ಬ್ರೇಕಿಂಗ್ ನ್ಯೂಸ್
24-08-22 10:41 pm HK News Desk ಕ್ರೈಂ
ಶಿವಮೊಗ್ಗ, ಆಗಸ್ಟ್ 24 : ಸ್ವಾತಂತ್ರ್ಯ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಉಂಟಾಗಿದ್ದ ಸಾವರ್ಕರ್ ಫೋಟೋ ವಿವಾದವು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಕೋಮು ದ್ವೇಷದ ವಾತಾವರಣಕ್ಕೂ ಕಾರಣವಾಗಿತ್ತು. ಸಾವರ್ಕರ್ ಫೋಟೊ ವಿವಾದ ತಣ್ಣಗಾದ ಬೆನ್ನಲ್ಲೇ ಶಿವಮೊಗ್ಗದಲ್ಲಿ ಮತ್ತೊಂದು ಗಲಭೆ ಸೃಷ್ಟಿಸಲು ಪ್ಲಾನ್ ನಡೆದಿದೆಯಾ ಎಂಬ ಅನುಮಾನ ಮೂಡಿದೆ. ಇದಕ್ಕೆ ಕಾರಣವಾಗಿದ್ದು ಆ ಒಂದು ಪತ್ರ.
ಶಿವಮೊಗ್ಗದ ಗಾಂಧಿ ಬಜಾರ್ ಬಳಿಯ ದೇವಸ್ಥಾನದಲ್ಲಿ ಅನಾಮಿಕ ಪತ್ರ ದೊರಕಿದ್ದು ಇದರಲ್ಲಿ ಗಣೇಶೋತ್ಸವಕ್ಕೂ ಮುನ್ನ ಶಿವಮೊಗ್ಗದಲ್ಲಿ ಮತ್ತೊಂದು ಸಂಘರ್ಷವನ್ನು ನಡೆಸಲು ಹುನ್ನಾರ ನಡೆದಿರುವ ಬಗ್ಗೆ ಹೇಳಲಾಗಿದೆ. ಪತ್ರ ದೊರಕಿದ ತಕ್ಷಣವೇ ಅಲರ್ಟ್ ಆಗಿರುವ ಶಿವಮೊಗ್ಗ ಕೋಟೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಚುರುಕುಗೊಳಿಸಿದ್ದಾರೆ.
ಶಿವಮೊಗ್ಗದ ಗಾಂಧಿ ಬಜಾರಿನ ಗಂಗಾ ಪರಮೇಶ್ವರ ದೇವಸ್ಥಾನದ ಬಳಿ ಪತ್ರ ಸಿಕ್ಕಿದೆ. ದೇವಾಲಯದ ಪಕ್ಕದಲ್ಲಿಯೇ ಅಂಗಡಿ ನಡೆಸುತ್ತಿರುವ ವ್ಯಕ್ತಿಯೊಬ್ಬರು ಅಂಗಡಿ ಬಂದ್ ಮಾಡಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಪತ್ರ ಕಣ್ಣಿಗೆ ಬಿದ್ದಿದೆ. ಪೊಲೀಸ್ ಇಲಾಖೆಗೆ ಈ ಪತ್ರವನ್ನು ಕೊಟ್ಟು ಕೋಮು ಗಲಭೆ ತಪ್ಪಿಸಿ, ಮೂವರ ಪ್ರಾಣ ಉಳಿಸಿ ಎಂದು ಪತ್ರದಲ್ಲಿ ಬರೆಯಲಾಗಿದೆ.
ಪತ್ರವನ್ನು ಓದಿದ ಕೂಡಲೇ ಅಂಗಡಿ ಮಾಲೀಕ ಕೋಟೆ ಠಾಣೆಗೆ ತೆರಳಿ ಪೊಲೀಸರಿಗೆ ನೀಡಿದ್ದಾರೆ. ಅಲ್ಲದೆ, ಯಾರೋ ಅಪರಿಚಿತರು ಶಿವಮೊಗ್ಗದಲ್ಲಿ ಮತ್ತೊಂದು ಗಲಭೆ ನಡೆಸಲು ಸಂಚು ಮಾಡಿದ್ದಾರೆ ಎಂದು ಆರೋಪಿಸಿ ದೂರನ್ನು ದಾಖಲಿಸಿದ್ದಾರೆ. ಪತ್ರದಲ್ಲಿ ಅಪರಿಚಿತ ವ್ಯಕ್ತಿ ಗಲಭೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಗಾಂಧಿ ಬಜಾರ್ ಬಳಿ ಮೂವರು ಗಾಂಜಾ ಸೇದುತ್ತಾ ಮಾತನಾಡಿಕೊಳ್ಳುತ್ತಿದ್ದರು. ಮೂವರು ಮಾತನಾಡಿರುವುದನ್ನು ಕೇಳಿಸಿಕೊಂಡು ಭಯಕ್ಕೊಳಗಾಗಿದ್ದೇನೆ. ಮೂವರನ್ನು ಮಂಗಳೂರಿನಿಂದ ಕರೆಸಬೇಕು. ಅವರು ಮೊಬೈಲ್ ಫೋನ್ ಬಳಕೆ ಮಾಡಬಾರದು. ಯಾವುದೇ ಕಾರಣಕ್ಕೂ ಸ್ಥಳೀಯರಿಗೆ ಈ ವಿಚಾರ ತಿಳಿಯಬಾರದು. ಗಲಾಟೆ ನಡೆದರೆ ಮಾತ್ರ ಗಣೇಶೋತ್ಸವ ಆಚರಣೆ ತಡೆಯೋಕೆ ಸಾಧ್ಯ ಎಂದು ಯುವಕರು ಹೇಳಿಕೊಂಡಿದ್ದರು ಎಂಬುದಾಗಿ ಪತ್ರದಲ್ಲಿ ಬರೆದಿದ್ದಾನೆ.
ಪತ್ರದಲ್ಲಿ ಮೊಹಮ್ಮದ್ ಫೈಸಲ್ ಅಲಿಯಾಸ್ ಚೆನ್ನು ಎಂಬಾತನ ಹೆಸರನ್ನು ಉಲ್ಲೇಖಿಸಿದ್ದಾನೆ. ಈ ವ್ಯಕ್ತಿ ಗಾಂಜಾ ಸೇವನೆ ಮಾಡೋದು ಅಲ್ಲದೆ, ಗಾಂಜಾ ಮಾರಾಟವನ್ನೂ ಮಾಡುತ್ತಾನೆ. ಆಜಾದ್ ನಗರದಲ್ಲಿ ಈತ ರೌಡಿಯಂತೆ ವರ್ತಿಸುತ್ತಾನೆಂದು ಪತ್ರದಲ್ಲಿ ಬರೆಯಲಾಗಿದೆ. ಅನಾಮಧೇಯ ವ್ಯಕ್ತಿಯ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಶಿವಮೊಗ್ಗ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
Shivamogga man writes letter of killing three on ganeshotsav murder plot exposed.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 10:07 pm
Mangalore Correspondent
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
SIT, Sujata Bhat, Dharmasthala Case: ಕೇಸ್ ಹಿಂ...
28-08-25 11:27 am
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm