ಬ್ರೇಕಿಂಗ್ ನ್ಯೂಸ್
16-10-20 07:12 pm Mangaluru Correspondent ಕ್ರೈಂ
ಬೆಂಗಳೂರು, ಅಕ್ಟೋಬರ್ 16: ಬೆಂಗಳೂರಿನಲ್ಲಿ ಹತ್ಯೆಯಾದ ಮನೀಶ್ ಶೆಟ್ಟಿ ಮೂಲತಃ ಪಕ್ಕಾ ಕ್ರಿಮಿನಲ್. 2006ರಲ್ಲಿ ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದ ಚೆಮ್ಮನ್ನೂರು ಜುವೆಲ್ಲರಿ ದರೋಡೆ ಪ್ರಕರಣದಲ್ಲಿ ಮೊದಲ ಬಾರಿಗೆ ಈತನ ಹೆಸರು ಕೇಳಿಬಂದಿತ್ತು. ಅದಕ್ಕೂ ಮುನ್ನ ಮುಂಬೈನಲ್ಲಿ ದರೋಡೆ, ಕೊಲೆ, ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದರೂ, ಆತನ ಹೆಸರು ಕರ್ನಾಟಕದಲ್ಲಿ ದೊಡ್ಡ ಮಟ್ಟಿಗೆ ಕಳಿಬಂದಿದ್ದು ಚೆಮ್ಮನ್ನೂರು ದರೋಡೆ ಪ್ರಕರಣದಲ್ಲಿ.
ಬೆಂಗಳೂರಿನಲ್ಲಿ ಚೆಮ್ಮನ್ನೂರು ದರೋಡೆ ನಡೆಸಿದ ಬಳಿಕ ಮನೀಶ್ ಶೆಟ್ಟಿ ಸೇರಿದಂತೆ ಎಲ್ಲರೂ ತಮ್ಮ ತಮ್ಮ ಗೂಡು ಸೇರಿದ್ದರು. ದರೋಡೆಗೈದ ಕೇಜಿ ಗಟ್ಟಲೆ ಬಂಗಾರವನ್ನು ಪಾಲು ಮಾಡಿಕೊಂಡು ಮನೆ ಸೇರಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇ ಅಚಾನಕ್ಕಾಗಿ. ಹೌದು… ಇಡೀ ಪ್ರಕರಣ ಬಯಲಿಗೆ ಬಂದಿದ್ದೇ ಗುಜಿರಿ ವ್ಯಾಪಾರಿ ನೀಡಿದ್ದ ಸಣ್ಣ ಸುಳಿವಿನಿಂದ.
ಗುಜಿರಿ ವ್ಯಾಪಾರಿ ನೀಡಿದ್ದ ಸುಳಿವು
ಮೂಡುಬಿದ್ರೆಯ ಪೇಟೆಯಲ್ಲಿ ಬಾರ್ ಒಂದಿತ್ತು. ನವದೀಪ್ ಎನ್ನುವ ಬಾರ್ ನಲ್ಲಿ ದಿನವೂ ರಾತ್ರಿ ಕಡಂದಲೆಯ ಉಮೇಶ್ ಶೆಟ್ಟಿ ಎಂಬಾತ ತನ್ನ ಸಹಚರರೊಂದಿಗೆ ಸೇರಿ ಕುಡಿಯುತ್ತಿದ್ದ. ಜೊತೆಗಿದ್ದವವರಿಗೆ ಕುಡಿಸುವುದು, ವೈಟರ್ ಗೆ ನೂರು ಇನ್ನೂರು ರೂಪಾಯಿ ನೀಡುತ್ತಿದ್ದುದು, ಕುತ್ತಿಗೆ, ಕೈಯಲ್ಲಿ ಚೈನ್, ಬ್ರಾಸ್ ಲೇಟ್ ಹಾಕ್ಕೊಂದು ತಿರುಗಾಡುತ್ತಿದ್ದುದು ಅಲ್ಲಿದ್ದವರನ್ನು ದಂಗುಬಡಿಸಿತ್ತು. ಏನೂ ಇಲ್ಲದೆ ಮುಂಬೈಗೆ ಹೋಗಿದ್ದ ಉಮೇಶ್ ಶೆಟ್ಟಿ ಇಷ್ಟೊಂದು ಹಣ ಮಾಡಿಕೊಂಡಿದ್ದು ಹೇಗೆ ಎನ್ನುವ ಕುತೂಹಲ ಇತ್ತು. ಹೀಗೆ ಒಂದು ದಿನ ಬಾರ್ ನಲ್ಲಿ ಕುಳಿತು ಕುಡಿಯುತ್ತಿದ್ದಾಗ, ಉಮೇಶ್ ಶೆಟ್ಟಿ ಸೊಂಟದಲ್ಲಿದ್ದ ಪಿಸ್ತೂಲ್ ಕೆಳಗೆ ಬಿದ್ದಿತ್ತು. ಆ ಕಾಲದಲ್ಲಿ ಪಿಸ್ತೂಲನ್ನು ಮೊದಲ ಬಾರಿ ನೋಡಿದ್ದ ಆತನ ಜೊತೆಗಿದ್ದವರು ಇದರಿಂದ ಅಚ್ಚರಿಗೊಳಗಾಗಿದ್ದರು. ಇದೇ ವೇಳೆ, ಅಲ್ಲಿ ಸಪ್ಲೈ ಮಾಡುತ್ತಿದ್ದ ವೈಟರ್ ಕೂಡ ಪಿಸ್ತೂಲ್ ಕೆಳಗೆ ಬಿದ್ದುದನ್ನು ನೋಡಿದ್ದ.
ಪಿಸ್ತೂಲ್ ನೋಡಿ, ಕುತೂಹಲಕ್ಕೀಡಾಗಿದ್ದ ವೈಟರ್ ಈ ವಿಚಾರವನ್ನು ತನ್ನ ಸ್ನೇಹಿತ ಗುಜಿರಿ ವ್ಯಾಪಾರಿಯ ಬಳಿ ಹೀಗೆ ಕುಶಾಲಿಗೆ ಮಾತಾಡುತ್ತಿದ್ದಾಗ ಹೇಳಿದ್ದ. ನಮ್ಮಲ್ಲಿ ಒಬ್ಬರು ಬರುತ್ತಾರೆ. ಅವರಲ್ಲಿ ಪಿಸ್ತೂಲ್ ಇದೆ, ನಾನು ನೋಡಿದ್ದೇನೆ, ಒಳ್ಳೆ ಜನ.. ದಿನವೂ ನಂಗೆ ನೂರಿನ್ನೂರು ಟಿಪ್ಸ್ ಕೊಡುತ್ತಾರೆ ಎಂದಿದ್ದ. ಆತನ ಮಾತು ಕೇಳಿದ ಗುಜರಿ ವ್ಯಾಪಾರಿ ವಿಷಯವನ್ನು ತನ್ನ ಸ್ನೇಹಿತ ಮೂಡುಬಿದ್ರಿಯ ಪೊಲೀಸ್ ಒಬ್ಬರಲ್ಲಿ ಹೇಳಿದ್ದ. ಅದಾಗಲೇ ಮಂಗಳೂರಿನಲ್ಲಿ ಸುಬ್ಬರಾವ್ ಮರ್ಡರ್ ಆಗಿತ್ತು. ಶೂಟೌಟ್ ಮೂಲಕ ಮುಗಿಸಿದ್ದರಿಂದ ಮಂಗಳೂರಿನ ಆಗಿನ ರೌಡಿ ನಿಗ್ರಹ ದಳ ಸುಬ್ಬರಾವ್ ಕೇಸ್ ಹಿಂದೆ ಬಿದ್ದಿತ್ತು. ಕೂಡಲೇ ಎಲರ್ಟ್ ಆದ ಪೊಲೀಸ್ ಪೇದೆ, ವಿಷಯವನ್ನು ಇನ್ಸ್ ಪೆಕ್ಟರಿಗೆ ಹೇಳಿದ. ಅಲ್ಲಿಂದ ಈ ಸುದ್ದಿ ರೌಡಿ ನಿಗ್ರಹ ದಳದ ಇನ್‌ಸ್ ಪೆಕ್ಟರ್ ಆಗಿದ್ದ ಜಯಂತ್ ಶೆಟ್ಟಿ ಕಿವಿಗೆ ಬಿದ್ದಿತ್ತು. ಮೊದಲೇ ಮಣಿಪಾಲ, ಉಡುಪಿ, ಮೂಡುಬಿದ್ರಿ ಎಂದು ಸಿಸಿಟಿವಿ ಹಿಡಿದು ಹುಡುಕಾಟದಲ್ಲಿ ತೊಡಗಿದ್ದ ಜಯಂತ್ ಶೆಟ್ಟಿ ಎಲರ್ಟ್ ಆಗಿದ್ದಲ್ಲದೆ, ಮರುದಿನವೇ ಉಮೇಶ್ ಶೆಟ್ಟಿ ಬಂಧನಕ್ಕೆ ಇಳಿದಿದ್ದರು. ಮನೆಗೆ ತೆರಳಿದಾಗ, ಕಡಂದಲೆಯಲ್ಲಿ ಕ್ರಿಕೆಟ್ ಮ್ಯಾಚ್ ನೋಡಲು ಹೋಗಿದ್ದಾನೆಂದು ಹೇಳಿದರು. ಕೆಲವರು ಆತ ಕೋಳಿ ಅಂಕಕ್ಕೆ ಹೋಗಿರಬಹುದು ಎಂದ್ರು. ಕೋಳಿ ಅಂಕಕ್ಕೆ ಬರುವಾಗಲೂ ಚೈನ್, ಹತ್ತು ಬೆರಳಿಗೆ ಉಂಗುರ ಹಾಕ್ಕೊಂಡು ಬರುತ್ತಾನೆಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕೊನೆಗೆ ಉಮೇಶ್ ಶೆಟ್ಟಿಯನ್ನು ಪೊಲೀಸರು ಎತ್ತಾಕಿದ್ರು. ಜೀಪಿಗೆ ಹತ್ತಿಸುವಾಗಲೇ ಹೆದರಿದ್ದ ಉಮೇಶ್, ಪೊಲೀಸರು ಕಾಲರ್ ಹಿಡಿಯುವಷ್ಟರಲ್ಲಿ ಚಡ್ಡಿ ಒದ್ದೆಯಾಗಿತ್ತಂತೆ. ಆನಂತ್ರ ವಿಚಾರಣೆ ನ಼ಡೆಸಿದಾಗ, ಸುಬ್ಬರಾವ್ ಕೇಸ್ ಬಗ್ಗೆ ಆತನಿಗೆ ಏನೊಂದೂ ಗೊತ್ತಿರಲಿಲ್ಲ. ಮತ್ತಷ್ಟು ವಿಚಾರಿಸಿದಾಗ, ನಿಜ ವಿಚಾರ ಬಾಯಿಬಿಟ್ಟಿದ್ದ. ಆಗ ದೊಡ್ಡ ಸುದ್ದಿಯಾಗಿದ್ದ ಬೆಂಗಳೂರಿನ ಚೆಮ್ಮನ್ನೂರು ಜುವೆಲ್ಲರಿ ದರೋಡೆ ಪ್ರಕರಣ ನಾವೇ ಮಾಡಿದ್ದು ಎನ್ನುವ ಮಾತು ಹೊರಗೆಡಹಿದ್ದ.
ಆತನ ಮಾತು ಕೇಳಿ ವಿಚಾರಣೆ ನಡೆಸಿದ್ದ ಪೊಲೀಸರಿಗೇ ಶಾಕ್ ಆಗಿತ್ತು. ಕೋಳಿ ಅಂಕದಲ್ಲಿ ತಿರುಗಾಡೋ ಈತ ಎಲ್ಲಿ, ಅಲ್ಲಿ ಅಷ್ಟು ದೊಡ್ಡ ದರೋಡೆ ನಡೆಸಿದ ತಂಡ ಎಲ್ಲಿ ಅಂತ ಮೊದಲು ಉಮೇಶ್ ಶೆಟ್ಟಿ ಮಾತು ನಂಬಿರಲಿಲ್ಲ. ಆನಂತ್ರ ತನಗೆ ಪಾಲು ಸಿಕ್ಕಿದ್ದ ಬಂಗಾರದ ಬಗ್ಗೆಯೂ ಹೇಳಿದ್ದ. ಬೋಳದ ಸುರೇಶ್ ಎಂಬಾತನ ಬಳಿ ಬಚ್ಚಿಟ್ಟಿದ್ದ ಒಂದೂವರೆ ಕೇಜಿ ಬಂಗಾರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಪೊಲೀಸರು ಅಲ್ಲಿ ರೈಡ್ ಮಾಡಿದಾಗ, ಎರಡು ಕೇಜಿ ಬಂಗಾರ ಸಿಕ್ಕಿತ್ತು. ದೊಡ್ಡ ಕೇಸ್ ಹಿಡಿದ ಕ್ರೆಡಿಟ್ ಪಡೆಯುವ ಆತುರದಲ್ಲಿ ಮಂಗಳೂರು ಪೊಲೀಸರು ಆತನ ಜೊತೆಗೆ ಯಾರೆಲ್ಲಾ ಇದ್ದಾರೆಂದು ವಿಚಾರಿಸಿ ಒಬ್ಬೊಬ್ಬರನ್ನೇ ಬಲೆಗೆ ಕೆಡವಿದ್ರು. ಅದರಲ್ಲಿ ಮನೀಶ್ ಶೆಟ್ಟಿ, ಏಡ ಗೋಪಾಲ, ಗೋಪಾಲಕೃಷ್ಣ ಶೆ಼ಟ್ಟಿ, ಹೀಗೆ ಒಟ್ಟು ಒಂಬತ್ತು ಮಂದಿಯನ್ನು ಬಂಧಿಸಿದ್ರು. ಎಲ್ಲರೂ ತಲಾ ಎರಡು ಕೇಜಿಯಷ್ಟು ಬಂಗಾರವನ್ನು ಪಾಲು ಮಾಡಿಕೊಂಡಿದ್ದರು. ಎಕ್ಕಾರಿನ ನಿಖಿಲ್ ಶೆಟ್ಟಿ ಎಂಬಾತ ಈ ಆರೋಪಿಗಳಿಗೆ ಪಿಸ್ತೂಲ್ ಪೂರೈಕೆ ಮಾಡಿದ್ದ ಆರೋಪದಲ್ಲಿ ಎರೆಸ್ಟ್ ಮಾಡಿದ್ದರು. ಕೊನೆಗೆ ಇಡೀ ಪ್ರಕರಣವನ್ನು ಮಂಗಳೂರು ಪೊಲೀಸರು ಬೆಂಗಳೂರು ಪೊಲೀಸರಿಗೆ ಹಸ್ತಾಂತರಿಸಿದ್ದರು. ಆನಂತರ ಬೆಂಗಳೂರು ಪೊಲೀಸರು ಪ್ರಕರಣದ ಬೆನ್ನತ್ತಿ, ಒಟ್ಟು 17 ಆರೋಪಿಗಳನ್ನು ಬಂಧಿಸಿದ್ದರು. ಒಟ್ಟು 36 ಕೇಜಿ ಬಂಗಾರ ದರೋಡೆಯಾಗಿತ್ತು. ಎಲ್ಲರೂ ಜೊತೆಯಾಗಿ ಹಂಚಿಕೊಂಡಿದ್ದನ್ನು ಪೊಲೀಸರಿಗೆ ತಿಳಿಸಿದ್ದರು. ದರೋಡೆಗೆ ಸ್ಕೆಚ್ ಹಾಕಿದ್ದು ಮನೀಶ್ ಶೆಟ್ಟಿ ಮತ್ತು ಏಡ ಗೋಪಾಲ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದರು.
ಹೀಗೆ ಎರಸ್ಟ್ ಆಗಿದ್ದ ಮನೀಶ್ ಶೆಟ್ಟಿ ಸೇರಿದಂತೆ 17 ಮಂದಿ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದರು. ಅಲ್ಲಿಯೇ ಮನೀಶ್ ಅಂಡ್ ಟೀಮಿಗೆ ಬನ್ನಂಜೆ ರಾಜಾ ಮತ್ತು ರವಿ ಪೂಜಾರಿಯ ಲಿಂಕ್ ಆಗಿತ್ತು. ಆರು ತಿಂಗಳ ನಂತರ ಜೈಲಿನಿಂದ ಹೊರಬಂದಿದ್ದ ಮನೀಶ್ ಶೆಟ್ಟಿ ಮತ್ತೆ ಅಡ್ಡದಾರಿ ಹಿಡಿದಿದ್ದ.
Here is a detailed criminal history report by "Headline Karnataka" about Rowdy Sheeter Manish Shetty who was shot dead in Bangalore here on 16 Friday, October 2020 also about how he planned in looting Chemmanur Jewellers in Bangalore.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:52 am
Mangaluru Staff
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am