ಬ್ರೇಕಿಂಗ್ ನ್ಯೂಸ್
09-12-25 11:55 am Udupi Correspondent ಕರಾವಳಿ
ಉಡುಪಿ, ಡಿ.9 : ಉದ್ಯಾವರದಲ್ಲಿ ಅಸ್ವಸ್ಥಗೊಂಡ ರೋಗಿಯೊಬ್ಬರಿಗೆ ರಾತ್ರಿ 7 ಗಂಟೆಯಿಂದ 9.30ರ ವರೆಗು ಯಾವುದೇ ಆಂಬ್ಯುಲೆನ್ಸ್ ಸಿಗದೆ ಬೇಸತ್ತ ಸಾಮಾಜಿಕ ಕಾರ್ಯಕರ್ತರೊಬ್ಬರು ತನ್ನ ಗೂಡ್ಸ್ ಟೆಂಪೋದಲ್ಲಿ ಮಂಚ ಇಟ್ಟು ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ರೋಗಿಯ ಸಂಬಂಧಪಟ್ಟವರು 108 ಆಂಬ್ಯು ಲೆನ್ಸ್‌ಗೆ ಕರೆ ಮಾಡಿದಾಗ ಆಂಬ್ಯುಲೆನ್ಸ್ ಲಭ್ಯವಿರಲಿಲ್ಲ. ಖಾಸಗಿ ಆಂಬ್ಯುಲೆನ್ಸ್‌ಗಳು ಕೂಡ ಲಭ್ಯವಿಲ್ಲದಿರುವುದರಿಂದ ರೋಗಿಯ ಕಡೆಯವರು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಅವರನ್ನು ಸಂಪರ್ಕಿಸಿದ್ದರು. .
ವಿಶು ಶೆಟ್ಟಿ ಕೂಡ ಖಾಸಗಿ ಆಂಬ್ಯುಲೆನ್ಸ್ ಸಂಪರ್ಕಿಸಿದ್ದು, ಆಂಬ್ಯುಲೆನ್ಸ್ ಸಿಗದೇ ಇರುವುದರಿಂದ ರೋಗಿ ತೀರಾ ಚಿಂತಾಜನಕ ಸ್ಥಿತಿಗೆ ತಲುಪಿದ್ದರು. ಬೇರೆ ದಾರಿ ಕಾಣದೇ ತನ್ನ ಗೂಡ್ಸ್ ಟೆಂಪೋಗೆ ಮಂಚ ಇಟ್ಟು ಅದರಲ್ಲಿ ರೋಗಿಯನ್ನು ಮಲಗಿಸಿ ಜಿಲ್ಲಾಸ್ಪತ್ರೆಗೆ ತಲುಪಿಸಿದ್ದಾರೆ.
ಕಳೆದೊಂದು ವರ್ಷದಿಂದ 108 ಆಂಬ್ಯುಲೆನ್ಸ್ ಸರಿಯಾಗಿ ಲಭ್ಯ ಇಲ್ಲದಿರುವುದರಿಂದ ನೂರಾರು ರೋಗಿಗಳು ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಳೆದ ಒಂದು ವರ್ಷದಿಂದ ಸರಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಈ ಘಟನೆಯಲ್ಲಿ ಎರಡೂವರೆ ಗಂಟೆ ಆಂಬ್ಯುಲೆನ್ಸ್ ಸಿಗದೆ ರೋಗಿ ಚಿಂತಾಜನಕ ಪರಿಸ್ಥಿತಿ ತಲುಪಿದ್ದು, ವಿಧಿ ಇಲ್ಲದೇ ಗೂಡ್ಸ್ ಟೆಂಪೋದಲ್ಲಿ ರೋಗಿಯನ್ನು ಕರೆದುಕೊಂಡು ಹೋಗಬೇಕಾಯಿತು. ಇನ್ನಾದರೂ ಜಿಲ್ಲಾಡಳಿತ ಈ ಬಗ್ಗೆ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ವಿಶು ಶೆಟ್ಟಿ ಅಂಬಲಪಾಡಿ ಆಗ್ರಹಿಸಿದ್ದಾರೆ.
A shocking incident unfolded in Udyavara, Udupi, where a critically ill patient had to be transported to the hospital in a goods tempo fitted with a cot, after waiting two and a half hours for an ambulance that never arrived.
16-03-26 05:52 pm
HK News Staffer
ಐಎಎಸ್ ಅಧಿಕಾರಿಯೆಂದು ಪೋಸು ಕೊಟ್ಟು ಜನಸಾಮಾನ್ಯರಿಗೆ,...
16-03-26 03:36 pm
Chitradurga Accident: ಚಿತ್ರದುರ್ಗದಲ್ಲಿ ಭೀಕರ ಅಪ...
15-03-26 04:27 pm
ಲಿವರ್ ಸಿರೋಸಿಸ್ ಕಾಯಿಲೆಗೆ ತುತ್ತಾಗಿದ್ದ ತಂದೆ ; ತನ...
14-03-26 10:14 pm
ಮಲೆನಾಡಿಗೆ ಇಂಡಿಗೋ ಆಘಾತ ; ವಿಮಾನ ದುರಂತ ಹಿನ್ನೆಲೆ,...
13-03-26 12:09 pm
16-03-26 02:44 pm
HK News Staffer
ಯುಪಿಎಸ್ಸಿ ಪಾಸ್, ಐಎಎಸ್ ಅಧಿಕಾರಿ ಆಗುತ್ತೇನೆಂದು ನಂ...
16-03-26 12:38 pm
ಒಡಿಶಾದ ಕಟಕ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ; I...
16-03-26 12:34 pm
ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ರಷ್ಯಾಕ್ಕೆ ;...
15-03-26 05:37 pm
ಎಪ್ರಿಲ್ 9 ಮತ್ತು 23 ; ಕೇರಳ, ತಮಿಳುನಾಡಿನಲ್ಲಿ ಒಂದ...
15-03-26 05:08 pm
16-03-26 02:46 pm
HK News Staffer
Besant Evening College, Blood Donation: ಬೆಸೆಂ...
15-03-26 09:10 pm
Udupi Accident: ತಾಯಿ-ಮಗ ತೆರಳುತ್ತಿದ್ದ ಸ್ಕೂಟರ್...
14-03-26 09:26 pm
ಕಂದಾಯ- ಅರಣ್ಯ ಭೂಮಿ ಗುರುತಿಸಲು ಜಿಲ್ಲಾ ಮಟ್ಟದಲ್ಲಿ...
14-03-26 08:31 pm
ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಬಂಟ್ವಾಳದ ಯುವ ಛಾಯಾ...
14-03-26 06:07 pm
15-03-26 12:49 pm
HK News Desk
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am