ಬ್ರೇಕಿಂಗ್ ನ್ಯೂಸ್
25-12-22 02:17 pm HK News Desk ಕ್ರೈಂ
ಪುಣೆ, ಡಿ.25 : 'ದೃಶ್ಯಂ’ ಚಿತ್ರದಲ್ಲಿ ಕೊಲೆ ಅಪರಾಧವನ್ನು ಮಾಡಿದರೂ, ಪೊಲೀಸರ ಕೈಗೆ ಸಿಗದಂತೆ ಮುಚ್ಚಿ ಹಾಕುವ ಕತೆಯಿದೆ. ಇದರಿಂದ ಪ್ರೇರಿತರಾದ ಇಬ್ಬರು ಯುವಕರು ತಮ್ಮ ತಂದೆಯನ್ನೇ ಕೊಂದು ದೇಹವನ್ನು ಸುಟ್ಟು ಹಾಕಿ ಸಾಕ್ಷ್ಯ ಮುಚ್ಚಿ ಹಾಕಲು ಯತ್ನಿಸಿದ ಘಟನೆ ಪುಣೆಯಲ್ಲಿ ನಡೆದಿದೆ. ಎಂಟು ದಿನಗಳ ಬಳಿಕ ಘಟನೆ ಬೆಳಕಿಗೆ ಬಂದಿದ್ದು ಪುಣೆ ಬಳಿಯ ಪಿಂಪ್ರಿ ಚಿಂಚ್‌ವಾಡ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೃತರನ್ನು ಧನಂಜಯ್ ನವನಾಥ್ ಬನ್ಸೋಡೆ (45) ಎಂದು ಗುರುತಿಸಲಾಗಿದೆ. ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ ಅವರನ್ನು ಡಿಸೆಂಬರ್ 15ರ ಮಧ್ಯರಾತ್ರಿ ಮಕ್ಕಳೇ ಕಬ್ಬಿಣದ ರಾಡ್ ನಲ್ಲಿ ಹೊಡೆದು ಹತ್ಯೆ ಮಾಡಿದ್ದಾರೆ.
ಇಬ್ಬರು ಮಕ್ಕಳಲ್ಲಿ ಒಬ್ಬಾತ ಸುಜಿತ್ ಬನ್ಸೋಡೆ (22) ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿ. ಮತ್ತೋರ್ವ ಅಭಿಜಿತ್ (18) 12ನೇ ತರಗತಿಯಲ್ಲಿ ಓದುತ್ತಿದ್ದಾನೆ. ಈಗ ಇಬ್ಬರೂ ಜೈಲು ಸೇರಿದ್ದಾರೆ. ದೃಶ್ಯಂ ಹಿಂದಿ ಅವತರಣಿಕೆ ಚಿತ್ರವನ್ನು ನೋಡಿದ್ದ ಸಹೋದರರು, ತಂದೆಯ ಮೇಲಿನ ಸಿಟ್ಟಿನಿಂದ ಕೊಲೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಸಾಕ್ಷ್ಯ ನಾಶಪಡಿಸಲು ಶವವನ್ನು ಸುಟ್ಟು ಹಾಕಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಕೊಲೆಯಾದ ವ್ಯಕ್ತಿ ಜಾಲತಾಣದಲ್ಲಿ ನಾಗ್ಪುರ ಮೂಲದ ಮಹಿಳೆಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ. ಪತ್ನಿ ಮತ್ತು ಇಬ್ಬರು ಮಕ್ಕಳು ಇದನ್ನು ಆಕ್ಷೇಪಿಸಿದ್ದು, ಈ ಕಾರಣಕ್ಕೆ ಇವರ ನಡುವೆ ಪದೇ ಪದೇ ಜಗಳ ನಡೀತಿತ್ತು. ಆದರೆ ಮಕ್ಕಳು ಬೆದರಿಕೆ ಹಾಕಿದರೂ, ತಂದೆ ತನ್ನ ಅಕ್ರಮ ಸಂಬಂಧದಿಂದ ಹೊರಬರಲು ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಹೀಗಾಗಿ ಇಬ್ಬರು ಸೋದರರು ಸೇರಿ ತಂದೆಯನ್ನು ಕೊಲ್ಲಲು ನಿರ್ಧರಿಸಿದ್ದರು.
ಡಿಸೆಂಬರ್ 15 ರಂದು ರಾತ್ರಿ ತಂದೆ ಮಲಗಿದ್ದಾಗ, ಕಬ್ಬಿಣದ ರಾಡ್‌ನಿಂದ ಹೊಡೆದು ಸಾಯಿಸಿದ್ದಾರೆ. ನಂತರ ಶವವನ್ನು ತಂದೆ ತಿಂಡಿ ಕಾಯಿಸಲು ಬಳಸುತ್ತಿದ್ದ ಕುಲುಮೆಯಲ್ಲಿ ಸುಟ್ಟಿದ್ದಾರೆ. ಸಾಕ್ಷಿ ಉಳಿಯದಂತೆ ಮಾಡಲು ಬೂದಿ ಮತ್ತು ಮೂಳೆಗಳನ್ನು ನದಿಯಲ್ಲಿ ವಿಸರ್ಜಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಂದೆಯನ್ನು ಸುಟ್ಟು ಹಾಕಿದ್ದಲ್ಲದೆ, ಎಲುಬುಗಳನ್ನು ನದಿಯಲ್ಲಿ ವಿಸರ್ಜಿಸಿರುವುದು ನೋಡಿದರೆ ಉಡುಪಿಯಲ್ಲಿ ಭಾಸ್ಕರ ಶೆಟ್ಟಿ ಎಂಬ ಉದ್ಯಮಿಯನ್ನು ಮಗನೇ ಕೊಲೆಗೈದು ಶವವನ್ನು ಹೋಮ ಕುಂಡದಲ್ಲಿ ಸುಟ್ಟು ನದಿಯಲ್ಲಿ ವಿಸರ್ಜಿಸಿದ ಕೃತ್ಯದ ರೀತಿಯಲ್ಲೇ ನಡೆದಿದೆ. ವಿಕೃತ ರೀತಿಯಲ್ಲಿ ವರ್ತಿಸಿದ ಅಣ್ಣ- ತಮ್ಮಂದಿರು ಈಗ ಜೈಲು ಪಾಲಾಗಿದ್ದಾರೆ.
Taking a leaf out of “Drishyam” movie, two men murder their 43-year-old father and burn his body. The Pimpri-Chinchwad police arrested the duo on Friday, eight days after the crime was committed.According to the police, the deceased has been identified as Dhananjay Navnath Bansode, who ran an eatery that mainly sold farsan, a fried snack. Dhananjay was killed by his two sons using an iron rod when he was sleeping during the intervening night of December 15 and 16.
03-02-26 08:17 pm
HK News Desk
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
03-02-26 11:55 am
HK News Desk
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
03-02-26 04:38 pm
Mangalore Correspondent
ಪತಿ- ಪತ್ನಿ ಕಲಹ ; ಮಾರಣಾಂತಿಕ ಹಲ್ಲೆಗೀಡಾಗಿದ್ದ ಪತ್...
02-02-26 07:36 pm
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm