ಬ್ರೇಕಿಂಗ್ ನ್ಯೂಸ್
03-09-22 01:58 pm HK News Desk ಕ್ರೈಂ
ಮೈಸೂರು, ಸೆ.3: ಆಕೆ ಬಿಸಿಎ ವಿದ್ಯಾರ್ಥಿನಿ, 15 ದಿನ ಕಳೆದಿದ್ರೆ ಪದವಿ ಮುಗಿಸಿ ಎಲ್ಲಾದ್ರೂ ಕೆಲಸಕ್ಕೆ ಸೇರುತ್ತಿದ್ದಳು. ಆದ್ರೆ ವಿಧಿಯಾಟವೇ ಬೇರೆಯಾಗಿತ್ತು. ಸ್ನೇಹಿತನ ಜೊತೆ ಲಾಡ್ಜ್‌ಗೆ ಬಂದಿದ್ದ ವಿದ್ಯಾರ್ಥಿನಿ ಅಲ್ಲಿಯೇ ಹೆಣವಾಗಿದ್ದಾಳೆ. ಯುವತಿ ಸಾವಿನ ಸುತ್ತ ಅನುಮಾನ ಹುಟ್ಟುಕೊಂಡಿದ್ದು ಕೊಲೆಯೋ ಆತ್ಮಹತ್ಯೆಯೋ ಅನ್ನುವ ಶಂಕೆ ಉಂಟಾಗಿದೆ.
ಪಿರಿಯಾಪಟ್ಟಣ ತಾಲೂಕಿನ ಹರಳಹಳ್ಳಿ ಗ್ರಾಮದ ನಿವಾಸಿ ರವಿ ಅವರ ಪುತ್ರಿ ಅಪೂರ್ವ ಶೆಟ್ಟಿ (21) ಗುರುವಾರ ರಾತ್ರಿ ಲಾಡ್ಜ್ ಒಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಳು. 15 ದಿನಗಳಲ್ಲಿ ಪದವಿ ಮುಗಿಸಿ ಊರಿಗೆ ಹೋಗೋದ್ರಲ್ಲಿದ್ದಳು, ದುರದೃಷ್ಟವಶಾತ್ ಆಕೆ ಸಾವನ್ನಪ್ಪಿದ್ದಾಳೆ.
ಅಪೂರ್ವ ಕಳೆದ ಕೆಲವು ವರ್ಷಗಳಿಂದ ಆಶಿಕ್ ಎಂಬ ಯುವಕನೊಂದಿಗೆ ಪ್ರೀತಿ ನೆಪದಲ್ಲಿ ಓಡಾಡುತ್ತಿದ್ದಳು. ಎರಡು ದಿನಗಳ ಹಿಂದೆ ಮೈಸೂರು ಜಿಲ್ಲೆಯ ಹುಣಸೂರು ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಆಶಿಕ್ ಜೊತೆಗೆ ಬಂದು ರೂಂ ಪಡೆದು ವಾಸ್ತವ್ಯ ಹೂಡಿದ್ದರು. ರೂಮಲ್ಲಿದ್ದರೂ ಆಶಿಕ್ ಆಗಾಗ್ಗೆ ಹೊರಗೆ ಹೋಗಿ ಮತ್ತೆ ಹೋಟೆಲ್‌ಗೆ ವಾಪಸ್ ಬರುತ್ತಿದ್ದ. ಗುರುವಾರ ಬೆಳಗ್ಗೆ ಹೋಟೆಲ್ ನಿಂದ ಹೊರಟಿದ್ದ ಆಶಿಕ್ ಮತ್ತೆ ವಾಪಸ್ ಬಂದಿರಲಿಲ್ಲ. ಹುಡುಗಿ ಮಾತ್ರ ಹೋಟೆಲ್‌ನಿಂದ ಹೊರ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ರೂಂನಲ್ಲಿದ್ದ ಫೋನಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದೇ ಇದ್ದಾಗ ಆತಂಕಗೊಂಡು ತಕ್ಷಣ ದೇವರಾಜ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೇವರಾಜ ಠಾಣೆ ಪೊಲೀಸರು ಬಂದು ರೂಂ ತೆರೆದು ನೋಡಿದಾಗ ಅಪೂರ್ವ ರೂಂನಲ್ಲಿ ಹೆಣವಾಗಿ ಬಿದ್ದಿದ್ದಾಳೆ.
ಅಪೂರ್ವ ಸ್ನೇಹಿತರ ಮಾಹಿತಿ ಪ್ರಕಾರ ಆಶಿಕ್ ಮತ್ತು ಅಪೂರ್ವ ಶೆಟ್ಟಿ ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಒಂದೂವರೆ ವರ್ಷದ ಹಿಂದೆ ಮನೆಯವರಿಗೆ ಇವರ ವಿಚಾರ ತಿಳಿದು ಜಗಳವಾಗಿತ್ತು. ಇಬ್ಬರಿಗೂ ಬುದ್ಧಿಮಾತು ಹೇಳಿ ದೂರ ಆಗುವಂತೆ ಹೇಳಿದ್ದರು. ಇದಾದ ಬಳಿಕವೂ ಆಕೆ ಅದೇ ಹುಡುಗನ ಜೊತೆ ಸ್ನೇಹ ಮುಂದುವರಿಸಿದ್ದಾಳೆ. ಆಗಾಗ ಆತನ ಜೊತೆ ಸುತ್ತಾಡುತ್ತಿದ್ದಳು ಎಂದು ತಿಳಿದು ಬಂದಿರುವುದಾಗಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.
ಯುವಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ರೂಮಲ್ಲಿ ಜಗಳ ನಡೆದು ಆತನೇ ಕೊಲೆ ನಡೆಸಿದ್ದಾನೆಯೇ ಎಂಬ ಶಂಕೆಯು ಇದೆ. ಆತ್ಮಹತ್ಯೆ ಬಗ್ಗೆಯೂ ಅನುಮಾನಗಳಿವೆ.
Couple book lodge in Mysuru girl found dead boy arrested.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm