ಬ್ರೇಕಿಂಗ್ ನ್ಯೂಸ್
20-08-22 01:20 pm HK News Desk ಕ್ರೈಂ
Photo credits : Etv Bharath
ಗುಜರಾತ್, ಆಗಸ್ಟ್ 20: ಶಾಲೆಯಲ್ಲಿ ನೀಡಿರುವ ಹೋಮ್ವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕಾಗಿ ಮಗನ ಮೇಲೆ ನಿವೃತ್ತ ಸೇನಾಧಿಕಾರಿ ಗುಂಡು ಹಾರಿಸಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ.
ಓದುವ ಬದಲಾಗಿ ಹೆಚ್ಚಾಗಿ ಮೊಬೈಲ್ ಬಳಕೆ ಮಾಡ್ತಿದ್ದರಿಂದ ರೋಸಿ ಹೋಗಿರುವ ತಂದೆ ಈ ರೀತಿಯಾಗಿ ನಡೆದುಕೊಂಡಿದ್ದಾನೆಂದು ಹೇಳಲಾಗ್ತಿದೆ. ನಿವೃತ್ತ ಸೇನಾಧಿಕಾರಿ ಧರ್ಮೇಂದ್ರ ಓಂಪ್ರಕಾಶ್ ಕಾಮ್ರೇಜ್ವಾವ್ನಲ್ಲಿ ವಾಸವಾಗಿದ್ದಾರೆ. ಇವರ ಮಗ 9ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದಾನೆ. ಅಧ್ಯಯನ ಮಾಡುವ ಬದಲು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಕುಳಿತಿದ್ದನು. ಇದರಿಂದ ಮಗನ ಮೇಲೆ ಗದರಿದ್ದಾನೆ. ತಂದೆ ಗದರಿಸಿದ್ದಕ್ಕಾಗಿ ಕೋಪಗೊಂಡಿರುವ ಮಗ ವೈಪರ್ನಿಂದ ಹೊಡೆದಿದ್ದಾನೆ. ಇದರಿಂದ ಆಕ್ರೋಶಗೊಂಡಿರುವ ತಂದೆ ಲೈಸನ್ಸ್ ಆಧಾರಿಕ ರಿವಾಲ್ವರ್ನಿಂದ ಮಗನ ಮೇಲೆ ಗುಂಡು ಹಾರಿಸಿದ್ದಾನೆ. ಹೀಗಾಗಿ, ಆತನ ಬಲಗೈ ಗಾಯಗೊಂಡಿದೆ. ಸದ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೂಲತಃ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯವರಾದ ನಿವೃತ್ತ ಸೇನಾಧಿಕಾರಿ ಧರ್ಮೇಂದ್ರ ಓಂಪ್ರಕಾಶ್ ಸದ್ಯ ತಮ್ಮ ಪತ್ನಿ ಸಂಗೀತಾಬೆನ್, ಮಗ ಹಾಗೂ ಮಗಳೊಂದಿಗೆ ಗುಜರಾತ್ನಲ್ಲಿ ವಾಸವಾಗಿದ್ದಾರೆ. ನಿವೃತ್ತ ಸೇನಾಧಿಕಾರಿ ಸದ್ಯ ಸೂರತ್ನಲ್ಲಿ ಪಿಯೂಷ್ಭಾಯ್ ಎಂಬುವವರ ಅಂಗರಕ್ಷಕನಾಗಿ ಕೆಲಸ ಮಾಡ್ತಿದ್ದಾನೆ. ಕಳೆದ ಸೋಮವಾರ ಕೆಲಸ ಮುಗಿಸಿ ರಾತ್ರಿ ಮನೆಗೆ ವಾಪಸ್ ಆಗಿದ್ದಾರೆ. ಈ ವೇಳೆ ಮಗ ಮೊಬೈಲ್ ನೋಡುತ್ತ ಕುಳಿತಿದ್ದನು. ಈ ವಿಚಾರದಲ್ಲಿ ಗದರಿಸಿದ್ದು, ಮೊಬೈಲ್ ಫೋನ್ ಹೆಚ್ಚು ಬಳಸುವ ಬದಲು, ಓದಿನ ಕಡೆ ಗಮನ ಹರಿಸುವಂತೆ ಹೇಳಿದ್ದಾರೆ.
ಪ್ರತಿದಿನ ಅಧ್ಯಯನದ ವಿಚಾರವಾಗಿ ಬೈಯುತ್ತಿದ್ದರಿಂದ ಕೋಪಗೊಂಡ ಮಗ ರಾಜ್ಕುಮಾರ್ ತಂದೆಯ ಮೇಲೆ ವೈಪರ್ನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಆಕ್ರೋಶಗೊಂಡ ತಂದೆ ಆತನ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡಿನ ಶಬ್ದ ಕೇಳಿರುವ ಪಕ್ಕದ ಮನೆಯ ನಿವಾಸಿಗಳು ಅಲ್ಲಿಗೆ ಓಡಿ ಬಂದಿದ್ದಾರೆ. ಜೊತೆಗೆ ಮಧ್ಯಪ್ರವೇಶ ಮಾಡಿರುವ ವ್ಯಕ್ತಿಯೋರ್ವ ಧರ್ಮೇಂದ್ರ ಅವರ ಕೈಯಲ್ಲಿದ್ದ ರಿವಾಲ್ವರ್ ಕಸಿದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಆಯಂಬುಲೆನ್ಸ್ನಲ್ಲಿ ಮಗನನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕಾಮ್ರೇಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಧರ್ಮೇಂದ್ರ ವಿರುದ್ಧ ಐಪಿಸಿ ಸೆಕ್ಷನ್ 307 25 (1) ಮತ್ತು 271 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
Ex military man shoots son on his hand for not doing his homework in Gujrath.
28-08-25 02:41 pm
HK News Desk
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 04:05 pm
Mangalore Correspondent
Loudspeaker, Punjalkatte,Farangipete: ಪುಂಜಾಲ...
28-08-25 02:51 pm
SIT, Sujata Bhat, Dharmasthala Case: ಕೇಸ್ ಹಿಂ...
28-08-25 11:27 am
Pastor John Shamine, Madan Bugadi, IHRACSJC:...
27-08-25 11:02 pm
FIR, Chinnayya, Dharmasthala, Mahesh Thimarod...
27-08-25 09:19 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm