ಬ್ರೇಕಿಂಗ್ ನ್ಯೂಸ್
29-10-20 06:06 pm Udupi Correspondent ಕ್ರೈಂ
ಉಡುಪಿ, ಅಕ್ಟೋಬರ್ 29:ರಕ್ಷಿತಾ ನಾಯಕ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ಪ್ರಶಾಂತ್ ಕುಂದರ್ ರೋಚಕ ಮಾಹಿತಿಗಳನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ರಕ್ಷಿತಾ ಜೊತೆಗೆ ಕೇವಲ ಗೆಳೆತನ ಮಾತ್ರ ಇತ್ತು ಎಂದು ಹೇಳ್ತಾ ಬಂದಿದ್ದ ಪ್ರಶಾಂತ್ ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು ಮತ್ತಷ್ಟು ವಿವರವನ್ನು ನೀಡಿದ್ದಾನೆ. ತನಗೆ ಮದುವೆಯಾಗಿರುವುದನ್ನು ರಕ್ಷಿತಾಳ ಬಳಿ ಮುಚ್ಚಿಟ್ಟಿದ್ದೆ. ಪರಿಚಯ ಪ್ರೇಮಕ್ಕೆ ತಿರುಗಿ ರಕ್ಷಿತಾ ನನ್ನ ಬಳಿ ಮದುವೆಯಾಗಲು ಒತ್ತಾಯಿಸಿದ್ದಾಳೆ. ಈ ನಡುವೆ, ಬಾಡಿಗೆ ಮನೆ ಮಾಡಲು ಒತ್ತಾಯ ಮಾಡಿದ್ದಳು. ಹಾಗಾಗಿ ಅಂಬಾಗಿಲಿನಲ್ಲಿ ಮನೆ ಮಾಡಿಕೊಂಡಿದ್ದೆವು. ಹೀಗೆ ಆಕೆಯ ಮನೆಯಲ್ಲಿ ಉಳಿದುಕೊಂಡಿದ್ದ ವಿಚಾರ ನನ್ನ ಪತ್ನಿಗೆ ಗೊತ್ತಾಗಿ ರಂಪ ಮಾಡಿದ್ದಾಳೆ. ರಕ್ಷಿತಾಳ ಫೋನ್ ನಂಬರ್ ಪಡೆದು ಜೋರು ಮಾಡಿದ್ದಳು ಎಂದು ಪ್ರಶಾಂತ್ ಮಾಹಿತಿ ನೀಡಿದ್ದಾನೆ.
ತಿಂಗಳ ಹಿಂದಷ್ಟೆ ಪತ್ನಿಗೆ ನಮ್ಮ ಸಂಬಂಧದ ವಿಚಾರ ಗೊತ್ತಾಗಿತ್ತು. ಮದುವೆಯಾದ ಬಳಿಕ ಪತ್ನಿ ಜೊತೆ ಉಪ್ಪೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದೆ. ಈ ನಡುವೆ, ಇನ್ ಸ್ಟಾ ಗ್ರಾಮಿನಲ್ಲಿ ರಕ್ಷಿತಾಳ ಪರಿಚಯ ಆಗಿತ್ತು. ಆಬಳಿಕ, ರಕ್ಷಿತಾ ಜೊತೆ ಸುತ್ತಾಟ ಮಾಡಿದ್ದೆ. ಬಳಿಕ ಬಾಡಿಗೆ ಮನೆ ಮಾಡುವಂತೆ ಒತ್ತಾಯಿಸಿದ್ದಾಳೆ. ಅಣ್ಣ- ತಂಗಿ ಅಂತ ಹೇಳಿ ಬಾಡಿಗೆ ಮನೆ ಪಡೆದಿದ್ದೆವು. ಕೆಲವೊಮ್ಮೆ ರಕ್ಷಿತಾ ಮನೆಯಲ್ಲಿ ಬಂದು ಉಳಿಯುತ್ತಿದ್ದೆ. ಪತ್ನಿಗೆ ವಿಚಾರ ಗೊತ್ತಾಗಿ ರಂಪ ಆದಬಳಿಕ ರಕ್ಷಿತಾ, ನನ್ನನ್ನು ಪತ್ನಿಗೆ ಡೈವೋರ್ಸ್ ನೀಡಲು ಒತ್ತಾಯ ಮಾಡಿದ್ದಾಳೆ. ಡೈವೋರ್ಸ್ ಮಾಡಿ ನನ್ನನ್ನು ಮದುವೆಯಾಗು ಎಂದು ದಿನವೂ ಪೀಡಿಸುತ್ತಿದ್ದಳು.
ಮೊನ್ನೆಯೂ ಬೆಳಗ್ಗೆಯೇ ರಂಪ ಮಾಡಿದ್ದು, ಮದುವೆಯಾಗದಿದ್ದರೆ ಸಾಯುತ್ತೇನೆ ಎಂದು ಹೆದರಿಸಿದ್ದಾಳೆ. ಮಾತಿಗೆ ಮಾತು ಬೆಳೆದು ರಕ್ಷಿತಾ ಸಂಜೆ ಹೊತ್ತಿಗೆ ತನ್ನ ಕೋಣೆಗೆ ಹೋಗಿ ಬೆಡ್ ಶೀಟನ್ನು ಸುತ್ತಿಕೊಂಡು ನೇಣು ಹಾಕಲು ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ರಕ್ಷಣೆ ಮಾಡಲು ಯತ್ನಿಸಿದ್ದೇನೆ. ಬಳಿಕ ಆಸ್ಪತ್ರೆಗೆ ಕರೆತಂದಿದ್ದೇನೆ ಎಂದು ಪ್ರಶಾಂತ್ ಪೊಲೀಸರ ಬಳಿ ಮಾಹಿತಿ ನೀಡಿದ್ದಾನೆ.
ಸದ್ಯಕ್ಕೆ ರಕ್ಷಿತಾ ನಿಗೂಢ ಸಾವು ಪ್ರಕರಣ ಸಂಬಂಧಿಸಿ ಉಡುಪಿ ನಗರ ಠಾಣೆಯಲ್ಲಿ ಅಸಹಜ ಸಾವು ಎಂದು ಮಾತ್ರ ಪ್ರಕರಣ ದಾಖಲಾಗಿದೆ. ರಕ್ಷಿತಾ ಹೆತ್ತವರು ಕೂಡ, ಪ್ರಶಾಂತ್ ಕುಂದರ್ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿಲ್ಲ. ಹೀಗಾಗಿ ಪೊಲೀಸರು ಸದ್ಯಕ್ಕೆ ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದರೂ, ಪ್ರಕರಣ ದಾಖಲಿಸಿಕೊಳ್ಳಲು ಸಾಕ್ಷ್ಯದ ಹುಡುಕಾಟದಲ್ಲಿದ್ದಾರೆ.
ರಕ್ಷಿತಾಳನ್ನು ಆಸ್ಪತ್ರೆಗೆ ಕರೆತಂದಿದ್ದ ವೇಳೆ ಆಕೆಯ ಕುತ್ತಿಗೆ ಬಿಗಿದ ರೀತಿ ಇತ್ತು. ರಕ್ತ ಹೆಪ್ಪುಗಟ್ಟಿದ್ದರಿಂದ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಶವದ ಪೋಸ್ಟ್ ಮಾರ್ಟಂ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿದೆಯೇ ಅಥವಾ ನೇಣಿಗೆ ಶರಣಾಗಿದ್ದಳೇ ಅನ್ನುವ ಬಗ್ಗೆ ವರದಿ ಬರಲಿದೆ. ವರದಿ ಆಧರಿಸಿ ಪ್ರಶಾಂತ್ ಕುಂದರ್ ವಿರುದ್ಧ ಕೇಸು ದಾಖಲಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಹದಿಹರೆಯದಲ್ಲಿ ಹಾದಿ ತಪ್ಪಿದ ರಕ್ಷಿತಾ !
ಹಿರಿಯಡ್ಕ ಠಾಣೆ ವ್ಯಾಪ್ತಿಯ ಕುಕ್ಕೆಹಳ್ಳಿ ನಿವಾಸಿಯಾಗಿರುವ ರಕ್ಷಿತಾ ನಾಯಕ್, ದ್ವಿತೀಯ ಬಿಕಾಂ ಕಲಿಯುತ್ತಿದ್ದಳು. ಆದರೆ, ಮನೆಯವರಿಂದ ದೂರ ಇದ್ದುದರಿಂದ ಹದಿಹರೆಯದ ವಯಸ್ಸಲ್ಲಿ ಹಾದಿ ತಪ್ಪಿದ್ದಾಳೆ. ಪ್ರೀತಿ, ಪ್ರೇಮದ ಹಿಂದೆ ಬಿದ್ದು ಬದುಕು ಕಳಕೊಂಡಿದ್ದಾಳೆ ಎನ್ನಲಾಗುತ್ತಿದೆ. ಜಾಲತಾಣದಲ್ಲಿ ಚಿತ್ರ ವಿಚಿತ್ರ ಫೋಟೋಗಳನ್ನು ಹಾಕುತ್ತಿದ್ದುದು ಮತ್ತು ಆಕೆಯ ಈ ವರ್ತನೆ ಬಗ್ಗೆ ಮನೆಯವರಿಗೂ ಅಸಮಾಧಾನ ಇತ್ತು. ಈ ಬಗ್ಗೆ ಗದರಿದ್ದರಿಂದ ಗೆಳತಿಯರ ಜೊತೆ ಉಡುಪಿಯಲ್ಲಿ ರೂಂ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಳು. ಈಗ ಪ್ರಶಾಂತ್ ಜೊತೆಗೆ ಮನೆ ಮಾಡಿಕೊಂಡಿರುವ ವಿಚಾರ ತಿಳಿದು ಮನೆಯವರು ಆಘಾತಗೊಂಡಿದ್ದಾರೆ.
Rakshitha Nayak death case of Udupi has got a major twist after her boyfriend makes shocking statements to the Udupi city police during the investigation.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 03:23 pm
HK News Desk
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
05-08-25 04:29 pm
Mangalore Correspondent
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
Mangalore Congress: ಮೆಸ್ಕಾಂ ನೌಕರರ ಪಿಂಚಣಿಗೆ ಗ್...
04-08-25 09:51 pm
Dharmasthala Case, SIT, Body Found: ಬಂಗ್ಲೆಗುಡ...
04-08-25 07:38 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm