ಬ್ರೇಕಿಂಗ್ ನ್ಯೂಸ್
11-07-22 01:36 pm Bangalore Correspondent ಕ್ರೈಂ
ಬೆಂಗಳೂರು, ಜುಲೈ 11 : ಯುವಕನನ್ನು ಹನಿಟ್ರಾಪ್ ಮಾಡಿದ ತಂಡವೊಂದು ಸಿಬಿಐ ದಾಳಿ ಹೆಸರಲ್ಲಿ ಐದು ಲಕ್ಷ ರೂಪಾಯಿ ಪೀಕಿಸಿ ವಂಚಿಸಿದ ಬಗ್ಗೆ ಬೆಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಯುವಕನೊಬ್ಬ ಫೇಸ್ ಬುಕ್ ನಲ್ಲಿ ಪರಿಚಯ ಆಗಿದ್ದ ಯುವತಿಯ ಜೊತೆ ಚಾಟ್ ಮಾಡುತ್ತಾ ಹತ್ತಿರವಾಗಿದ್ದ. ಆನಂತರ ವಿಡಿಯೋ ಕರೆ ಮಾಡುತ್ತಿದ್ದು, ಆಕೆಯ ಒತ್ತಾಸೆಯಂತೆ ಇಬ್ಬರೂ ಬೆತ್ತಲಾಗಿದ್ದರು. ಈ ವೇಳೆ, ಯುವಕನ ಬೆತ್ತಲೆ ವಿಡಿಯೋವನ್ನು ಚಿತ್ರೀಕರಿಸಿದ್ದ ಯುವತಿ ಮತ್ತು ಆಕೆಯ ಕಡೆಯವರು ಹಣ ನೀಡುವಂತೆ ಬೇಡಿಕೆಯಿಟ್ಟಿದ್ದರು.
ಯುವಕ ಹಣ ನೀಡದೇ ಇದ್ದಾಗ ಆಕೆಯ ಜೊತೆಗಿದ್ದ ಇತರ ಆರೋಪಿಗಳು, ಯುವಕನಿಗೆ ಕರೆ ಮಾಡಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಿದ್ದಾರೆ. ಪ್ರಕರಣ ಸಿಬಿಐಗೆ ಹೋಗಿದ್ದು ಅಲ್ಲಿ ಎಫ್ ಐಆರ್‌ಗೆ ದಾಖಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಎಫ್ ಐಆರ್ ನಲ್ಲಿ ಸಂತ್ರಸ್ತ ಯುವಕನ ಹೆಸರು ಬರುವಂತೆ ಎಡಿಟ್ ಮಾಡಿ, ಅದನ್ನು ಆತನಿಗೆ ಕಳಿಸಿ ಬೆದರಿಸಿದ್ದಾರೆ. ಸಿಬಿಐ ತಂಡ ದಾಳಿ ನಡೆಸಿ, ನಿನ್ನನ್ನು ಬಂಧಿಸುತ್ತಾರೆಂದು ಹೇಳಿ ಹೆದರಿಕೆ ಹುಟ್ಟಿಸಿದ್ದರು. ಒಂದ್ವೇಳೆ ಹಣ ನೀಡಿದರೆ, ಸಿಬಿಐ ಅಧಿಕಾರಿಗಳು ಬಂಧಿಸದಂತೆ ನೋಡಿಕೊಳ್ಳುತ್ತೇವೆ ಎಂದು ಆರೋಪಿಗಳು ನಂಬಿಸಿದ್ದಾರೆ. ಇದೇ ರೀತಿ ಹೇಳಿ ಪದೇ ಪದೇ ಖಾತೆಗೆ ಹಣ ಹಾಕಿಸಿಕೊಂಡಿದ್ದಾರೆ. 5.58 ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡಿದ್ದು ಇನ್ನೂ ನೀಡುವಂತೆ ಬೆದರಿಸಿದ್ದರು.
ಇಲ್ಲದಿದ್ದರೆ ಸಿಬಿಐ ಅಧಿಕಾರಿಗಳು ನಿಮ್ಮ ಮನೆಗೆ ಬರುತ್ತಾರೆ ಎಂದು ಆರೋಪಿಗಳು ಬೆದರಿಸಿದ್ದರು. ಇದರಿಂದ ಬೇಸತ್ತ ಯುವಕ, ಬೆಂಗಳೂರು ನಗರ ಆಗ್ನೇಯ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದು ತನಗಾದ ವಂಚನೆಯ ಬಗ್ಗೆ ತಿಳಿಸಿದ್ದಾನೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Facebook Blackmail and Honeytrap, lakhs looted in the name of Nude Video, Gang arrested by Bangalore police. Girl who used to chat with young boys tried to make them naked and record the video after which they began to blackmail many.
27-08-25 06:21 pm
Bangalore Correspondent
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
Kannada Anchor Anushree, Marriage, Mangalore:...
27-08-25 02:51 pm
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು, ಮುಸ್ಲಿಮರ...
27-08-25 12:33 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
27-08-25 11:02 pm
Mangalore Correspondent
FIR, Chinnayya, Dharmasthala, Mahesh Thimarod...
27-08-25 09:19 pm
Praveen Nettaru, NIA, Mangalore: ಪ್ರವೀಣ್ ನೆಟ್...
27-08-25 08:46 pm
Pastor John Shamine, BJP, Fake Human Rights:...
26-08-25 10:57 pm
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm