ಬ್ರೇಕಿಂಗ್ ನ್ಯೂಸ್
04-09-22 11:00 pm HK News Desk ಕ್ರೈಂ
ಬಳ್ಳಾರಿ, ಸೆ 04: ಗಣಿ ನಾಡು ಬಳ್ಳಾರಿಯಲ್ಲಿ ವರದಕ್ಷಿಣೆ ವಂಚನೆ ಪ್ರಕರಣವೊಂದು ಬಯಲಿಗೆ ಬಂದಿದೆ. ಹೈದರಾಬಾದ್ ಮೂಲದ ವೈದ್ಯೆಗೆ ಮೋಸ ಮಾಡಿ ಮದುವೆಯಾದ ಬಳ್ಳಾರಿ ಮೂಲದ ಇಂಜಿನಿಯರ್, ಇದೀಗ ಮತ್ತೊಂದು ಮದುವೆ ಆಗುವ ಮೂಲಕ ವೈದ್ಯೆಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
ಹೈದರಾಬಾದ್ ಮೂಲದ ವೈದ್ಯೆ ಮೌನಿಕಾ ಅವರು ಬಳ್ಳಾರಿ ಮೂಲದ ಇಂಜಿನಿಯರ್ ರಘುರಾಮ ರೆಡ್ಡಿ ಜೊತೆ 2019ರಲ್ಲಿ ಮದುವೆ ಆಗಿದ್ದರು. ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿರುದಾಗಿ ಸುಳ್ಳು ಹೇಳಿ 50 ಲಕ್ಷ ನಗದು, ಒಂದು ಕೆಜಿ ಬಂಗಾರ ಹಾಗೂ ಅರ್ಧ ಕೆಜಿ ಬೆಳ್ಳಿಯನ್ನು ರುಘುರಾಮ್ ವರದಕ್ಷಿಣೆ ಪಡೆದುಕೊಂಡಿದ್ದ. ಮದುವೆ ಆಗಿ ಎರಡು ತಿಂಗಳು ಕೂಡ ಸಂಸಾರ ಮಾಡದ ರಘುರಾಮ ಹಣಕ್ಕಾಗಿ ಹೆಂಡ್ತಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇತ್ತ ಮೊದಲನೇ ಹೆಂಡ್ತಿಗೆ ಗೊತ್ತಾಗದೇ ಎರಡನೇ ಮದುವೆಯಾಗಿ ವಂಚನೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಮೋನಿಕಾ ಕುಟುಂಬದವರು ಸಂಗನಕಲ್ಲು ಗ್ರಾಮದಲ್ಲಿರುವ ರಘುರಾಮ ರೆಡ್ಡಿ ಅವರ ಮನೆಯ ಹತ್ತಿರ ಪ್ರಶ್ನಿಸಲು ಹೋದಾಗ ಇಬ್ಬರ ಮಧ್ಯೆ ಜಗಳವಾಗಿದೆ. ಈ ಸಂದರ್ಭದಲ್ಲಿ ರಘುರಾಮರೆಡ್ಡಿ ಅವರು ಕುಡುಗೋಲು ಹಿಡಿದುಕೊಂಡು ಓಡುತ್ತಿರುವ ಫೋಟೋ ಮತ್ತು ವಿಡಿಯೋ, ಮೋನಿಕಾ ಅವರು ಗಾಯಗೊಂಡು ಅಳುತ್ತಿರುವ ಮತ್ತು ಗಲಾಟೆ ಮಾಡುತ್ತಿರುವ ವಿಡಿಯೋಗಳು ಮೊಬೈಲ್ಗಳಲ್ಲಿ ಹರಿದಾಡುತ್ತಿವೆ.

7 ಜನರ ವಿರುದ್ಧ ಪ್ರಕರಣ ದಾಖಲು:
ಘಟನೆಗೆ ಸಂಬಂಧಿಸಿದಂತೆ ಮೋನಿಕಾ ಅವರು ಬಳ್ಳಾರಿ ಮಹಿಳಾ ಠಾಣೆಯಲ್ಲಿ ರಘುರಾಮರೆಡ್ಡಿ ಸೇರಿದಂತೆ ಏಳು ಜನರ ಮೇಲೆ ಪ್ರಕರಣ ದಾಖಲಾಗಿದೆ. ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆಂದು ಸುಳ್ಳು ಹೇಳಿ ಮದುವೆಯಾಗಿದ್ದಾರೆಂಬುದು ಮೊದಲ ಹೆಂಡತಿ ಕುಟುಂಬದವರ ಆರೋಪವಾಗಿದೆ.
Bellary software husband cheats doctor wife of Hyderabad and gets second marriage, dowry harassment case has been filed against him by wife's family.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 10:59 pm
HK News Desk
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am