ಬ್ರೇಕಿಂಗ್ ನ್ಯೂಸ್
06-09-22 08:40 pm Mangalore Correspondent ಕ್ರೈಂ
ಮಂಗಳೂರು, ಸೆ.6: ವ್ಯಕ್ತಿಯೊಬ್ಬ ಮನೆಯಲ್ಲಿದ್ದ ಮಹಿಳೆಯನ್ನು ಹಿಪ್ನೊಟೈಸ್ ರೀತಿ ಮಂಕು ಮರುಳು ಮಾಡಿ 130 ಗ್ರಾಮ್ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾದ ಘಟನೆ ನಗರದ ಬಂದರು ಠಾಣೆ ಬಳಿಯ ಜೈನ ಮಂದಿರದ ಬಳಿ ನಡೆದಿದೆ.
ಸೆ.5ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಅಪರಿಚಿತ ಯುವಕನೊಬ್ಬ ಜೈನ ಮಂದಿರದ ಹಿಂಭಾಗದ ಟಿಟಿ ರೋಡ್ ನಲ್ಲಿರುವ ಮನೆಯೊಂದಕ್ಕೆ ಬಂದಿದ್ದು ಎರಡು ಸಾವಿರದ ನೋಟು ತೋರಿಸಿ ಚಿಲ್ಲರೆ ಇದೆಯಾ ಎಂದು ಮಹಿಳೆಯಲ್ಲಿ ಕೇಳಿದ್ದಾನೆ. ಮಹಿಳೆ ಮನೆಯ ಒಳಗೆ ಬ್ಯಾಗ್ ನಲ್ಲಿ ತಡಕಾಡುತ್ತಿದ್ದು, ಚಿಲ್ಲರೆ ಹುಡುಕಿ ಕೊಡಲು ಮುಂದಾಗಿದ್ದಾರೆ. ಅದೇ ವೇಳೆ, ಬ್ಯಾಗಿನಲ್ಲಿದ್ದ ಚಿನ್ನಾಭರಣ ತೆಗೆದಿಟ್ಟು ನೋಟುಗಳನ್ನು ಎಣಿಸುತ್ತಿದ್ದಾಗಲೇ ಮಾತುಗಳಿಂದಲೇ ಎಚ್ಚರ ತಪ್ಪುವಂತೆ ಮಾಡಿದ್ದು, ಬ್ಯಾಗನ್ನು ಕೇಳಿ ಪಡೆದಿದ್ದಾನೆ.
ಆನಂತರ, ಬ್ಯಾಗನ್ನು ಪಡೆದ ಯುವಕ ಚಿನ್ನಾಭರಣಗಳ ಸಹಿತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಕೆಲವು ನಿಮಿಷಗಳು ಕಳೆಯುತ್ತಿದ್ದಂತೆ ಮಹಿಳೆಗೆ ಎಚ್ಚರವಾದಂತಾಗಿದ್ದು, ಅಷ್ಟರಲ್ಲಿ ಯುವಕ ನಾಪತ್ತೆಯಾಗಿದ್ದ. ಬ್ಯಾಗಿನಲ್ಲಿ ಕರಿಮಣಿ ಸರ, ಉಂಗುರ ಸೇರಿದಂತೆ 130 ಗ್ರಾಮ್ ಬಂಗಾರ ಇತ್ತು. ಕೂಡಲೇ ತನ್ನ ಗಂಡನಿಗೆ ಮಹಿಳೆ ಮಾಹಿತಿ ನೀಡಿದ್ದು, ಆಗಿರುವ ವಿಚಾರ ತಿಳಿಸಿದ್ದಾರೆ. ಯುವಕ ಫೇಸ್ ಮಾಸ್ಕ್ ಹಾಕ್ಕೊಂಡಿದ್ದ. ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದ. ಈ ಬಗ್ಗೆ ಮಹಿಳೆ ಬಂದರು ಠಾಣೆಯಲ್ಲಿ ದೂರು ನೀಡಿದ್ದಾರೆ.
In a bizarre incident that is reported from the city on Monday, September 5, a man took a handbag containing 130 grams of gold from the hands of the woman itself by reportedly hypnotising her.A stranger entered the house of a woman living on TT Road behind Jain temple under the limits of city north police station at around 9.15 am and asked change for Rs 2,000 currency note. Later, he asked the woman where she keeps the gold. The woman showed the cupboard where she had kept the gold.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm