ಬ್ರೇಕಿಂಗ್ ನ್ಯೂಸ್
23-08-22 09:56 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್ 23: ಕೆಎಂಎಫ್ ಡೈರಿಯಲ್ಲಿ ಕೆಲಸ ಕೊಡಿಸುವುದಾಗಿ ನೂರಕ್ಕೂ ಹೆಚ್ಚು ಮಂದಿಯಿಂದ ಕೋಟ್ಯಂತರ ರೂ. ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಸೂತ್ರಧಾರ ರಾಮಪ್ರಸಾದ್ ರಾವ್ ಅಲಿಯಾಸ್ ಹರೀಶ್ ಗೆ ಸಹಕಾರ ನೀಡಿದ ಆರೋಪದಲ್ಲಿ ಪುತ್ತೂರಿನ ಬಲ್ನಾಡು ನಿವಾಸಿ ರಮೇಶ್ ಪೂಜಾರಿ(41), ಮಂಗಳೂರು ಪಡೀಲ್ ನಿವಾಸಿ ಚಂದ್ರಾವತಿ(36), ಬೆಂಗಳೂರಿನ ದೊಡ್ಡತೋಗೂರು ಇಲೆಕ್ಟ್ರಾನಿಕ್ ಸಿಟಿ ನಿವಾಸಿ ಸುರೇಂದ್ರ ರೆಡ್ಡಿ(35)ಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಮಂಗಳೂರಿನ ಸಿಇಎನ್ ಠಾಣೆಯಲ್ಲಿ ದಾಖಲಾದ ದೂರಿನಂತೆ, 138ಕ್ಕೂ ಹೆಚ್ಚು ಮಂದಿಯಿಂದ ಕೆಎಂಎಫ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಚಂದ್ರಾವತಿ ಎನ್ನುವ ಮಹಿಳೆ ತಾನು ಕೆಎಂಎಫ್ ನಲ್ಲಿ ಉದ್ಯೋಗಿಯೆಂದು ಹೇಳಿಕೊಂಡು ಹಲವರಿಂದ ಹಣ ಪಡೆದು ವಂಚಿಸಿದ್ದ ಬಗ್ಗೆ ಸಂತ್ರಸ್ತರು ದೂರಿನಲ್ಲಿ ಹೇಳಿದ್ದರು. 70 ಸಾವಿರದಿಂದ ಹಿಡಿದು 3.5 ಲಕ್ಷ ರೂ. ವರೆಗೆ ನೂರಕ್ಕೂ ಹೆಚ್ಚು ಮಂದಿ ಹಣ ನೀಡಿದ್ದು ಒಟ್ಟು 1.84 ಕೋಟಿ ರೂಪಾಯಿ ಹಣ ಪಡೆದು ಭಾರೀ ವಂಚನೆ ಎಸಗಿರುವುದಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಮೊದಲಿಗೆ ಮಹಿಳೆಯ ಹೆಸರು ಎಫ್ಐಆರ್ ನಲ್ಲಿ ಇರಲಿಲ್ಲ. ಸಂತ್ರಸ್ತರು ನೀಡಿರುವ ದೂರಿನಲ್ಲಿ ಚಂದ್ರಾವತಿ ಎಂಬ ಮಹಿಳೆಯೇ ತಮ್ಮಿಂದ ಹಣ ಪಡೆದು ವಂಚಿಸಿರುವ ಬಗ್ಗೆ ಉಲ್ಲೇಖ ಮಾಡಿದ್ದರು. ಆದರೆ ಕೆಲವು ಒತ್ತಡಗಳ ಕಾರಣವೋ ಏನೋ ಎಫ್ಐಆರ್ ನಲ್ಲಿ ಮಹಿಳೆಯ ಹೆಸರು ಉಲ್ಲೇಖ ಆಗಿರಲಿಲ್ಲ. ಈ ಬಗ್ಗೆ ಹೆಡ್ ಲೈನ್ ಕರ್ನಾಟಕದಲ್ಲಿ ವಂಚನೆ ಪ್ರಕರಣದಲ್ಲಿ ಮಹಿಳೆಯೇ ಕಿಂಗ್ ಪಿನ್ ಎನ್ನುವ ಬಗ್ಗೆ ಸುದ್ದಿ ಪ್ರಸಾರ ಮಾಡಲಾಗಿತ್ತು. ಅಲ್ಲದೆ, ಪೊಲೀಸ್ ಕಮಿಷನರ್ ಅವರ ಗಮನವನ್ನೂ ಸೆಳೆಯಲಾಗಿತ್ತು. ಇದೀಗ ಮಹಿಳೆ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಸಂತ್ರಸ್ತರು ನೀಡಿರುವ ಹಣವನ್ನು ಮರಳಿಸುವ ಜವಾಬ್ದಾರಿಯನ್ನು ಪೊಲೀಸರು ಹೊತ್ತುಕೊಳ್ಳುತ್ತಾರೋ ನೋಡಬೇಕು.
Mangalore KMF Dairy job fraud crores cheated another three including woman arrested. The arrested have been identified as Ramesh, Chandravathi and Surendra Reddy. A conman named Ram Prasad was posing as Harish to the victims hailing from Malar and his partner Mallesh pretended as Dr Hemanth conning several people by assuring them jobs at MRPL. Mallesh allegedly duped the victims of Rs 30 lacs. In this regard, a complaint has been filed at the Bajpe police station.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 10:59 pm
HK News Desk
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am