ಬ್ರೇಕಿಂಗ್ ನ್ಯೂಸ್
12-09-22 01:15 pm HK News Desk ಕ್ರೈಂ
ಲಕ್ನೋ, ಸೆ.12: ಹಿಂದುಳಿದ ವರ್ಗದ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ 19 ವರ್ಷದ ತನ್ನ ಮಗಳನ್ನು ತಂದೆಯೇ ಮರ್ಯಾದಾ ಹತ್ಯೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಪೈಶಾಚಿಕ ಘಟನೆ ನಡೆದಿದೆ.
ಆರೋಪಿ ತಂದೆ ಪ್ರಮೋದ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಮಗಳನ್ನು ಕತ್ತು ಹಿಸುಕಿ ಕೊಂದು ಆಕೆಯ ಮೃತದೇಹಕ್ಕೆ ಬೆಂಕಿ ಹಚ್ಚಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಮೋದ್ ಕುಮಾರ್ ಮೇಲ್ಜಾತಿಯ ವ್ಯಕ್ತಿಯಾಗಿದ್ದು ಆತನ ಮಗಳು 19 ವರ್ಷದ ಕಾಜಲ್, ಅದೇ ಊರಿನ ಹಿಂದುಳಿದ ಜಾತಿಯ ಯುವಕ ಅಜಯ್ ಕಶ್ಯಪ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ತಂದೆ ಬೈದು ಬುದ್ಧಿ ಹೇಳಿದರೂ, ಸಂಬಂಧ ಕಡಿದುಕೊಳ್ಳಲು ನಿರಾಕರಿಸಿದ್ದಳು. ಅಲ್ಲದೆ, ಅಜಯ್ ಕಶ್ಯಪ್ ಜೊತೆಗೆ ಕಾಜಲ್ ತನ್ನ ಮನೆಯವರಿಗೆ ತಿಳಿಸದೆ ಮನೆಯಿಂದ ಹೊರಟು ಹೋಗಿದ್ದಳು. ಇದರಿಂದ ಬೇಸತ್ತ ತಂದೆ ಪ್ರಮೋದ್ ಕುಮಾರ್ ತನ್ನ ಮರ್ಯಾದೆ ಹೋಗುತ್ತೆ ಎಂದು ಹೇಳಿ ಮಗಳನ್ನೇ ಕುತ್ತಿಗೆ ಹಿಸುಕಿ ಕೊಂದಿದ್ದಾನೆ. ಅಲ್ಲದೆ, ಶವವನ್ನು ಹಸುವಿನ ಸೆಗಣಿಯ ಗೊಬ್ಬರದ ಮಧ್ಯೆ ಹೂತು ಬೆಂಕಿ ಹಚ್ಚಿದ್ದಾನೆ.
ಸೆಪ್ಟೆಂಬರ್ 9 ರಂದು ರಾತ್ರಿ ಪಕ್ಕದ ಹೊಲದಲ್ಲಿ ಏನೋ ಕೆಲಸ ಇದೆಯೆಂದು ಹೇಳಿ ಮಗಳನ್ನು ಕರೆದೊಯ್ದು ಕೃತ್ಯ ಎಸಗಿದ್ದಾನೆ. ಮನೆಗೆ ಮರಳಿದ ನಂತರ, ಮಗಳನ್ನು ಪಾಣಿಪತ್‌ನಲ್ಲಿ ತನ್ನ ಸಹೋದರನಲ್ಲಿ ಬಿಟ್ಟು ಬಂದಿರುವುದಾಗಿ ಪ್ರಮೋದ್ ಮನೆಯಲ್ಲಿ ತಿಳಿಸಿದ್ದ. ಆದರೆ, ಶುಕ್ರವಾರ ರಾತ್ರಿ ಹೊಲದಲ್ಲಿ ಶವ ಸುಟ್ಟು ಹಾಕಿರುವ ಬಗ್ಗೆ ಸ್ಥಳೀಯರು ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಸ್ಥಳದಲ್ಲಿದ್ದ ಮೂಳೆಗಳನ್ನು ಸಂಗ್ರಹಿಸಿದ್ದು ಪ್ರಮೋದ್ ಕುಮಾರ್ ಬಗ್ಗೆ ಸಂಶಯ ಉಂಟಾಗಿ ವಶಕ್ಕೆ ಪಡೆದು ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
In a case of honour killing, a 57-year-old man has been arrested for allegedly strangling his 19-year-old daughter to death over an inter-caste relationship.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm