ಬ್ರೇಕಿಂಗ್ ನ್ಯೂಸ್
18-10-20 07:32 pm Headline Karnataka News Network ಕ್ರೈಂ
ತೆಲಂಗಾಣ, ಅಕ್ಟೋಬರ್. 18 : ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಬಗ್ಗೆ ದೇಶದೆಲ್ಲೆಡೆ ಆಕ್ರೋಶ ಹೆಚ್ಚುತ್ತಿದ್ದರೂ ಅತ್ಯಾಚಾರ ಕಮ್ಮಿ ಆಗುತ್ತಿಲ್ಲ. ತೆಲಂಗಾಣದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು, ಇಡೀ ಮಾನವ ಕುಲವನ್ನೇ ತಲೆತಗ್ಗಿಸಿದೆ.
ಅತ್ಯಾಚಾರ ವಿರೋಧಿಸಿದ ಕಾರಣಕ್ಕೆ 13 ವರ್ಷದ ಬುಡಕಟ್ಟು ಜನಾಂಗದ ಬಾಲಕಿಯನ್ನು ಮನೆ ಮಾಲೀಕನೇ ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ತೆಲಂಗಾಣದ ಖಮ್ಮಮ್ ನಲ್ಲಿ ನಡೆದಿದೆ.
ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ ಗುರುವಾರ ರಾತ್ರಿ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಬಾಲಕಿ ಕೊನೆಯುಸಿರೆಳೆದಿದ್ದಾಳೆ ಎಂದು ಖಮ್ಮಮ್ ಪೊಲೀಸ್ ಆಯುಕ್ತ ತಫ್ಸೀರ್ ಇಕ್ಬಾಲ್ ತಿಳಿಸಿದ್ದಾರೆ.
ಬಾಲಕಿಯನ್ನು ಮನೆ ಕೆಲಸಕ್ಕೆಂದು ಕರೆಸಿದ್ದ ಮನೆ ಮಾಲೀಕ ಆಕೆಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದು ಆಕೆ ವಿರೋಧಿಸಿದ್ದಾಳೆ. ಇದಕ್ಕಾಗಿ ಬಾಲಕಿಯನ್ನು ಪೆಟ್ರೋಲ್‌ನಿಂದ ಸುಟ್ಟು ಬೆಂಕಿ ಹಾಕಿದ್ದು, ದೇಹದ 70 ಶೇ. ಭಾಗ ಸುಟ್ಟು ಕರಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 18 ರಂದು ಈ ಘಟನೆ ಸಂಭವಿಸಿದ್ದು, ಅಕ್ಟೋಬರ್ 5 ರಂದು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಮಾಧ್ಯಮದಲ್ಲಿ ವಿಚಾರ ಹೊರಬರುತ್ತಿದ್ದಂತೆ ತೆಲಂಗಾಣ ರಾಜ್ಯ ಮಾನವ ಹಕ್ಕುಗಳ ಆಯೋಗ (ಟಿಎಸ್‌ಎಚ್‌ಆರ್‌ಸಿ) ಖಮ್ಮಮ್ ಪೊಲೀಸರಿಂದ ಘಟನೆ ಕುರಿತು ವರದಿ ಕೇಳಿದೆ.
ಇನ್ನು ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿ ಅಂಶದ ಪ್ರಕಾರ, ಭಾರತವು 2019ರಲ್ಲಿ ಪ್ರತಿದಿನ ಸರಾಸರಿ 87 ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿದ್ದು, ವರ್ಷದಲ್ಲಿ ಮಹಿಳೆಯರ ವಿರುದ್ಧ ಒಟ್ಟು 4,05,861 ಅಪರಾಧ ಪ್ರಕರಣಗಳು ದಾಖಲಾಗಿದೆ. 2018ಕ್ಕೆ ಹೋಲಿಕೆ ಮಾಡಿದರೆ 2019 ರಲ್ಲಿ ಶೇ 7 ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿದೆ ಎಂದು ತಿಳಿಸಿದೆ.
A 13-year-old girl, set on fire in Telangana last month allegedly after she ignored the sexual advances of a 26-year-old man at his house where she worked as a caretaker, died today at a hospital in Hyderabad.
03-08-25 10:52 am
HK News Desk
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
03-08-25 05:44 pm
HK News Desk
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm