ಬ್ರೇಕಿಂಗ್ ನ್ಯೂಸ್
28-10-20 03:24 pm Headline Karnataka News Network ಕ್ರೈಂ
ಲಕ್ನೋ, ಅಕ್ಟೋಬರ್ 28 : ಉದ್ಯಮಿಯೊಬ್ಬರ ಕಿರುಕುಳ ಮತ್ತು ಬ್ಲಾಕ್ ಮೇಲ್ ಸಹಿಸಲಾಗದೆ 16 ವರ್ಷದ ಯುವತಿಯೊಬ್ಬಳು ಕಟ್ಟಡದಿಂದ ಹಾರಿ ಪ್ರಾಣ ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ನಡೆದಿದೆ.
ಮೊದಮೊದಲು ಯುವತಿಯ ತಂದೆ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು ತನಿಖೆಯಿಂದ ಆಕೆಗೆ ಉದ್ಯಮಿಯೊಬ್ಬರು ಕಿರುಕುಳ ನೀಡುತ್ತಿದ್ದಾರೆ ಎಂಬುದು ತಿಳಿದುಬಂದಿದೆ.
ಮೂರು ವರ್ಷದ ಹಿಂದೆ ಯುವತಿಯ ಕುಟುಂಬ ಉದ್ಯಮಿಯ ಸ್ಥಳದಲ್ಲಿ ಬಾಡಿಗೆಗಿದ್ದರು. ಆಬಳಿಕ ಬೇರೆ ಮನೆ ಮಾಡಿಕೊಂಡಿದ್ದರು. ಕೆಲ ದಿನಗಳ ಹಿಂದೆ ಯುವತಿ ಉದ್ಯಮಿಯ ಅಂಗಡಿಗೆ ಹೋಗಿದ್ದ ಕಾರಣಕ್ಕಾಗಿ ತಾಯಿಯಿಂದ ಹೊಡೆತ ತಿಂದಿದ್ದಳು.
ಅಕ್ಟೋಬರ್ 26 ರಂದು ಯುವತಿಯ ತಾಯಿ ಮತ್ತು ಸಹೋದರ ಆಸ್ಪತ್ರೆಗೆ ತಪಾಸಣೆಗೆಂದು ಹೋಗಿದ್ದ ಸಂದರ್ಭದಲ್ಲಿ ಯುವತಿ ನಿರ್ಮಾಣ ಹಂತದ ಕಟ್ಟಡ ಏರಿ ಮೇಲಿನಿಂದ ಜಿಗಿದು ಸಾವನ್ನಪ್ಪಿದ್ದಾಳೆ.
ಮನೆಗೆ ಬಂದ ತಾಯಿ ಹಾಗು ಸಹೋದರರಿಗೆ ಸ್ಥಳೀಯರು ಯುವತಿಯ ಸಾವಿನ ವಿಷಯವನ್ನು ತಿಳಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು ಆತನ ಮೊಬೈಲ್ ಫೋನ್ನಲ್ಲಿ ಅವಳನ್ನು ಬ್ಲ್ಯಾಕ್ ಮೇಲ್ ಮಾಡಲು ಬಳಸುತ್ತಿದ್ದ ಫೋಟೋಗಳು ಪತ್ತೆಯಾಗಿದ್ದವು.
ಅಕ್ಟೋಬರ್ 27 ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಓಂ ಪ್ರಕಾಶ್ ಸಿಂಗ್ ಹೇಳಿದ್ದಾರೆ. ಆರೋಪಿಯ ಮೇಲೆ ಲೈಂಗಿಕ ಕಿರುಕುಳ ಮತ್ತು ಆತ್ಮಹತ್ಯೆಗೆ ಸಹಾಯ ಮಾಡಿರುವ ಆರೋಪ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
A 16-year-old girl was hacked to death allegedly for lodging a molestation complaint with the police against the nephew of a village 'pradhan' (panchayat chief) in Uttar Pradesh's Baharaich district, about 200 kilometres from here.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 03:23 pm
HK News Desk
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
05-08-25 04:29 pm
Mangalore Correspondent
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
Mangalore Congress: ಮೆಸ್ಕಾಂ ನೌಕರರ ಪಿಂಚಣಿಗೆ ಗ್...
04-08-25 09:51 pm
Dharmasthala Case, SIT, Body Found: ಬಂಗ್ಲೆಗುಡ...
04-08-25 07:38 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm