ಬ್ರೇಕಿಂಗ್ ನ್ಯೂಸ್
24-12-22 04:36 pm HK News Desk ಕ್ರೈಂ
ಕಾನ್ಪುರ, ಡಿ.24: ಉತ್ತರ ಪ್ರದೇಶದ ಕಾನ್ಪುರದಲ್ಲಿ ಎಸ್ ಬಿಐ ಬ್ಯಾಂಕಿನ ಗೋಡೆ ಕೊರೆದು ಕಳ್ಳರು ನುಗ್ಗಿದ್ದು ಲಾಕರ್ ಒಡೆದು 1.8 ಕಿಲೋ ಗ್ರಾಮ್ ತೂಕದ ಚಿನ್ನಾಭರಣ ದೋಚಿದ್ದಾರೆ.
ಕಟ್ಟಡದ ಅಡಿಪಾಯದ ಕೆಳಗೆ ಐದು ಮೀಟರ್ ಆಳದ ವರೆಗೂ ಅಗೆದು, ಸುರಂಗ ಕೊರೆದು ಬ್ಯಾಂಕಿನ ಒಳ ನುಗ್ಗಿದ್ದಾರೆ. ಬಳಿಕ ಸ್ಟ್ರಾಂಗ್‌ರೂಮ್ ನುಗ್ಗಿದ ಕಳ್ಳರು, 1.8 ಕೆಜಿ ಚಿನ್ನವನ್ನು ಕಳವು ಮಾಡಿದ್ದಾರೆ. ಇದು ರಾಜ್ಯದಲ್ಲಿ ಕಳೆದ 25 ವರ್ಷಗಳಲ್ಲಿ ನಡೆದ ಅತಿದೊಡ್ಡ ಕಳ್ಳತನ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಎಂದಿನಂತೆ ಬ್ಯಾಂಕ್‌ಗೆ ಬಂದ ಉದ್ಯೋಗಿಗಳಿಗೆ, ಕಳ್ಳತನ ಆಗಿರುವುದು ಪತ್ತೆಯಾಗಿದೆ. ಕಳ್ಳರು ಎಂಟು ಮೀಟರ್ ಉದ್ದ, ಮೂರು ಅಡಿ ಆಳದ ಸುರಂಗವನ್ನು ತೋಡಿದ್ದಾರೆ. ಸುರಂಗದ ಹೊರಬದಿ ಪೊದೆಗಳಿಂದ ಆವೃತವಾಗಿತ್ತು. ಹೀಗಾಗಿ ಸುರಂಗ ಕೊರೆದಿರುವುದು ಬೇರೆಯವರಿಗೆ ಗೊತ್ತಾಗಿರಲಿಲ್ಲ.

"ಸುರಂಗ ಕೊರೆಯಲು ಕಳ್ಳರು ದಿನಗಳನ್ನು ತೆಗೆದುಕೊಂಡಿರಬಹುದು. ಅಷ್ಟು ನಿಖರತೆಯಿಂದ ಒಳಗಡೆ ಸರಿಯಾದ ಸ್ಥಳಕ್ಕೆ ಗುರಿ ಇಟ್ಟು ಸುರಂಗ ಮಾಡಿದ್ದಾರೆ. ಕಳ್ಳರಿಗೆ ಪ್ರಮುಖ ಮಾಹಿತಿಯನ್ನು ಒಳಗಿನವರೇ ರವಾನಿಸಿದ್ದಾರೆ ಎಂಬ ಶಂಕೆಯಿದೆ" ಎಂದು ಕಾನ್ಪುರ ಪೊಲೀಸ್ ಕಮಿಷನರ್ ಬಿಪಿ ಜೋಗ್ದಂಡ್ ಹೇಳಿದ್ದಾರೆ.

29 ಜನರು ಸಾಲಕ್ಕಾಗಿ ಅಡಮಾನವಿಟ್ಟ ಚಿನ್ನವನ್ನು ಆ ಲಾಕರ್‌ನಲ್ಲಿ ಇಡಲಾಗಿತ್ತು. ಲಾಕರ್ ಬಾಗಿಲು ಒಡೆಯಲು ಕಳ್ಳರು ಗ್ಯಾಸ್ ಕಟ್ಟರ್ ಬಳಸಿದ್ದಾರೆ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳ್ಳತನದ ವೇಳೆ ಎಚ್ಚರಿಕೆಯ ಹೆಜ್ಜೆ ಇಟ್ಟಿರುವ ದರೋಡೆಕೋರರು, ಸ್ಟ್ರಾಂಗ್‌ರೂಮ್‌ನಲ್ಲಿರುವ ಏಕೈಕ ಸಿಸಿಟಿವಿ ಕ್ಯಾಮರಾವನ್ನು ಬೇರೆ ಕಡೆಗೆ ತಿರುಗಿಸಿದ್ದರು.
)
ಲಾಕರಿನಲ್ಲಿದ್ದ 1.812 ಕೆಜಿ ತೂಕದ ಎಲ್ಲಾ ಚಿನ್ನವನ್ನು ಹೊತ್ತೊಯ್ದಿರುವ ಕಳ್ಳರು ಅದರ ಪಕ್ಕದ ಲಾಕರ್‌ನಲ್ಲಿ ಇಟ್ಟಿದ್ದ 35 ಲಕ್ಷ ರೂಪಾಯಿ ನಗದಿನಲ್ಲಿ ಒಂದು ರೂಪಾಯಿಯನ್ನೂ ಮುಟ್ಟಿಲ್ಲ ಎನ್ನುವುದು ವಿಶೇಷ.
Thieves broke open a chest at a bank in Uttar Pradesh's Kanpur and stole gold worth ₹ 1 crore. They entered the bank's vault through a 10-feet-long tunnel, the police said today. They dug the four-feet-wide tunnel from an empty plot adjacent to the State Bank of India's Bhanuti branch, the police said.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 08:26 pm
HK News Staffer
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am