ಬ್ರೇಕಿಂಗ್ ನ್ಯೂಸ್
15-09-22 12:55 pm Mangalore Correspondent ಕ್ರೈಂ
ಮಂಗಳೂರು, ಸೆ.15: ಕಾರು ಕಳವು ಪ್ರಕರಣ ನಡೆದು 25 ವರ್ಷಗಳ ಬಳಿಕ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಪಿರಿಯಾಪಟ್ಟಣದ ಆರೇನಹಳ್ಳಿ ನಿವಾಸಿಯಾಗಿದ್ದ ಅಸ್ಲಂ ಪಾಷಾ ಬಂಧಿತನಾಗಿದ್ದು ಈತ 1997ರಲ್ಲಿ ನಡೆದಿದ್ದ ಕಾರು ಕಳವು ಪ್ರಕರಣದಲ್ಲಿ ಆರೋಪಿಯಾಗಿದ್ದ.
ಅಸ್ಲಾಂ ಪಾಷಾ, 1997ರ ನವೆಂಬರ್ 11ರಂದು ಅಂಬಾಸಿಡರ್ ಕಾರು ಕಳವು ಮಾಡಿದ್ದಾನೆ. ಈ ಬಗ್ಗೆ ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಸಂದರ್ಭದಲ್ಲಿ ಆರೋಪಿಯನ್ನು ಬಂಧಿಸಿದ್ದ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಆದರೆ ಜಾಮೀನು ಪಡೆದ ಬಳಿಕ 2000 ಫೆಬ್ರವರಿ 8 ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಇದನ್ನು 2015 ರಲ್ಲಿ ಪತ್ತೆಯಾಗದ ಪ್ರಕರಣವೆಂದು ಪೊಲೀಸರು ಘೋಷಿಸಿದ್ದರು.
ಇತ್ತೀಚೆಗೆ, ಆತನ ವಿರುದ್ಧ ಕೋರ್ಟಿನಿಂದ ಎಲ್ ಪಿಸಿ ವಾರೆಂಟ್ ಪಡೆದು ಸೆಪ್ಟೆಂಬರ್ 12ರಂದು ಈತನನ್ನು ಪಿರಿಯಾಪಟ್ಟಣದ ಆರೇನಹಳ್ಳಿಯಲ್ಲಿ ಪೊಲೀಸರು ಮತ್ತೆ ಬಂಧಿಸಿದ್ದಾರೆ. ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಜೈಲಿಗೆ ಹಾಕಲಾಗಿದೆ. ಆರೋಪಿ ಅಸ್ಲಂ ಪಾಷಾ ವಿರುದ್ಧ ಪಿರಿಯಾಪಟ್ಟಣದ ಬೆಟ್ಟದಪುರ, ಉದಯಪುರ, ಭದ್ರಾವತಿ, ಮಂಡ್ಯ, ಮೈಸೂರು ನಗರ, ಬೆಂಗಳೂರು ನಗರ ಹೀಗೆ ಹಲವಾರು ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿದೆ. ಆರೋಪಿಯು ಮನೆ ಮುಂದೆ ನಿಲ್ಲಿಸಿದ್ದ ಕಾರುಗಳನ್ನು ಕಳವುಗೈದು ಅದರ ಚೇಸ್ ನಂಬರನ್ನು ಜಜ್ಜಿ ಕಾರಿನ ಬಣ್ಣ ಹಾಗೂ ನಂಬರ್ ಪ್ಲೇಟನ್ನು ಬದಲಾಯಿಸಿ ಕಡಿಮೆ ಬೆಲೆಗೆ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
The city police have arrested a man accused of car theft 25 years after the crime took place. The accused is Aslam alias Aslam Pasha who was wanted in an Ambassador car theft case registered on 11 November 1997. The police have registered a case under IPC section 379.
03-02-26 08:17 pm
HK News Desk
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
03-02-26 09:06 pm
HK News Desk
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
03-02-26 11:14 pm
Mangaluru Staffer
Mangalore, Volvo Driver Satish Shetty: ರಸ್ತೆ...
03-02-26 09:49 pm
ಮೆದುಳಿನ ರಕ್ತಸ್ರಾವ ; ಮಂಗಳೂರು ಸಿಎಆರ್ ಹೆಡ್ ಕಾನ್ಸ...
03-02-26 04:38 pm
ಪತಿ- ಪತ್ನಿ ಕಲಹ ; ಮಾರಣಾಂತಿಕ ಹಲ್ಲೆಗೀಡಾಗಿದ್ದ ಪತ್...
02-02-26 07:36 pm
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm