ಬ್ರೇಕಿಂಗ್ ನ್ಯೂಸ್
06-12-22 04:21 pm HK News Desk ಕ್ರೈಂ
ನವದೆಹಲಿ, ಡಿ.6: ಆಸ್ತಿ ವಿವಾದಕ್ಕೆ ಸಂಬಂಧಿಸಿ 24 ವರ್ಷದ ಸೋದರ ಸಂಬಂಧಿಯ ರುಂಡವನ್ನು 20 ವರ್ಷದ ಬುಡಕಟ್ಟು ವ್ಯಕ್ತಿ ಹಾಗೂ ಆತನ ಸ್ನೇಹಿತರು ಕತ್ತರಿಸಿರುವ ಘಟನೆ ಜಾರ್ಖಂಡ್ ರಾಜ್ಯದ ಕುಂತಿ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಸ್ನೇಹಿತ ಆ ರುಂಡದೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಕುಂತಿ ಜಿಲ್ಲೆಯ ಮುರ್ಹು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಡಿಸೆಂಬರ್ 2 ರಂದು ಮೃತನ ತಂದೆ ದೂರು ದಾಖಲಿಸಿದ ನಂತರ ಪ್ರಮುಖ ಆರೋಪಿ, ಆತನ ಹೆಂಡತಿ ಸೇರಿ ಆರು ಮಂದಿಯನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಮಗ ಕಾನು ಮುಂಡಾ ಮನೆಯಲ್ಲಿ ಒಬ್ಬನೇ ಇದ್ದಾಗ ಆತನ ಸೋದರ ಸಂಬಂಧಿ ಸಾಗರ್ ಮುಂಡಾ ಹಾಗೂ ಆತನ ಸ್ನೇಹಿತರು ಅಪಹರಿಸಿರುವುದಾಗಿ ಗ್ರಾಮಸ್ಥರು ತಿಳಿಸಿದ್ದು ಕೊಲೆಯಾದ ವ್ಯಕ್ತಿಯ ತಂದೆ ದೂರಿನಲ್ಲಿ ಹೇಳಿದ್ದರು. ಕಾನು ಪತ್ತೆಯಾಗದಿದ್ದಾಗ ಅವರ ತಂದೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ.
ಕುಂತಿ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ತಂಡವೊಂದನ್ನು ರಚಿಸಲಾಗಿತ್ತು. ಆರೋಪಿಗಳ ಬಂಧನ ನಂತರ ಕುಮಾಂಗ್ ಗೊಪ್ಲಾ ಅರಣ್ಯ ಪ್ರದೇಶದಲ್ಲಿ ಮೃತದೇಹ ಪತ್ತೆಯಾದರೆ, ಅಲ್ಲಿಂದ 15 ಕಿ.ಮೀ ದೂರದಲ್ಲಿರುವ ದುಲ್ವಾ ತುಂಗ್ರಿ ಅರಣ್ಯದಲ್ಲಿ ರುಂಡ ಪತ್ತೆಯಾಗಿದೆ ಎಂದು ಮುರ್ಹು ಪೊಲೀಸ್ ಠಾಣಾಧಿಕಾರಿ ಚುಂಡಮಣಿ ತುಡು ಹೇಳಿದ್ದಾರೆ.
ಆರೋಪಿಗಳು ಕಡಿದ ರುಂಡದೊಂದಿಗೆ ಸೆಲ್ಫಿ ತೆಗೆದುಕೊಂಡು ವಿಕೃತಿ ಮೆರೆದಿದ್ದಾರೆ. ಆರೋಪಿಗಳಿಂದ ಐದು ಮೊಬೈಲ್ ಫೋನ್ ಗಳು, ಮಾರಕಾಸ್ತ್ರಗಳು, ಕೊಡಲಿ ಮತ್ತು ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ತುಂಡು ಭೂಮಿಗಾಗಿ ಆರೋಪಿಗಳು ಮತ್ತು ಕೊಲೆಯಾದ ಯುವಕರ ಕುಟುಂಬದ ಮಧ್ಯೆ ದ್ವೇಷವಿತ್ತು. ಇದೇ ಕಾರಣದಿಂದ ಆತನ ತಲೆ ಕಡಿಯಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
A 20-year-old man allegedly beheaded his 24-year-old cousin after abducting him over a land dispute, after which the friends of the accused even took a selfie with the severed head in Jharkhand's Khunti district, said the police on Monday.Following a complaint by the father of the deceased in Murhu village on Friday, cops arrested six people, including the main accused and his wife.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 10:59 pm
HK News Desk
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am