ಬ್ರೇಕಿಂಗ್ ನ್ಯೂಸ್
29-03-23 01:27 pm HK News Desk ಕ್ರೈಂ
ಕೋಲ್ಕತಾ, ಮಾ.29: ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ವ್ಯಕ್ತಿಯೊಬ್ಬ ತನಗೆ ಮಕ್ಕಳಾಗಬೇಕೆಂದು ಪಕ್ಕದ ಮನೆಯ ಏಳು ವರ್ಷದ ಬಾಲಕಿಯನ್ನು ಅಪಹರಿಸಿ, ನರಬಲಿ ನೀಡಿದ ಘಟನೆ ವರದಿಯಾಗಿದ್ದು, ಏಳು ವರ್ಷದ ಬಾಲಕಿಯ ಶವ ಚೀಲವೊಂದರಲ್ಲಿ ಪತ್ತೆಯಾಗಿದೆ. ಇದು ಕೋಲ್ಕತಾದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ವ್ಯಾಪಕ ಪ್ರತಿಭಟನೆಗಳು ನಡೆದಿವೆ.
ಕೋಲ್ಕತಾದ ತಿಲ್ಜಲಾ ಪ್ರದೇಶದಿಂದ ನೆರೆಮನೆಯ ಅಲೋಕ್ ಕುಮಾರ್ ಎಂಬಾತನಿಂದ ಅಪಹೃತಳಾಗಿದ್ದ ಬಾಲಕಿಯ ಶವ, ಆತನ ಫ್ಲ್ಯಾಟ್‌ನಲ್ಲಿ ಮೂಟೆಯೊಂದರಲ್ಲಿ ಪತ್ತೆಯಾಗಿತ್ತು. ಭಾನುವಾರ ಬೆಳಿಗ್ಗೆಯಿಂದ ಬಾಲಕಿ ನಾಪತ್ತೆಯಾಗಿದ್ದಳು. ಈ ಸಂಬಂಧ 32 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ.
ಈ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗವು (ಎನ್‌ಸಿಪಿಸಿಆರ್), ಪಶ್ಚಿಮ ಬಂಗಾಳ ಡಿಜಿಪಿಗೆ ಪತ್ರ ಬರೆದಿದ್ದು, 48 ಗಂಟೆಗಳ ಒಳಗೆ ವಿಸ್ತೃತ ವರದಿ ನೀಡುವಂತೆ ಸೂಚಿಸಿದೆ.

ವಾಹನಗಳನ್ನು ಧ್ವಂಸಗೊಳಿಸಿದ ಜನರು;
ಅಪ್ರಾಪ್ತ ವಯಸ್ಸಿನ ಬಾಲಕಿಯ ಅಪಹರಣ ಮತ್ತು ಭಯಾನಕ ಹತ್ಯೆ ವಿರುದ್ಧ ಸ್ಥಳೀಯರು ನಡೆಸಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಸ್ಥಳೀಯರು ಅನೇಕ ವಾಹನಗಳನ್ನು ಧ್ವಂಸಗೊಳಿಸಿ, ಬೆಂಕಿ ಹಚ್ಚಿದ್ದಾರೆ. ಅಪಹೃತ ಬಾಲಕಿಯ ಪತ್ತೆಗೆ ಪೊಲೀಸರು ಕೂಡಲೇ ಮುಂದಾಗದೆ ತಡ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಘರ್ಷಣೆ ಸಂಬಂಧ ಒಬ್ಬ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಪ್ರತಿಭಟನಾ ಸ್ಥಳದ ಕೆಲವು ವಿಡಿಯೋಗಳನ್ನು ಹಂಚಿಕೊಂಡಿರುವ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ, ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ನಿರ್ವಹಿಸಲು ಮಮತಾ ಬ್ಯಾನರ್ಜಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಬಾಲಕಿಯನ್ನು ಬಲಿಕೊಡಲು ಹೇಳಿದ್ದ ಮಂತ್ರವಾದಿ;
ಮಂತ್ರವಾದಿ ಒಬ್ಬನ ಸಲಹೆಯಂತೆ ಬಾಲಕಿಯನ್ನು ಬಲಿಕೊಟ್ಟಿರುವುದಾಗಿ ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ತನಗೆ ಮಗು ಆಗುತ್ತಿಲ್ಲ ಎಂದು ಕೆಲವು ತಿಂಗಳ ಹಿಂದೆ ಬಿಹಾರದ ಮಂತ್ರವಾದಿಯೊಬ್ಬನನ್ನು ಭೇಟಿ ಮಾಡಿದ್ದಾಗಿ ತಿಳಿಸಿರುವ ಅಲೋಕ್ ಕುಮಾರ್, ತನ್ನದೇ ಸ್ವಂತ ಮಗು ಬೇಕೆಂದರೆ ನವರಾತ್ರಿ ಅವಧಿಗೂ ಮುನ್ನ ಬಾಲಕಿಯೊಬ್ಬಳನ್ನು ಬಲಿ ಕೊಡಬೇಕು ಎಂದು ಸಲಹೆ ಕೊಟ್ಟಿದ್ದ ಎಂದು ಹೇಳಿದ್ದಾನೆ.
ಬಿಹಾರದ ಸಮಷ್ಠಿಪುರದ ಮೂಲದವನಾಗಿದ್ದು, ಕೋಲ್ಕತಾದಲ್ಲಿ ನೆಲೆಸಿರುವ ಅಲೋಕ್ ಕುಮಾರ್, ಮಂತ್ರವಾದಿಯ ಸಲಹೆಯಂತೆ ಬಾಲಕಿಯನ್ನು ಅಪಹರಿಸಿದ್ದ. ಬಳಿಕ ತನ್ನ ಫ್ಲ್ಯಾಟ್‌ನಲ್ಲಿ ಆಕೆಯ ಕತ್ತು ಹಿಸುಕಿ ಭಯಾನಕವಾಗಿ ಕೊಂದಿದ್ದ. ಬಾಲಕಿಯ ತಲೆಗೆ ಗಂಭೀರ ಗಾಯವಾಗಿದ್ದು, ಸುತ್ತಿಗೆಯಿಂದ ಹೊಡೆದಿರಬಹುದು ಎಂದು ಅನುಮಾನಿಸಲಾಗಿದೆ. ಆಕೆಯ ಗುಪ್ತಾಂಗಗಳಲ್ಲಿ ಕೂಡ ಗಾಯದ ಕಲೆಗಳಿದ್ದವು.
A man accused of killing a 7-year-old neighbour in Kolkata’s Tiljala area has confessed that he killed the minor on the advice of a tantrik, claimed a police source. According to the source, Alok Kumar said to fulfil his desire to have a child, he met a tantrik in Bihar a few months ago. The trantrik had instructed him to sacrifice a minor by Navratri if he wished to have a biological child.
10-06-26 10:40 pm
HK News Desk
ನಿಮ್ಮಪ್ಪನಿಂದಲೇ ಆರ್ಎಸ್ಎಸ್ಗೆ ಏನು ಮಾಡೋಕೆ ಆಗಿಲ...
09-06-26 07:04 pm
ವಿಧಾನ ಪರಿಷತ್ ಚುನಾವಣೆ ; ಕಾಂಗ್ರೆಸ್ ಐದನೇ ಅಭ್ಯರ್ಥ...
09-06-26 01:27 pm
Krishna Byre Gowda: ಡಿಕೆಶಿ ಸಂಪುಟದಲ್ಲಿ ಮತ್ತೊಂದ...
08-06-26 12:37 pm
ರಾಮಲಿಂಗಾರೆಡ್ಡಿ ರಾಜೀನಾಮೆ ಡ್ರಾಮಾಗೆ ಟ್ವಿಸ್ಟ್ ; ಡ...
06-06-26 12:49 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
10-06-26 10:03 pm
HK News Staffer
ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ; ರೈತರ ಕಷ್ಟಕ್ಕ...
10-06-26 05:07 pm
ಜೂನ್ 12ರಂದು ಮೊದಲ ಬಾರಿಗೆ ಕೊಲ್ಲೂರು ಮೂಕಾಂಬಿಕೆ ಸನ...
10-06-26 04:19 pm
Yedapadavu Highway News: ಮಂಗಳೂರು- ಮೂಡುಬಿದ್ರೆ...
09-06-26 08:58 pm
Mangalore: ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿ...
09-06-26 06:15 pm
10-06-26 01:48 pm
HK News Staffer
Udupi Fight, Temple Parking: ಗಾಡಿಗೆ ಸೈಡ್ ಕೊಡು...
10-06-26 12:09 pm
ಬೆಳ್ತಂಗಡಿ ಪೊಲೀಸರ ಭರ್ಜರಿ ಕಾರ್ಯಚರಣೆ ; ಮನೆಗಳಿಗೆ...
09-06-26 05:03 pm
Mangalore Blackmail, crime, Honeytrap: ಸಲಿಂಗಕ...
09-06-26 10:26 am
ಬಂಟ, ಬಿಲ್ಲವ ಜಾತಿಗಳ ಬಗ್ಗೆ ಅವಹೇಳನ ಹೇಳಿಕೆ ; ಸಾಮಾ...
08-06-26 11:10 pm