ಬ್ರೇಕಿಂಗ್ ನ್ಯೂಸ್
25-05-22 11:50 am HK News Desk ಕ್ರೈಂ
ಟೆಕ್ಸಾಸ್, ಮೇ 25: ಅಮೆರಿಕದ ಟೆಕ್ಸಾಸ್ ನಗರದಲ್ಲಿ 18 ವರ್ಷದ ಹುಡುಗನೊಬ್ಬ ಶಾಲೆಯೊಳಗೆ ನುಗ್ಗಿ 19 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕಿಯರನ್ನು ಭೀಕರವಾಗಿ ಗುಂಡಿಟ್ಟು ಹತ್ಯೆಗೈದ ಘಟನೆ ನಡೆದಿದೆ. ಆಬಳಿಕ ಶಾಲೆಯ ಸೆಕ್ಯುರಿಟಿ ಅಧಿಕಾರಿಗಳು 18 ವರ್ಷದ ಹಂತಕನನ್ನು ಕೂಡ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
ಹೈಸ್ಕೂಲ್ ಕಲಿತಿದ್ದ ಸಾಲ್ವಡೋರ್ ರಾಮೋಸ್((18) ಎಂಬ ಹುಡುಗ ಭೀಕರ ಹತ್ಯಾಕಾಂಡ ನಡೆಸಿದಾತ. ಆತ ಮೊದಲಿಗೆ ತನ್ನ ಅಜ್ಜಿಗೆ ಗುಂಡಿಟ್ಟು ಆಬಳಿಕ ಶಾಲೆಯ ಒಳಕ್ಕೆ ನುಗ್ಗಿದ್ದ. ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಮತ್ತು ರಾಮೋಸ್ ಗೆ ಸಂಬಂಧಿಯಾಗಿರುವ ಎವಾ ಮೈರ್ ಲೆಸ್(44) ಮೇಲೂ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಸತ್ತ ಮಕ್ಕಳಲ್ಲಿ 7 ವರ್ಷದಿಂದ 11 ವರ್ಷದ ಒಳಗಿನ ಪುಟಾಣಿಗಳಾಗಿದ್ದು, ನೋಡ ನೋಡುತ್ತಲೇ ಗುಂಡು ಹಾರಿಸಿದ್ದಾನೆ. ಮಕ್ಕಳು, ಸಿಬಂದಿ ಗುಂಡಿನ ಸದ್ದು ಕೇಳಿ ಹೊರಗೆ ಓಡಿದ್ದಾರೆ.
ಟೆಕ್ಸಾಸ್ ನಗರದ ಉವೇಲ್ಡ್ ಎಂಬಲ್ಲಿನ ಎಲಿಮೆಂಟರಿ ಶಾಲೆಯಲ್ಲಿ ಘಟನೆ ನಡೆದಿದೆ. ರಾಮೋಸ್ ಟೆಕ್ಸಾಸ್ ನಗರದ ನಾರ್ತ್ ಡಕೋಟ ಎಂಬಲ್ಲಿ ಜನಿಸಿದ್ದು, ಉವೇಲ್ಡ್ ಶಾಲೆಯಲ್ಲಿ ಹೈಸ್ಕೂಲ್ ಕಲಿತು ಅಲ್ಲಿಯೇ ನೆಲೆಸಿದ್ದ. ಗುಂಡಿನ ಹಾರಾಟ ನಡೆಸುವುದಕ್ಕೂ ಮುನ್ನ ಪಿಸ್ತೂಲ್ ಹಿಡಿದುಕೊಂಡು ತಯಾರಾಗಿರುವುದನ್ನು ತನ್ನ ಇನ್ ಸ್ಟಾಗ್ರಾಮಿನಲ್ಲಿ ಪೋಸ್ಟ್ ಮಾಡಿದ್ದ. ಒಬ್ಬಳು ಹುಡುಗಿಗೆ ಟ್ಯಾಗ್ ಮಾಡಿದ್ದು, ನಾನು ತಯಾರಾಗಿದ್ದೇನೆ. ನಿನಗೆ ಗನ್ ಸಹಿತ ಟ್ಯಾಗ್ ಮಾಡಿದ್ದೇನೆ ಎಂದು ಹೇಳಿದ್ದಾನೆ. ಅದಕ್ಕುತ್ತರಿಸಿದ್ದ ಹುಡುಗಿ, ನಿನ್ನ ಧೈರ್ಯದ ಬಗ್ಗೆ ನಂಗೊತ್ತು. ಗನ್ ಹಿಡಿದು ಭಯ ಪಡಿಸುವುದು ಬೇಡ ಎಂದಿದ್ದಳು.
ಸಾಲ್ವಡೋರ್ ರಾಮೋಸ್ ತನ್ನ ಕೈಯಲ್ಲಿ ಹ್ಯಾಂಡ್ ಗನ್ ಮತ್ತು ರೈಫಲ್ ಹಿಡಿದುಕೊಂಡಿದ್ದ. ಇದರ ಫೋಟೋಗಳನ್ನು ಆತನೇ ಪೋಸ್ಟ್ ಮಾಡಿದ್ದು ಈಗ ವೈರಲ್ ಆಗಿವೆ. ಆತನಿಗೆ ಉವೇಡ್ ಹೈಸ್ಕೂಲಿನಲ್ಲಿದ್ದಾಗ ಗೆಳೆಯರು ತಮಾಷೆ ಮಾಡಿದ್ದರಂತೆ. ಆತನ ಬಟ್ಟೆ ಮತ್ತು ಬಡತನದ ಬಗ್ಗೆ ಹೇಳಿಕೊಂಡು ಕಿಚಾಯಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಶೂಟೌಟ್ ನಡೆಸಿದ್ದಾನೆಯೇ, ಬೇರೆ ಏನಾದ್ರೂ ಕಾರಣಗಳಿವೆಯೇ ಎನ್ನುವುದು ಗೊತ್ತಾಗಿಲ್ಲ.
ಘಟನೆ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಆಘಾತ ವ್ಯಕ್ತಪಡಿಸಿದ್ದು ರೈಫಲ್, ಗನ್ ಗಳು ಅಂಗಡಿಗಳಲ್ಲಿ ಸಿಗುತ್ತಿರುವುದೇ ಇದಕ್ಕೆ ಕಾರಣ. ಒಬ್ಬ ಸಾಮಾನ್ಯ ಹುಡುಗ ನೇರವಾಗಿ ಗನ್ ಸ್ಟೋರ್ ನಿಂದ ರೈಫಲ್ ಖರೀದಿಸಿ ತರುತ್ತಾನೆ ಅನ್ನುವುದೇ ಇದಕ್ಕೆ ಮೂಲ. ಇಂಥವಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದ್ದಾರೆ. ಅಮೆರಿಕದಲ್ಲಿ ಈ ರೀತಿ ಮಕ್ಕಳನ್ನು ಟಾರ್ಗೆಟ್ ಮಾಡಿ ಕೊಲ್ಲುವ ಕೃತ್ಯ ಇದು ಮೊದಲಲ್ಲ. 2018ರಲ್ಲಿ ಫ್ಲೋರಿಡಾ ನಗರದ ಪಾರ್ಕ್ ಲ್ಯಾಂಡ್ ನಲ್ಲಿ ಹೈಸ್ಕೂಲ್ ಒಂದಕ್ಕೆ ನುಗ್ಗಿ ಶೂಟೌಟ್ ನಡೆಸಿ, 14 ವಿದ್ಯಾರ್ಥಿಗಳು ಮತ್ತು ಮೂವರು ಸಿಬಂದಿಯನ್ನು ಕೊಲ್ಲಲಾಗಿತ್ತು. 2012ರಲ್ಲಿ ಕನೆಕ್ಟಿಕಟ್ ನಗರದಲ್ಲಿ ಎಲಿಮೆಂಟರಿ ಶಾಲೆಗೆ ನುಗ್ಗಿ ಗುಂಡಿನ ದಾಳಿ 20 ವಿದ್ಯಾರ್ಥಿಗಳು, 6 ಸಿಬಂದಿಯನ್ನು ಹತ್ಯೆ ಮಾಡಲಾಗಿತ್ತು.
A teenage gunman killed at least 19 young children and two adults at an elementary school in Texas on Tuesday, prompting a furious President Joe Biden to denounce the US gun lobby and vow to end the nation's cycle of mass shootings.The attack in Uvalde -- a small community about an hour from the Mexican border -- was the deadliest US school shooting in years, and the latest in a spree of bloody gun violence across America.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm