ಬ್ರೇಕಿಂಗ್ ನ್ಯೂಸ್
12-06-23 10:22 pm Mangalore Correspondent ಕಾಲೇಜು ಕ್ಯಾಂಪಸ್
ಮಂಗಳೂರು, ಜೂನ್ 12: ನಗರದ ಬೆಸೆಂಟ್ ಸಂಧ್ಯಾ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಆಯೋಜಿಸಿದ್ದ ಬಿ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿ ಪದುವಾ ಕಾಲೇಜು ಮೈದಾನದಲ್ಲಿ ಇತ್ತೀಚೆಗೆ ಜರಗಿತು. ಪಂದ್ಯಾವಳಿಯನ್ನು ಬೆಸೆಂಟ್ ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಸತೀಶ ಕುಮಾರ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಬೆಸೆಂಟ್ ಸಂಧ್ಯಾ ಕಾಲೇಜು ಪ್ರಾಂಶುಪಾಲ ಡಾ.ಲಕ್ಷೀನಾರಾಯಣ ಭಟ್, ಸಂಘದ ಮಾಜಿ ಸಲಹೆಗಾರರಾದ ಗಣಪತಿ ಭಟ್ ಎಂ, ಡಾ. ವಾಸಪ್ಪಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ್, ಕಾರ್ಯದರ್ಶಿ ಪ್ರಣವ್ ಗಣೇಶ್. ಕ್ರೀಡಾ ಕಾರ್ಯದರ್ಶಿ ಮನೀಷ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




ಪಂದ್ಯಾವಳಿಯಲ್ಲಿ ಆರು ತಂಡಗಳಾದ ಟೀಮ್ ವಿಕ್ಟರಿ, ಟೀಮ್ ಬ್ಲೂ ಸ್ಟ್ರೀಕ್, ಟೀಮ್ ಡಾಮಿನೇಟ್, ಟೀಮ್ ಮಾಂಕ್, ಆರೇಜ್ ಆರ್ಮಿ ಮತ್ತು ಟೀಮ್ ಮಾನ್ಸ್ಟರ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ವಿಜೇತ ತಂಡಗಳಿಗೆ ಹಾಗೂ ಸರಣಿ ಶ್ರೇಷ್ಠ ಕ್ರೀಡಾಪಟುಗಳಿಗೆ ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿತ್ತು. ದಿನವಿಡೀ ನಡೆದ ಲೀಗ್ ಸ್ಪರ್ಧೆಯಲ್ಲಿ ಲೋಹಿತ್ ಬಜಾಲ್ ಮಾಲಕತ್ವದ ಆರೇಜ್ ಆರ್ಮಿ ತಂಡವು ಜಯಶಾಲಿಯಾಗಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಗೌರವ್ ಮೊಹ್ಲಿ ಮಾಲಕತ್ವದ ಟೀಮ್ ವಿಕ್ಟರಿ ತಂಡವು ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು.



ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉದ್ಯಮಿ ಹಾಗೂ ಹಳೆ ವಿದ್ಯಾರ್ಥಿ ಉದಯ್ ಆಚಾರ್, ಕಾಲೇಜು ಪ್ರಾಂಶುಪಾಲರಾದ ಡಾ. ಲಕ್ಷೀನಾರಾಯಣ ಭಟ್ ಹಾಗೂ ಎಸ್.ಡಿ.ಎಂ ಉಪನ್ಯಾಸಕರಾದ ಪ್ರವೀಣ ದೆಂಗೋಡಿ ವಿಜೇತರಿಗೆ ಬಹುಮಾನ ವಿತರಿಸಿದರು. ಮದುರಾಜ್ ಅವರು ಸರಣಿ ಶ್ರೇಷ್ಠ, ಅಂಬಾತನಯ ಶ್ರೇಷ್ಠ ದಾಂಡಿಗನಾಗಿ ಹಾಗೂ ಸುನೀಲ್ ಶ್ರೇಷ್ಠ ಎಸೆತಗಾರನಾಗಿ ಪ್ರಶಸ್ತಿ ಪಡೆದರು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ್ ವಂದಿಸಿದರು. ಪ್ರತೀಶ್ ಗೌರೀಶ್ ಕಾರ್ಯಕ್ರಮ ನಿರೂಪಿಸಿದರು.
Alumni of Besant Evening college host BPL cricket Match 2023 in Mangalore.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm