ಬ್ರೇಕಿಂಗ್ ನ್ಯೂಸ್
11-03-23 04:31 pm Mangalore Correspondent ಕ್ರೈಂ
ಮಂಗಳೂರು, ಮಾ.11 : ಪೊಲೀಸ್ ಅಂತ ಹೇಳಿ ಸಿನಿಮಾ ನಟಿಯೋರ್ವಳ ತಾಯಿಯನ್ನು ಬ್ಲಾಕ್ಮೇಲ್ ಮಾಡಿ ಹಣ ಪೀಕಿದ ವ್ಯಕ್ತಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಕಾವೂರು ಈಶ್ವರ ನಗರ ನಿವಾಸಿ ಶಿವರಾಜ್ ದೇವಾಡಿಗ ಬಂಧಿತ ಆರೋಪಿ.
ತನ್ನನ್ನು ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯ ಪೊಲೀಸ್ ಎಂದು ಪರಿಚಯಿಸಿ ಮಹಿಳೆಯ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬ ಬ್ಲಾಕ್ಮೇಲ್ ಮಾಡಿದ್ದಾನೆ. ನಿಮ್ಮಲ್ಲಿ ನಗದು ಹಣ ಇದೆ, ಬಂಗಾರ ಇದೆಯೆಂದು ದೂರು ಬಂದಿದೆ. ಕಮಿಷನರ್ ಸಾಹೇಬ್ರ ಬಳಿಗೆ ನಿಮ್ಮ ಕೇಸ್ ಹೋಗಿದೆ, ಹಣ ಕೊಟ್ಟರೆ ಪ್ರಕರಣ ಮುಚ್ಚಿ ಹಾಕ್ತೀನಿ ಎಂದು ಹೇಳಿದ್ದ. ತನ್ನನ್ನು ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸ್ ಶಿವರಾಜ್ ದೇವಾಡಿಗ ಅಂತಾ ಪರಿಚಯ ಹೇಳಿಕೊಂಡಿದ್ದ. ಸಾಹೇಬ್ರು ಈಗ ರೈಡ್ ಮಾಡ್ತಾರೆ, ಗೂಗಲ್ ಪೇ ಮಾಡಿ ಹಣ ಕೊಟ್ಟರೆ ರೈಡ್ ಮಾಡಲ್ಲ ಅಂತ ಹೇಳಿದ್ದ.
ಆನಂತರ ತನ್ನ ನಂಬರಿನಿಂದ ಕರೆ ಮಾಡಿ ಅದೇ ನಂಬರ್ ಗೆ ಆನ್ಲೈನ್ ಮೂಲಕ ಹಣ ಹಾಕಿಸಿಕೊಂಡಿದ್ದ. ಮೊದಲಿಗೆ 20 ಸಾವಿರ, ಆನಂತರ 18 ಸಾವಿರ ಹೀಗೆ ಒಟ್ಟು 38 ಸಾವಿರ ಹಣ ನೀಡಿದ್ದರು. ಅಲ್ಲದೆ, ಸಾಹೇಬ್ರ ಜೊತೆ ಸಹಕರಿಸಿದ್ರೆ ತೊಂದರೆ ಆಗಲ್ಲ ಅಂತ ಹೇಳಿದ್ದ.
ಪೊಲೀಸರ ರೀತಿ ಸಮವಸ್ತ್ರ, ಖಾಕಿ ಶೂ ಹಾಕಿ ಬಂದು ಬೆದರಿಸಿದ್ದರಿಂದ ಹೆದರಿದ್ದ ಮಹಿಳೆ, ಹಣ ಕೊಟ್ಟಿದ್ದರು. ಅಲ್ಲದೆ, ಹೊಸ ಕಮಿಷನರ್ ಬಂದಿದ್ದಾರೆ, ಅವರ ಟೇಬಲ್ ಮೇಲೆ ಫೈಲ್ ಇದೆ. ಕೇಸ್ ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದಿದ್ದ. ಈ ಬಗ್ಗೆ ಮಹಿಳೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು. ಪೊಲೀಸರ ಸೋಗಿನಲ್ಲಿ ಹಣ ಪೀಕಿಸಿದ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಮಹಿಳೆಯನ್ನು ಸಂಪರ್ಕಿಸಿದ ಪೊಲೀಸರು ಆರೋಪಿ ಪತ್ತೆ ಮಾಡಿದ್ದಾರೆ. ಬಳಿಕ ಮಹಿಳೆಯಿಂದ ದೂರು ಪಡೆದು ಆರೋಪಿ ವಿರುದ್ಧ ಕೇಸು ದಾಖಲಿಸಿದ್ದಾರೆ.
Mangalore Man arrested for blackmailing women who is a mother of Kannada actress running a beauty parlour in city. The accused was posing as pandeshwar police constable and blackmailing her of raid.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 08:26 pm
HK News Staffer
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am