ಬ್ರೇಕಿಂಗ್ ನ್ಯೂಸ್
24-06-23 05:16 pm HK News Desk ಕ್ರೈಂ
ಇಂದೋರ್, ಜೂನ್ 24: ಮಧ್ಯಪ್ರದೇಶದ ಮಹಿಳೆಯೊಬ್ಬರಿಗೆ ಕರ್ನಾಟಕದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಯೊಬ್ಬ ತಾನು ಮುಸ್ಲಿಂ ಎಂಬುದನ್ನು ಮುಚ್ಚಿಟ್ಟು ಮದುವೆಯಾಗುವ ಭರವಸೆ ನೀಡಿ, ಲೈಂಗಿಕವಾಗಿ ಬಳಸಿಕೊಂಡು ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿಬಂದಿದೆ.
ಈ ಬಗ್ಗೆ ಮಧ್ಯಪ್ರದೇಶದ ದಮೋಹ್ ಜಿಲ್ಲೆಯಲ್ಲಿ ಮಹಿಳೆ ದೂರು ನೀಡಿದ್ದಾರೆ. ಈ ಸಂಬಂಧ ಕರ್ನಾಟಕದ ಕಾಂಗ್ರೆಸ್ ಸರಕಾರವನ್ನು ಮಧ್ಯಪ್ರದೇಶ ಸರಕಾರ ತರಾಟೆ ತೆಗೆದುಕೊಂಡಿದೆ. ದಮೋಹ್ ಪ್ರದೇಶದ ನಿವಾಸಿ ಮಹಿಳೆ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದಾಗ ಉಮರ್ ಫಾರುಕ್ ಎಂಬಾತ ಪರಿಚಯವಾಗಿದ್ದ. ಆತ ತನ್ನ ಹೆಸರನ್ನು ರಾಜೀವ್ ಎಂದು ಹೇಳಿಕೊಂಡಿದ್ದು ಮದುವೆಯಾಗುವ ಭರವಸೆ ನೀಡಿ, ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದ.

ಬಳಿಕ ಆ ವ್ಯಕ್ತಿ ಮುಸ್ಲಿಂ ಎಂದು ಮಹಿಳೆಯ ಅರಿವಿಗೆ ಬಂದಿತ್ತು. ಆದಾಗ್ಯೂ, ತನ್ನನ್ನು ಮದುವೆ ಆಗುವಂತೆ ಮಹಿಳೆ ಕೇಳಿಕೊಂಡಿದ್ದಾಳೆ. ಆದರೆ ಯುವಕ ಮದುವೆಯಾಗಲ್ಲ ಎಂದಿದ್ದಲ್ಲದೆ, ತನ್ನಲ್ಲಿ ಖಾಸಗಿ ಚಿತ್ರ, ವೀಡಿಯೋಗಳಿದೆಯೆಂದು ಹೇಳಿ ಬ್ಲಾಕ್ಮೇಲ್ ಮಾಡಿದ್ದಲ್ಲದೆ ಜಾಲತಾಣದಲ್ಲಿ ಹರಿಯ ಬಿಡುವುದಾಗಿ ಹೇಳಿ ಬೆದರಿಕೆ ಒಡ್ಡಿದ್ದಾನೆ. ಮಹಿಳೆ ತನಗಾದ ಅನ್ಯಾಯದ ಬಗ್ಗೆ ದಮೋಹ್‌ನಲ್ಲಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆಗಾಗಿ ದಮೋಹ್ ಪೊಲೀಸರು ಕರ್ನಾಟಕಕ್ಕೆ ಬಂದಿದ್ದು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.


ಘಟನೆ ಬಗ್ಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ ಕಿಡಿಕಾರಿದ್ದಾರೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಉತ್ತರ ಪ್ರದೇಶದಲ್ಲಿ ನಾನೂ ಮಹಿಳೆ, ನಮಗೆ ಹೋರಾಡುವುದು ಗೊತ್ತಿದೆ ಎಂದು ಹೇಳಿದ್ದರು. ಈಗ ನಮ್ಮ ರಾಜ್ಯದ ಹೆಣ್ಣು ಮಗಳಿಗೆ ಅನ್ಯಾಯವಾಗಿದೆ. ಆರೋಪಿಯನ್ನು ಅವರದ್ದೇ ಪಕ್ಷ ಅಧಿಕಾರದಲ್ಲಿರುವ ಸರಕಾರ ಹುಡುಕಿಕೊಡಬೇಕು. ಅವನ ಲವ್ ಜಿಹಾದ್ ಮದವನ್ನು ನಾವು ಇಳಿಸುತ್ತೇವೆ ಎಂದು ಕಿಡಿ ಕಾರಿದ್ದಾರೆ.
A woman from Damoh in Madhya Pradesh has alleged that a Muslim man in Bengaluru sexually exploited her, after which police registered a case, while the ruling Bharatiya Janata Party taunted the Congress that is in power in Karnataka. The woman has lodged a complaint in Damoh on Thursday evening against one Omar Farooq and a police team from here is leaving for Karnataka immediately to probe the case, MP Home Minister Narottam Mishra told reporters in Bhopal.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 11:22 am
HK News Staffer
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
27-08-26 05:24 pm
HK News Staffer
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm