ಬ್ರೇಕಿಂಗ್ ನ್ಯೂಸ್
12-08-22 07:50 pm HK News Desk ಕ್ರೈಂ
ರಾಮನಗರ, ಆಗಸ್ಟ್ 12 : ಅಜ್ಜಿಯೊಬ್ಬರು ಮೊಮ್ಮಗಳ ಹೆಸರಿನಲ್ಲಿ ಬ್ಯಾಂಕ್ನಲ್ಲಿ ಠೇವಣಿಯಿಟ್ಟಿದ್ದ ಹಣವನ್ನು ನಕಲಿ ದಾಖಲೆ ಹಾಗೂ ನಕಲಿ ಮೊಮ್ಮಗಳನ್ನು ಬ್ಯಾಂಕಿಗೆ ತೋರಿಸಿ ಕಬಳಿಸಿದ ಪ್ರಕರಣ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ನಡೆದಿದೆ.
ರಾಮನಹಳ್ಳಿಯ ವೃದ್ಧೆ ನಂಜಮ್ಮ ಎಂಬವರು ಬಿಡದಿಯ ಕೆನರಾ ಬ್ಯಾಂಕ್ನಲ್ಲಿ ಮೊಮ್ಮಗಳು ಜ್ಞಾನೇಶ್ವರಿ ಹೆಸರಿನಲ್ಲಿ 5 ಲಕ್ಷ ರೂ. ಠೇವಣಿ ಇಟ್ಟಿದ್ದರು. ಕೆಲವು ಸಮಯದ ಬಳಿಕ ನಂಜಮ್ಮ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಅಜ್ಜಿಯ ಸಂಬಂಧಿಕರಾಗಿದ್ದ ರತ್ಮಮ್ಮ ಮತ್ತು ಜಗದೀಶ್ ಎಂಬವರು ಬ್ಯಾಂಕ್ಗೆ ಜ್ಞಾನೇಶ್ವರಿ ಹೆಸರಲ್ಲಿ ಬಾಲಕಿಯನ್ನು ಕರೆತಂದಿದ್ದು ತಮ್ಮದೇ ಮಗಳು ಜ್ಞಾನೇಶ್ವರಿ. ತಾಯಿ ನಂಜಮ್ಮ ತೀರಿಕೊಂಡಿದ್ದಾರೆಂದು ಜಗದೀಶ್ ದಾಖಲೆ ತೋರಿಸಿದ್ದರು. ಅಲ್ಲದೆ, ಠೇವಣಿ ಹಣಕ್ಕೆ ಜ್ಞಾನೇಶ್ವರಿ ತಂದೆಯಾದ ತನ್ನನ್ನು ಮೈನರ್ ಗಾರ್ಡಿಯನ್ ಆಗಿಸಿ, ಜಂಟಿ ಖಾತೆಯಲ್ಲಿ ಠೇವಣಿ ವರ್ಗಾವಣೆ ಮಾಡಲು ಹೇಳಿದ್ದರು. ಅಲ್ಲದೆ ನಂಜಮ್ಮರ ಮರಣ ಪ್ರಮಾಣಪತ್ರ, ಠೇವಣಿ ಹಣದ ಬಾಂಡ್ ನಂಬರ್ ಸಹಿತ ದಾಖಲೆಗಳನ್ನು ಬ್ಯಾಂಕ್ಗೆ ನೀಡಿದ್ದರು. ಇದರ ಆಧಾರದಲ್ಲಿ ದಾಖಲೆಗಳನ್ನು ಪರಿಶೀಲಿಸಿದ ಬ್ಯಾಂಕ್ ಸಿಬ್ಬಂದಿ ಮೊಮ್ಮಗಳು ಜ್ಞಾನೇಶ್ವರಿ ಹೆಸರಿನಲ್ಲಿ ನಂಜಮ್ಮ ಇಟ್ಟಿದ್ದ 5 ಲಕ್ಷ ರೂ.ಗಳನ್ನು ಜಗದೀಶ್ ಅವರ ಹೆಸರಿನಲ್ಲಿ ತೆರೆದಿದ್ದ ಜಂಟಿ ಉಳಿತಾಯ ಖಾತೆಗೆ 2022ರ ಜೂನ್ 23ರಂದು ವರ್ಗಾವಣೆ ಮಾಡಿದ್ದರು.
ಇದಾದ ನಂತರ 2022ರ ಜುಲೈ 1ರಂದು ಮೃತ ನಂಜಮ್ಮ ಅವರ ಮಗ ಚಂದ್ರಶೇಖರ್ ಬ್ಯಾಂಕ್ಗೆ ಬಂದು ತನ್ನ ಮಗಳು ಜ್ಞಾನೇಶ್ವರಿ ಹೆಸರಿನಲ್ಲಿ ತಾಯಿ ಇಟ್ಟಿರುವ ಠೇವಣಿ ಹಣದ ಬಗ್ಗೆ ವಿಚಾರಿಸಿದ್ದರು. ಬ್ಯಾಂಕ್ ಸಿಬ್ಬಂದಿ ದಾಖಲೆ ಪರಿಶೀಲಿಸಿದಾಗ, ಇದಕ್ಕೂ ಹಿಂದೆ ರತ್ನಮ್ಮ ಹಾಗೂ ಜಗದೀಶ್ ಅವರು ಬ್ಯಾಂಕ್ಗೆ ಸಲ್ಲಿಸಿದ್ದ ದಾಖಲೆಗಳು ನಕಲಿ ಅಲ್ಲದೆ, ಬ್ಯಾಂಕ್ಗೆ ಕರೆತಂದಿದ್ದ ಜ್ಞಾನೇಶ್ವರಿಯೂ ನಕಲಿ ಎಂದು ಗೊತ್ತಾಗಿದೆ. ರತ್ನಮ್ಮ ಹಾಗೂ ಜಗದೀಶ್ ಮೋಸ ಎಸಗಿರುವ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಕೇಶವಮೂರ್ತಿ ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Family loot Rs 5 lakhs by showing fake grand daughter in the bank at Ramnagara.
27-08-25 06:21 pm
Bangalore Correspondent
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
Kannada Anchor Anushree, Marriage, Mangalore:...
27-08-25 02:51 pm
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು, ಮುಸ್ಲಿಮರ...
27-08-25 12:33 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
27-08-25 11:02 pm
Mangalore Correspondent
FIR, Chinnayya, Dharmasthala, Mahesh Thimarod...
27-08-25 09:19 pm
Praveen Nettaru, NIA, Mangalore: ಪ್ರವೀಣ್ ನೆಟ್...
27-08-25 08:46 pm
Pastor John Shamine, BJP, Fake Human Rights:...
26-08-25 10:57 pm
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm