ಬ್ರೇಕಿಂಗ್ ನ್ಯೂಸ್
26-10-20 02:10 pm Udupi Correspondent ಕ್ರೈಂ
ಉಡುಪಿ, ಅಕ್ಟೋಬರ್ 26: ಯುವತಿಯನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿ ನಾಪತ್ತೆಯಾಗಿದ್ದ ಯುವಕನನ್ನು ಹಿರಿಯಡ್ಕ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅಸ್ವಸ್ಥಳಾಗಿದ್ದ ಯುವತಿಯನ್ನು ಶನಿವಾರ ಸಂಜೆ ಗಾಂಧಿ ಆಸ್ಪತ್ರೆಗೆ ಕರೆತಂದಿದ್ದ ಯುವಕ ಪ್ರಶಾಂತ್ ಕುಂದರ್ ಎಂಬಾತ ಅಲ್ಲಿಂದ ದಿಢೀರ್ ನಾಪತ್ತೆಯಾಗಿದ್ದ. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸಾವನ್ನಪ್ಪಿದ್ದಳು. ಯುವತಿಯ ಕುತ್ತಿಗೆಯ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದ ರೀತಿ ಇದ್ದುದರಿಂದ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಯುವತಿ ಮನೆಯವರು ಆಘಾತಗೊಂಡಿದ್ದಲ್ಲದೆ, ಪುತ್ರಿಯ ಸಾವಿನ ಬಗ್ಗೆ ಏನು ಹೇಳುವುದೆಂದು ತೋಚದಾಗಿದ್ದರು.
ಯುವತಿ ಸಾವಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನ ಕೇಳಿಬರುತ್ತಿದ್ದರೂ, ಮನೆಯವರು ಶಂಕೆ ವ್ಯಕ್ತಪಡಿಸಿ ದೂರನ್ನು ದಾಖಲಿಸಿಲ್ಲ ಎನ್ನುವ ವಿಚಾರ ಗೊತ್ತಾಗಿದೆ. ಹೀಗಾಗಿ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುವ ಬಗ್ಗೆ ಹಿಂದೆ ಮುಂದೆ ನೋಡುತ್ತಿದ್ದಾರೆ. ಅಲ್ಲದೆ, ಬಂಧನ ಅಂತ ತೋರಿಸುವುದಕ್ಕೂ ಸಾಧ್ಯವಾಗಲ್ಲ ಎನ್ನುತ್ತಿದ್ದಾರೆ. ಸಾರ್ವಜನಿಕ ಅನುಮಾನಕ್ಕೆ ಕಾರಣವಾದ ಪ್ರಕರಣದಲ್ಲಿ ಪೊಲೀಸರಿಗೆ ಸುಮೊಟೋ ಕೇಸು ದಾಖಲಿಸುವ ಅವಕಾಶ ಇದೆ. ಅದನ್ನು ಮಾಡುತ್ತಾರೋ ಗೊತ್ತಿಲ್ಲ.
ಆತನಿಗೆ ಬೇರೆ ಮದುವೆಯಾಗಿತ್ತು !
ಯುವತಿಯನ್ನು ಆಸ್ಪತ್ರೆಗೆ ತಂದು ಬಿಟ್ಟುಹೋಗಿದ್ದ ಯುವಕ ಪ್ರಶಾಂತ್ ಕುಂದರ್ ಗೆ ಬೇರೆ ಮದುವೆಯಾಗಿತ್ತು. ಅಲ್ಲದೆ, ಉಪ್ಪೂರಿನಲ್ಲಿ ಪತ್ನಿಯ ಜೊತೆ ಬಾಡಿಗೆ ಮನೆ ಮಾಡಿಕೊಂಡಿದ್ದಾನೆ. ಉಡುಪಿಯಲ್ಲಿ ಫರ್ನಿಚರ್ ಶಾಪ್ ಒಂದರಲ್ಲಿ ಕೆಲಸಕ್ಕಿದ್ದ ಎನ್ನುವ ಮಾಹಿತಿ ತಿಳಿದುಬಂದಿದೆ.
ಮಾಡೆಲಿಂಗ್ ಹುಚ್ಚು ಕಟ್ಟಿಕೊಂಡಿದ್ದ ಹುಡುಗಿ
ಮಣಿಪಾಲದ ಖಾಸಗಿ ಕಾಲೇಜು ಒಂದರಲ್ಲಿ ಬಿಕಾಂ ಕಲಿಯುತ್ತಿದ್ದ ರಕ್ಷಿತಾ ನಾಯಕ್, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ಟಿವ್ ಆಗಿದ್ದಳು. ಅದರಲ್ಲೂ ಇನ್ ಸ್ಟಾ ಗ್ರಾಮಿನಲ್ಲಿ ತನ್ನ ಥರಾವರಿ ಫೋಟೋಗಳನ್ನು ಹಾಕ್ಕೊಂಡು ಭಾರೀ ಫಾಲೋವರ್ಸ್ ಗಳಿಸಿದ್ದರು. ಆಕೆಯ ಹುಚ್ಚು ನೋಡಿ 40 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಗಳಾಗಿದ್ದರಂತೆ. ಉಡುಪಿಯಿಂದ 15 ಕಿಮೀ ದೂರದಲ್ಲಿರುವ ಹಿರಿಯಡ್ಕ ಬಳಿಯ ಕುಕ್ಕೆಹಳ್ಳಿ ಗ್ರಾಮದ ನಿವಾಸಿಯಾಗಿರುವ ರಕ್ಷಿತಾಳದ್ದು ತೀರಾ ಮಧ್ಯಮ ವರ್ಗದ ಕುಟುಂಬ. ಆದರೆ, ಒಂದೂವರೆ ವರ್ಷದಿಂದ ಉಡುಪಿಯಲ್ಲಿ ರೂಂ ಮಾಡಿಕೊಂಡಿದ್ದು 15 ದಿನಕ್ಕೊಮ್ಮೆ ಮನೆಗೆ ಹೋಗಿ ಬರುತ್ತಿದ್ದಳು ಎನ್ನಲಾಗಿದೆ. ತಾನು ಮಾಡೆಲ್ ಆಗ್ತೀನಿ ಎಂದು ಹುಚ್ಚು ಕಟ್ಟಿಕೊಂಡಿದ್ದ ರಕ್ಷಿತಾ ಜಾಲತಾಣದಲ್ಲಿ ಅರ್ಧಂಬರ್ಧ ತೋಳಿನ ಅಂಗಿಗಳನ್ನು ಧರಿಸಿ, ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಳು. ಇದು ಮನೆಯವರಿಗೆ ಇಷ್ಟವಾಗುತ್ತಿರಲಿಲ್ಲ.
ಅಂತೆ ಕಂತೆಗಳಿಗೆ ಉತ್ತರ ಬೇಕಲ್ಲ ?
ಈ ನಡುವೆ, ಪ್ರಶಾಂತ್ ಕುಂದರ್ ಮತ್ತು ರಕ್ಷಿತಾ ನಡುವೆ ಪರಿಚಯ ಆಗಿದ್ದು ಸಂಬಂಧ ಬೆಳೆದಿದೆ ಎನ್ನಲಾಗುತ್ತಿದೆ. ಉಡುಪಿಯ ಅಂಬಾಗಿಲಿನಲ್ಲಿ ರೂಂ ಮಾಡಿಕೊಂಡಿದ್ದ ರಕ್ಷಿತಾ ಮನೆಗೆ ಬಂದು ಹೋಗುತ್ತಿದ್ದ. ಆದರೆ, ಇತ್ತೀಚೆಗೆ ಗಂಡನ ಸಂಬಂಧದ ವಿಚಾರ ಅರಿತ ಪ್ರಶಾಂತ್ ಪತ್ನಿ, ರಕ್ಷಿತಾಳಿಗೆ ಫೋನ್ ಮಾಡಿ ದಬಾಯಿಸಿದ್ದಾಳೆ. ಹೀಗಾಗಿ ನೊಂದುಕೊಂಡಿದ್ದ ಹುಡುಗಿ ಆತ್ಮಹತ್ಯೆಗೆ ಯತ್ನಿಸಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಯುವತಿಯ ಕುತ್ತಿಗೆಯಲ್ಲಿ ರಕ್ತ ಹೆಪ್ಪುಗಟ್ಟಿದ ಕಲೆಗಳಿದ್ದುದರಿಂದ ಪೋಸ್ಟ್ ಮಾರ್ಟಂ ವರದಿ ಬಂದ ಬಳಿಕವೇ ಸಾವಿನ ಕಾರಣ ತಿಳಿಯಬಹುದಷ್ಟೆ. ಆದರೆ, ಒಟ್ಟು ವೃತ್ತಾಂತವನ್ನು ಪ್ರಶಾಂತ್ ಕುಂದರ್ ಒಬ್ಬನೇ ಹೇಳಬೇಕಷ್ಟೆ..
A young woman Rakshitha Nayak died under suspicious circumstances in a private hospital in Udupi. The man who was absconding Prashanth Kunder has been arrested by Udupi police.
02-05-25 01:40 pm
Bangalore Correspondent
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:10 pm
Mangalore Correspondent
Udupi crime, Attempt, Suhas Shetty Murder: ಉಡ...
02-05-25 12:44 pm
Suhas Shetty Murder, Liquor Ban: ಸುಹಾಸ್ ಶೆಟ್ಟ...
02-05-25 12:23 pm
Suhas Shetty Murder, Bajpe, Mangalore: ಟಾರ್ಗೆ...
02-05-25 03:52 am
Suhas Shetty murder, Mangalore Bandh: ಸುಹಾಸ್...
02-05-25 03:29 am
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm