೊಲೀಸರು ದಾಳಿ ನಡೆಸಿದ್ದು, ದಿನವಿಡೀ ಮಟ್ಕಾ ಧಂದೆ ನಡೆಸುವ ಅಡ್ಡೆಯಿಂದ ಬರೀ 300 ರೂಪಾಯಿಗಳನ್ನ ವಶಪಡಿಸಿ ಭೇಷ್ ಎನಿಸಿಕೊಂಡಿದ್ದಾರೆ. ರಹಸ್ಯ ಕಾರ್ಯಾಚರಣೆ ವೇಳೆ ಮಟ್ಕಾ ಚೀಟಿ ಬರೆಯುತ್ತಿದ್ದ ಧರ್ಮಪಾಲ್ ಮತ್ತು ಆತನ ಅಳಿಯ ಕಿಶೋರ್ ತಪ್ಪಿಸಿಕೊಂಡಿದ್ದು ಪುಷ್ಪರಾಜ್ ಎಂಬಾತನನ್ನ ಆರೋಪಿಯೆಂದು ತೋರಿಸಲಾಗಿದೆ.
Mangalore Pandeshwar Police Raid General store at Marnamikatte over matka gambling, one arrested after sting operation by Headline Karnataka News. The arrested has been identified as Pushparaj (47). Cash of 300 has been seized. Commissioner Kuldeep Jain has ordered for raid in the city on Matka gambling.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 04:08 pm
Mangaluru Staff
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm