ಬ್ರೇಕಿಂಗ್ ನ್ಯೂಸ್
11-01-23 12:02 pm HK News Desk ಕ್ರೈಂ
ವಾರಂಗಲ್, ಜ.11: ವಂಚಕನೊಬ್ಬ ಅನಾಥ ಭಿಕ್ಷುಕನೊಬ್ಬನಿಗೆ 50 ಲಕ್ಷ ರೂ.ಗಳ ವಿಮೆ ಮಾಡಿಸಿ, ವಿಮೆಯ ಹಣವನ್ನು ದೋಚಿಕೊಳ್ಳಲು ಪೊಲೀಸ್ ಪೇದೆ ಮತ್ತು ಸಹಚರರ ಮೂಲಕವೇ ಭಿಕ್ಷುಕನನ್ನು ಅಪಹರಿಸಿ ಭೀಕರವಾಗಿ ಕೊಲ್ಲಿಸಿದ ಆಘಾತಕಾರಿ ಘಟನೆ ತೆಲಂಗಾಣದ ವಾರಂಗಲ್‌ನಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಪೇದೆ ಸೇರಿದಂತೆ ನಾಲ್ವರನ್ನು ವಾರಂಗಲ್ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯನ್ನು ವಾರಂಗಲ್ ಜಿಲ್ಲೆಯ ಬೋಡಾ ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಇತರ ಮೂವರು ಆರೋಪಿಗಳಲ್ಲಿ ಮೋತಿಲಾಲ್ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಆಗಿದ್ದಾನೆ. ಇತರು ಸತೀಶ್ ಮತ್ತು ಸಾಮ್ಮಣ್ಣ.
ವಂಚಕ ಶ್ರೀಕಾಂತ್ ಬೋಡಾ ಕಳೆದ ಡಿಸೆಂಬರ್‌ನಲ್ಲಿ ಭಿಕ್ಷುಕನನ್ನು ಕೊಂದು ವಿಮೆ ಹಣ ಪಡೆಯಲು ಸಂಚು ಹೂಡಿದ್ದ. ವಿಮೆ ಕಂಪನಿಯೊಂದರಿಂದ ಆತನ ಹೆಸರಿನಲ್ಲಿ 50 ಲಕ್ಷ ರೂ.ಗೆ ವಿಮೆ ಮಾಡಿಸಿದ್ದ. ಬಳಿಕ ಪೊಲೀಸ್ ಕಾನ್‌ಸ್ಟೇಬಲ್ ಮೋತಿಲಾಲ್ ಮತ್ತು ಸಹಚರರನ್ನು ಭಿಕ್ಷುಕ ಹತ್ಯೆಗೆ ನಿಯೋಜಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಂಚಕನ ಪ್ಲಾನ್ ಪ್ರಕಾರ ಪೊಲೀಸ್ ಪೇದೆ ಮತ್ತು ಇತರರು ಭಿಕ್ಷುಕನನ್ನು ಕಾರಿನಲ್ಲಿ ಅಪಹರಿಸಿದ್ದರು. ಅತಿಯಾಗಿ ಮದ್ಯವನ್ನು ಕುಡಿಸಿದ ಬಳಿಕ ಭೀಕರವಾಗಿ ಕೊಂದು ಹಾಕಿದ್ದರು. ಬಳಿಕ ಹೆಣವನ್ನು ರಸ್ತೆಯಲ್ಲಿಟ್ಟು ಅದರ ಮೇಲೆ ಕಾರನ್ನು ಎರಡು ಸಲ ಹರಿಸಿ, ರಸ್ತೆ ಅಪಘಾತ ಎಂಬಂತೆ ಬಿಂಬಿಸಿದ್ದರು.
ಭಿಕ್ಷುಕನ ಶವದ ಮರಣೋತ್ತರ ಪರೀಕ್ಷೆಯ ವೇಳೆ ಪೊಲೀಸರಿಗೆ ಅನುಮಾನ ಉಂಟಾಗಿತ್ತು. ಸಾವಿಗೆ ಮುನ್ನ ಉಂಟಾಗಿದ್ದ ಗಾಯಗಳು ಸಂದೇಹಾಸ್ಪದವಾಗಿತ್ತು. ಈ ನಡುವೆ ಪ್ರಮುಖ ಆರೋಪಿ ಶ್ರೀಕಾಂತ್ ಬೋಡಾ ವಿಮೆ ಪರಿಹಾರ ಕ್ಲೇಮ್ ಮಾಡಿಕೊಳ್ಳಲು ವಿಮೆ ಕಂಪನಿಯನ್ನು ಸಂಪರ್ಕಿಸಿದ್ದ. ತನ್ನ ಕಾರಿನ ಚಾಲಕ ವಾಹನ ಚಲಾಯಿಸಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಆತ ಹೇಳಿದ್ದ. ಕ್ಲೇಮ್ ಅನ್ನು ಖಾತರಿಪಡಿಸಿಕೊಳ್ಳಲು ವಿಮೆ ಕಂಪನಿಯು ಪೊಲೀಸರನ್ನು ಸಂಪರ್ಕಿಸಿತ್ತು. ಆಗ ಪೊಲೀಸರ ಕೈಗೆ ಪಾತಕಿಗಳು ಸಿಕ್ಕಿಬಿದ್ದಿದ್ದಾರೆ.
In a shocking incident, a serial fraudster allegedly insured and got killed an orphan beggar to grab the insurance money in Telangana's Warangal in December, police said. Four persons including a police constable who led the hitsquad were arrested by Warangal Police.
10-06-26 10:40 pm
HK News Desk
ನಿಮ್ಮಪ್ಪನಿಂದಲೇ ಆರ್ಎಸ್ಎಸ್ಗೆ ಏನು ಮಾಡೋಕೆ ಆಗಿಲ...
09-06-26 07:04 pm
ವಿಧಾನ ಪರಿಷತ್ ಚುನಾವಣೆ ; ಕಾಂಗ್ರೆಸ್ ಐದನೇ ಅಭ್ಯರ್ಥ...
09-06-26 01:27 pm
Krishna Byre Gowda: ಡಿಕೆಶಿ ಸಂಪುಟದಲ್ಲಿ ಮತ್ತೊಂದ...
08-06-26 12:37 pm
ರಾಮಲಿಂಗಾರೆಡ್ಡಿ ರಾಜೀನಾಮೆ ಡ್ರಾಮಾಗೆ ಟ್ವಿಸ್ಟ್ ; ಡ...
06-06-26 12:49 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
10-06-26 10:03 pm
HK News Staffer
ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ; ರೈತರ ಕಷ್ಟಕ್ಕ...
10-06-26 05:07 pm
ಜೂನ್ 12ರಂದು ಮೊದಲ ಬಾರಿಗೆ ಕೊಲ್ಲೂರು ಮೂಕಾಂಬಿಕೆ ಸನ...
10-06-26 04:19 pm
Yedapadavu Highway News: ಮಂಗಳೂರು- ಮೂಡುಬಿದ್ರೆ...
09-06-26 08:58 pm
Mangalore: ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿ...
09-06-26 06:15 pm
10-06-26 01:48 pm
HK News Staffer
Udupi Fight, Temple Parking: ಗಾಡಿಗೆ ಸೈಡ್ ಕೊಡು...
10-06-26 12:09 pm
ಬೆಳ್ತಂಗಡಿ ಪೊಲೀಸರ ಭರ್ಜರಿ ಕಾರ್ಯಚರಣೆ ; ಮನೆಗಳಿಗೆ...
09-06-26 05:03 pm
Mangalore Blackmail, crime, Honeytrap: ಸಲಿಂಗಕ...
09-06-26 10:26 am
ಬಂಟ, ಬಿಲ್ಲವ ಜಾತಿಗಳ ಬಗ್ಗೆ ಅವಹೇಳನ ಹೇಳಿಕೆ ; ಸಾಮಾ...
08-06-26 11:10 pm