ಬ್ರೇಕಿಂಗ್ ನ್ಯೂಸ್
08-12-25 04:52 pm Mangalore Correspondent ಕರಾವಳಿ
ಪುತ್ತೂರು, ಡಿ.8 : ಧರ್ಮಸ್ಥಳ ಎಸ್ಐಟಿ ತನಿಖೆ ವಿಚಾರದಲ್ಲಿ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು ಮುಖ್ಯ ವಾಹಿನಿಯ ಮಾಧ್ಯಮಗಳೇ ಷಡ್ಯಂತ್ರ ನಡೆಸ್ತಿರೋದು. ಎಸ್ಐಟಿ ಅಧಿಕಾರಿಗಳು ಕೂಡ ಪ್ರಕರಣ ಮುಚ್ಚಿ ಹಾಕಲು ಷಡ್ಯಂತ್ರ ಮಾಡುತ್ತಿದ್ದಾರೆ. ಇವರಿಗೆಲ್ಲ ಮಹಾಲಿಂಗೇಶ್ವರ ಏನು ಕೊಡಬೇಕೋ ಕೊಡುತ್ತಾನೆ. ಸೌಜನ್ಯಾ ಕೇಸಿನ ಬಗ್ಗೆ, ಧರ್ಮಸ್ಥಳ ಅತ್ಯಾಚಾರ ಬಗ್ಗೆ ಆದಿಚುಂಚನಗಿರಿ ಮಠದ ಸ್ವಾಮೀಜಿಗೂ ಹೇಳಿದ್ದೇವೆ. ಶಿಕ್ಷೆ ಕೊಡಿಸುತ್ತೇನೆ ಎಂದಿದ್ದವರು ಈಗ ಯಾಕೆ ಬಾಯಿ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಡೀಪಾರು ನೋಟೀಸಿನ ಕುರಿತಾಗಿ ಪುತ್ತೂರಿನಲ್ಲಿ ವಿಭಾಗಾಧಿಕಾರಿ ಸ್ಟೆಲ್ಲಾ ಮೇರಿಸ್ ಅವರನ್ನು ಭೇಟಿಯಾಗಲು ಬಂದಿದ್ದ ತಿಮರೋಡಿ, ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೈಮುಗಿದು ಪ್ರಾರ್ಥನೆ ಸಲ್ಲಿಸಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಎಸ್ಐಟಿ ತನಿಖೆ ಆರಂಭ ಆಗಿದ್ದಷ್ಟೇ. ತನಿಖೆ ಬಗ್ಗೆ ಕೋರ್ಟಿಗೆ ವರದಿಯನ್ನಷ್ಟೆ ಕೊಟ್ಟಿದ್ದಾರೆ. ಆದರೆ ರಾಜ್ಯದ ಪ್ರಮುಖ ಮಾಧ್ಯಮಗಳು ಇದನ್ನು ಚಾರ್ಜ್ ಶೀಟ್ ಸಲ್ಲಿಸಿದ್ದಾಗಿ ಹೇಳಿ ಪ್ರಕರಣ ಮುಗಿಸುವ ತರಾತುರಿ ತೋರಿಸಿವೆ. ರಾಜ್ಯ ಸರ್ಕಾರ 20 ವರ್ಷಗಳ ಅಸಹಜ ಸಾವುಗಳ ಬಗ್ಗೆ ತನಿಖೆಗೆ ಆದೇಶಿಸಿ ಎಸ್ಐಟಿ ರಚಿಸಿರುವುದು. ಇಲ್ಲಿ ಅತ್ಯಾಚಾರಿಗಳನ್ನೇ ವಿಚಾರಣೆ ಮಾಡಿಲ್ಲ. ತನಿಖೆ ಮುಗಿಯೋದು ಹೇಗೆ ಸ್ವಾಮಿ ಎಂದು ಮಹೇಶ್ ಶೆಟ್ಟಿ ತಿಮರೋಡಿ ಪ್ರಶ್ನಿಸಿದರು.
ನಾವು ಮತ್ತು ಚಿನ್ನಯ್ಯ ಆದಿಚುಂಚನಗಿರಿ ಮಠಕ್ಕೆ ಹೋಗಿದ್ದೆವು, ನಮ್ಮ ಜೊತೆಗೆ ಸೌಜನ್ಯನ ಮನೆಯವರಿದ್ದರು. ಸೌಜನ್ಯಾ ಪರ ಹೋರಾಟಗಾರರೂ ಇದ್ದರು. ಆದಿಚುಂಚನಗಿರಿ ಮಠದಲ್ಲಿ ಒಂದೂವರೆ ಗಂಟೆ ಕಾಲ ಸ್ವಾಮೀಜಿ ಮುಂದೆಯೇ ಚಿನ್ನಯ್ಯ ಎಲ್ಲವನ್ನೂ ಬಿಡಿಸಿ ಹೇಳಿದ್ದಾನೆ. ನಾನು ಬಿಡುಗಡೆ ಮಾಡಿದ ಒಂದೂವರೆ ಗಂಟೆಯ ವಿಡಿಯೋಕ್ಕಿಂತ ಜಾಸ್ತಿಯೇ ಅಲ್ಲಿ ಮಾತನಾಡಿದ್ದಾನೆ. ಯಾರ್ಯಾರು ಅತ್ಯಾಚಾರ ಮಾಡಿದ್ದಾರೆ, ಮಾಡಿಸಿದ್ದಾರೆ ಎಲ್ಲವನ್ನೂ ಹೇಳಿದ್ದಾನೆ. ಸ್ವಾಮೀಜಿಗಳು ಯಾಕೆ ಈ ವಿಚಾರವನ್ನು ಸಮಾಜದ ಮುಂದೆ ಹೇಳುತ್ತಿಲ್ಲ. ಸ್ವಾಮೀಜಿ ಸ್ವತಃ ಈ ವಿಚಾರವನ್ನು ಮುಖ್ಯಮಂತ್ರಿಗಳಲ್ಲಿ ಹೇಳಿ ಶಿಕ್ಷೆ ಕೊಡಿಸುತ್ತೇನೆ ಎಂದಿದ್ದರು. ಮಹಾಕಾಳನ ಮೇಲೆ ಪ್ರಮಾಣ ಮಾಡಿ ಶಿಕ್ಷೆ ಕೊಡಿಸಿಯೇ ಕೊಡಿಸುತ್ತೇನೆ ಎಂದಿದ್ದಾರೆ, ಈಗ ಸ್ವಾಮೀಜಿಗಳು ನ್ಯಾಯ ಕೊಡಿಸಲಿ, ಅದು ಬಿಟ್ಟು ಮಠದಲ್ಲಿ ಕುಳಿತು ರಾಜಕೀಯ ಮಾಡುವುದಲ್ಲ ಎಂದರು.
ನನ್ನ ಮಾತು ಎಲ್ಲಾ ಸ್ವಾಮೀಜಿಗಳಿಗೂ ಅನ್ವಯಿಸುತ್ತದೆ. ನಾವು ನೇರವಾಗಿ ಸನಾತನ ಧರ್ಮದ ಪ್ರತಿಪಾದಕರು, ಹಿಂದೂ ಧರ್ಮದ ವಿರೋಧಿಗಳಲ್ಲ. ಈ ವಿಚಾರವನ್ನು ಹಿಂದೆಯೂ ಹೇಳಿದ್ದೇನೆ, ಇಂದೂ ಹೇಳುತ್ತೇನೆ, ಮುಂದೆಯೂ ಹೇಳುತ್ತೇನೆ ಎಂದರು. ಎಸ್ ಐಟಿ ತನಿಖೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್ಐಟಿ ತನಿಖೆ ಆರಂಭವೇ ಆಗಿಲ್ಲ, ಅತ್ಯಾಚಾರಿಗಳ ವಿಚಾರಣೆ ಇನ್ನಷ್ಟೇ ಆಗಬೇಕಿದೆ. ಇಲ್ಲಿ ತನಕ ಬರೇ ಒಂದು ಬುರುಡೆ ಹಿಡಿದುಕೊಂಡು ನಾಟಕ ಮಾಡುತ್ತಿದ್ದಾರೆ ಅಷ್ಟೇ. ಆದರೆ ಎಸ್ಐಟಿ ಒಳಗಡೆಯೇ ಷಡ್ಯಂತ್ರ ಮಾಡುವವರು ತುಂಬಿದ್ದಾರೆ. ಸ್ವತಹ ಎಸ್.ಪಿ ಕೂಡ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ, ನಾವು ಕಾನೂನು ಹೋರಾಟ ಮಾಡಲಿದ್ಸು ಮುಂದಿನ ದಿನಗಳಲ್ಲಿ ಎಲ್ಲ ಸತ್ಯವೂ ಹೊರಬರಲಿದೆ ಎಂದರು.
ನಮಗೆ ಯಾರ ಮೇಲೆಯೂ ನಂಬಿಕೆ ಇಲ್ಲದಂತೆ ಆಗಿದೆ, ಮಾದ್ಯಮ, ಕಾರ್ಯಾಂಗ ಯಾವುದರ ಮೇಲೆಯೂ ನಂಬಿಕೆಯಿಲ್ಲ. ದೇಶದ ಕಾನೂನಿನ ಮೇಲೆ ಮಾತ್ರ ನಮಗೆ ನಂಬಿಕೆ ಇರೋದು, ಮುಂದಿನ ದಿನಗಳಲ್ಲಿ ಕಾನೂನು ಮೂಲಕವೇ ನಾವು ಹೋರಾಟವನ್ನು ಮಾಡುತ್ತೇವೆ. ನಾವು ಹೆಣ್ಣು ಮಕ್ಕಳಿಗಾಗಿ ಹೋರಾಟ ಮಾಡುತ್ತಿದ್ದೇವೆ. ಆದರೆ ಪೊಲೀಸರು ನನ್ನ ಗಡಿಪಾರು ಆದೇಶದಲ್ಲಿ ಹೆಣ್ಣು ಮಕ್ಕಳಿಗೆ ದೌರ್ಜನ್ಯ ಮಾಡಿದ್ದೇವೆ ಎಂದು ಸೇರಿಸಿದ್ದಾರೆ. ಎಂತಹ ಪಾಪಿ ಪೋಲೀಸರು ಇದ್ದಾರೆಂದು ಹೇಸಿಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಳ್ಳು ಆರೋಪ ಹೊರಿಸಿ ನನ್ನನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಷಡ್ಯಂತ್ರ ಮಾಡುತ್ತಿದ್ದು, ಸೌಜನ್ಯಾ ಪರ ಹೋರಾಟದಲ್ಲಿ ನಾನು ಮಾಡಿದ ಎಲ್ಲಾ ಆರೋಪಗಳೂ ಸತ್ಯ, ಅಲ್ಲಿ ಅತ್ಯಾಚಾರ, ಅನಾಚಾರ, ದೀನ ದಲಿತರ ಭೂಮಿ ಕಬಳಿಸಿದ್ದು, ಬಡ್ಡಿ ವ್ಯವಹಾರ ಮಾಡಿದ್ದೆಲ್ಲವೂ ಸತ್ಯ. ಇದಕ್ಕೆ ಶಿಕ್ಷೆ ಆಗಲೇ ಬೇಕಿದೆ. ಮಹಾಲಿಂಗೇಶ್ವರ ದೇವರು, ಅಣ್ಷಪ್ಪ ದೇವರು ಇವರಿಗೆ ಶಿಕ್ಷೆ ಕೊಡುತ್ತಾನೆಂಬ ನಂಬಿಕೆ ಇದೆ ಎಂದು ಮಹೇಶ್ ತಿಮರೋಡಿ ಹೇಳಿದರು.
In a sharp first reaction regarding the Soujanya case and Dharmasthala SIT investigation, activist Mahesh Shetty Timarodi has accused major media houses and SIT officials of engaging in a conspiracy to close the case prematurely. Speaking in Puttur after meeting with officials regarding the externment notice against him, he claimed that SIT has barely begun its investigation, yet media outlets falsely reported that a chargesheet had been filed.
08-12-25 11:26 am
Bangalore Correspondent
Gangavati Accident, Koppal: ಪ್ರಿ ವೆಡ್ಡಿಂಗ್ ಶೂ...
07-12-25 10:21 pm
Dog Attack: ಪಾದಚಾರಿಗಳ ಮೇಲೆ ಹುಚ್ಚುನಾಯಿ ದಾಳಿ ;...
07-12-25 10:17 pm
Dog Attack, Davangere: ಮಹಿಳೆ ಮೇಲೆ ರಾಟ್ ವೀಲರ್...
06-12-25 12:33 pm
Dharwad Accident, Police Inspector: ಧಾರವಾಡ; ಡ...
05-12-25 11:20 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
08-12-25 04:52 pm
Mangalore Correspondent
ಬಂಡವಾಳ ಇಲ್ಲದೆ ಆದಾಯದ ಅವಕಾಶ ; ಎಸ್ಸೆಸ್ಸೆಲ್ಸಿ, ಪಿ...
08-12-25 01:42 pm
ಮುಂದುವರಿದ ಇಂಡಿಗೋ ಬಿಕ್ಕಟ್ಟು ; ಮಂಗಳೂರಿನಲ್ಲಿ ಡಿ....
08-12-25 11:23 am
ಉಡುಪಿ ಶ್ರೀಕೃಷ್ಣ ಮಠಕ್ಕೆ ಆಂಧ್ರಪ್ರದೇಶ ಡಿಸಿಎಂ ಪವನ...
07-12-25 10:45 pm
Inayat Ali, Mangalore Notice: ನ್ಯಾಶನಲ್ ಹೆರಾಲ್...
07-12-25 03:02 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm