ಬ್ರೇಕಿಂಗ್ ನ್ಯೂಸ್
20-08-22 10:26 pm HK News Desk ಕ್ರೈಂ
ಉಡುಪಿ, ಆಗಸ್ಟ್ 20: ಮಹಿಳೆಯೊಬ್ಬರು ಆನ್ಲೈನ್ ಗಿಫ್ಟ್ ಆಸೆಗೆ ಬಿದ್ದು ಬರೋಬ್ಬರಿ 15 ಲಕ್ಷ ರೂಪಾಯಿ ಕಳಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದ್ದು, ಈ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೂರ್ಣಿಮಾ ಎಂಬ ಮಹಿಳೆ ಮೋಸಕ್ಕೊಳಗಾದವರು. ಅವರಿಗೆ ಕಳೆದ ಮೇ ತಿಂಗಳಲ್ಲಿ ನ್ಯಾಪ್ಟಾಲ್ ಹೆಸರಲ್ಲಿ ಅಂಚೆ ಲಕೋಟೆ ಬಂದಿತ್ತು. ಅದರಲ್ಲಿ ತಾವು 14.8 ಲಕ್ಷ ರೂ. ಕೂಪನ್ ಬಹುಮಾನ ಗೆದ್ದಿರುವುದಾಗಿ ಹೇಳಿದ್ದರು. ಅಲ್ಲದೆ, ಅದರಲ್ಲೊಂದು ಮೊಬೈಲ್ ನಂಬರ್ ಕೊಟ್ಟಿದ್ದು, ಅದಕ್ಕೆ ಸಂಪರ್ಕಿಸಿದಾಗ ಆನಂದ್ ಎಂದು ತನ್ನನ್ನು ಗುರುತಿಸಿಕೊಂಡ ವ್ಯಕ್ತಿ ಮಾತನಾಡಿದ್ದಾನೆ. ಬಹುಮಾನದ ಹಣ ಪಡೆಯಬೇಕಿದ್ದರೆ, ಕೆಲವೊಂದು ಸರ್ವಿಸ್ ಚಾರ್ಜ್ ಕೊಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಅದರಂತೆ, ಸರ್ವಿಸ್ ಚಾರ್ಜ್ ಹೆಸರಲ್ಲಿ ಪೂರ್ಣಿಮಾ ಅವರು ಹಣವನ್ನು ಕೊಡುತ್ತಾ ಹೋಗಿದ್ದು, ಮೇ 20ರಿಂದ ಆಗಸ್ಟ್ 12ರ ವರೆಗೆ ಬರೋಬ್ಬರಿ 15.33 ಲಕ್ಷ ರೂಪಾಯಿ ಕಳಕೊಂಡಿದ್ದಾರೆ. ಸರ್ವಿಸ್ ಚಾರ್ಜ್, ಎನ್ಓಸಿ, ಎಲ್ ಓಸಿ, ಸರ್ಚಾರ್ಜ್, ಸೆಕ್ಯುರಿಟಿ ಡಿಪಾಸಿಟ್, ಜಿಎಸ್ಟಿ, ಸೆಂಟ್ರಲ್ ಟ್ಯಾಕ್ಸ್ ಎಂದು ಬೇರೆ ಬೇರೆ ರೀತಿಯಲ್ಲಿ ಚಾರ್ಜ್ ಅನ್ನುವ ಹೆಸರಲ್ಲಿ ಹಣವನ್ನು ಪಡೆದಿದ್ದು, ಇಷ್ಟು ಕಟ್ಟಿದ ಬಳಿಕ ಮುಂದಿನದನ್ನು ಕಟ್ಟದೇ ಹೋದರೆ ಕೊಟ್ಟಿದ್ದೂ ಹೋಗುತ್ತದೆ ಎಂಬ ಭಯದಲ್ಲಿ ಹಣ ನೀಡುತ್ತಾ ಹೋಗಿದ್ದಾರೆ.
ಮೂರು ತಿಂಗಳಲ್ಲಿ ಹಣ ಕೊಟ್ಟು ಮೋಸ ಹೋದ ಮಹಿಳೆಗೆ ಕೊನೆಗೂ ಜ್ಞಾನೋದಯವಾಗಿದ್ದು, ಆನ್ಲೈನ್ ಮೋಸಕ್ಕೆ ಬಿದ್ದು ಹಣ ಕಳಕೊಂಡ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ.
.
A woman was conned of lacs of rupees in a case of online fraud. Poornima received a scratch and win coupon reportedly from Naptol company through post. It was mentioned in the coupon that she has won Rs 14.8 lac. When Poornima contacted the mobile number on the coupon, a person who introduced himself as Anand made her believe in the deal.
03-02-26 08:17 pm
HK News Desk
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
03-02-26 11:55 am
HK News Desk
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
03-02-26 04:38 pm
Mangalore Correspondent
ಪತಿ- ಪತ್ನಿ ಕಲಹ ; ಮಾರಣಾಂತಿಕ ಹಲ್ಲೆಗೀಡಾಗಿದ್ದ ಪತ್...
02-02-26 07:36 pm
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm