ಬ್ರೇಕಿಂಗ್ ನ್ಯೂಸ್
02-03-23 09:29 pm Bangalore Correspondent ಕ್ರೈಂ
ಬೆಂಗಳೂರು, ಮಾ.2: ಅಪಾರ್ಟ್ಮೆಂಟ್ ಮೇಲೆ 15 ಕೋಟಿ ಸಾಲ ಇದೆಯೆಂದು ಹೇಳಿ ಬ್ಯಾಂಕ್ ಸಿಬಂದಿ ಏಕಾಏಕಿ ನ್ಯಾಯಾಲಯದ ಆದೇಶದ ನೆಪದಲ್ಲಿ 29 ಮನೆಗಳನ್ನು ಸೀಜ್ ಮಾಡಿ, ನೂರಕ್ಕೂ ಹೆಚ್ಚು ಮಂದಿಯನ್ನು ಬೀದಿಗೆ ತಳ್ಳಿದ ಘಟನೆ ರಾಜಾಜಿನಗರದಲ್ಲಿ ನಡೆದಿದೆ.
ರಾಜಾಜಿನಗರದ ಶಿವನಹಳ್ಳಿಯ ಐಶ್ವರ್ಯ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದೆ. ಶಿವಣ್ಣ ಎಂಬವರಿಗೆ ಸೇರಿದ ಅಪಾರ್ಟ್ಮೆಂಟ್ ಇದಾಗಿದ್ದು, ಬ್ಯಾಂಕ್ ಸಾಲ ಮರುಪಾವತಿ ಮಾಡಿಲ್ಲವೆಂದು ಅಲ್ಲಿರುವ ಮನೆಗಳನ್ನು ಜಪ್ತಿ ಮಾಡಿದ್ದಾರೆ. ಇದರಿಂದ 25 ವರ್ಷಗಳಿಂದ ಮನೆಗಳನ್ನು ಲೀಸ್ ಪಡೆದಿದ್ದವರು ಶಾಕ್ ಆಗಿದ್ದಾರೆ. 29 ಮನೆಗಳ ಸಂಸಾರವನ್ನು ಏಕಾಏಕಿ ಬ್ಯಾಂಕ್ ಸಿಬಂದಿ ಮತ್ತು ಜೊತೆಗೆ ಬಂದಿದ್ದ ಮೂರನೇ ವ್ಯಕ್ತಿಗಳು ದೌರ್ಜನ್ಯ ನಡೆಸಿ ಬೀದಿಗೆ ತಳ್ಳಿದ್ದಾರೆ. ಮನೆಮಂದಿ ಕೂಡಲೇ ಮನೆ ಖಾಲಿ ಮಾಡಬೇಕೆಂದು ಹೇಳಿ ದೌರ್ಜನ್ಯ ಎಸಗಿದ್ದಾರೆ.

ಅಪಾರ್ಟ್ಮೆಂಟ್ ಹೆಸರಲ್ಲಿ ಕೆನರಾ ಬ್ಯಾಂಕ್ ನಿಂದ 15 ಕೋಟಿ ಸಾಲ ಪಡೆದಿದ್ದಾರೆ ಎನ್ನಲಾಗುತ್ತಿದೆ. ಬಹುತೇಕ ಎಲ್ಲ ಕುಟುಂಬದವರು ಮನೆಗಳನ್ನು ಲೀಸ್ ಮೇಲೆ ಪಡೆದಿದ್ದು, ಈಗ ಏಕಾಏಕಿ ಎದ್ದು ಹೋಗಿ ಅಂದರೆ ಎಲ್ಲಿ ಹೋಗುವುದು ಎಂದು ಕಂಗಾಲಾಗಿದ್ದಾರೆ. ಮಾಲೀಕರು ಮಾಡಿದ ದೋಖಾಗೆ ಮನೆಗಳನ್ನು ಭೋಗ್ಯಕ್ಕೆ ಪಡೆದವರು ಈಗ ಸಿಕ್ಕಿಬೀಳುವಂತಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
25 ವರ್ಷಗಳಿಂದ ನಾವು ಮನೆಯಲ್ಲಿದ್ದೀವಿ, ಇದುವರೆಗೂ ಸಾಲದ ಬಗ್ಗೆ ನಮಗೆ ಗೊತ್ತಿಲ್ಲ, ಇಬ್ಬರು ಬ್ಯಾಂಕ್ ಸಿಬಂದಿ, ಥರ್ಡ್ ಪಾರ್ಟಿಯವರನ್ನು ಕರೆಸ್ಕೊಂಡು ಬಂದು ಮನೆ ಒಳಗಡೆ ನುಗ್ಗಿ ದಾಂಧಲೆ ನಡೆಸಿದ್ದಾರೆ, ಅಮ್ಮನ ಮೇಲೆ ಕಾಲಲ್ಲಿ ಒದ್ದಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಮಧ್ಯಾಹ್ನ ಹೊತ್ತಲ್ಲಿ ಬಂದು ದಾಂಧಲೆ ನಡೆಸಿದರೆ ಹೇಗೆ ಎಂದು ಮಾದೇಶ್ ಎಂಬವರು ಸುದ್ದಿ ವಾಹಿನಿಯ ಜೊತೆಗೆ ಅಲವತ್ತುಕೊಂಡಿದ್ದಾರೆ.
Big scam, 15 crore loan in the name of Aishwarya Apartment in Bengaluru, 29 flats seized by Bank in Bangalore, hundreds homeless. Flat residents were shocked after a sudden raid by bank officials.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 08:26 pm
HK News Staffer
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am