ಬ್ರೇಕಿಂಗ್ ನ್ಯೂಸ್
07-12-25 10:45 pm Udupi Correspondent ಕರಾವಳಿ
ಉಡುಪಿ, ಡಿ.7 : ಉಡುಪಿ ಶ್ರೀಕೃಷ್ಣ ಮಠಕ್ಕೆ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಭೇಟಿ ನೀಡಿದ್ದು ಇತ್ತೀಚೆಗೆ ಚಿನ್ನ ಲೇಪಿತವಾದ ಕನಕನ ಕಿಂಡಿ ಮೂಲಕ ಶ್ರೀಕೃಷ್ಣನ ದರ್ಶನ ಪಡೆದಿದ್ದಾರೆ.
ಪರ್ಯಾಯ ಪುತ್ತಿಗೆ ಮಠದ ಗೀತೋತ್ಸವ ಸಮಾರೋಪದಲ್ಲಿ ಭಾಗವಹಿಸಲು ಉಡುಪಿಗೆ ಆಗಮಿಸಿರುವ ಪವನ್ ಕಲ್ಯಾಣ್ ಅವರನ್ನು ಪರ್ಯಾಯ ಪುತ್ತಿಗೆ ಮಠದಿಂದ ಭವ್ಯ ಸ್ವಾಗತ ಕೋರಲಾಯಿತು. ಬಳಿಕ ಅವರು ಕನಕನ ಕಿಂಡಿಯ ಮೂಲಕ ಕೃಷ್ಣ ದೇವರ ದರ್ಶನ ಮಾಡಿದರು. ಅನಂತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.



ಮಠದ ಮಧ್ವ ಸರೋವರದಲ್ಲಿ ತೀರ್ಥ ಪ್ರೋಕ್ಷಣೆ ಮಾಡಲಾಯಿತು. ಬಳಿಕ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯನ್ನು ಭೇಟಿಯಾಗಿ ಸುವರ್ಣ ತೀರ್ಥ ಮಂಟಪದಲ್ಲಿ ಕೂತು ಪ್ರಸಾದ ಸ್ವೀಕರಿಸಿದರು. ಬಳಿಕ ಮಠದ ಗೀತೋತ್ಸವ ಸಮಾರೋಪದಲ್ಲಿ ಭಾಗವಹಿಸಿದರು. ಈ ವೇಳೆ ಕನ್ನಡದಲ್ಲೇ ಮಾತು ಪ್ರಾರಂಭಿಸಿದ ಪವನ್ ಕಲ್ಯಾಣ್ ಪುತ್ತಿಗೆ ಶ್ರೀಗಳ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಪವನ್, ನಾನು ಮೆಕಾಲೆಯ ಇಂಗ್ಲಿಷ್ ನಲ್ಲಿ ಮಾತನಾಡುತ್ತೇನೆ, ಸನಾತನ ಧರ್ಮವನ್ನು ಇಂಗ್ಲಿಷ್ ಭಾಷೆ ನಾಶ ಮಾಡುತ್ತದೆ ಎಂದು ಮೆಕಾಲೆ ಹೇಳಿದ್ದ, ಆದರೆ ಸನಾತನ ಧರ್ಮದ ಶಕ್ತಿಯ ಮುಂದೆ ಅದು ಸಾಧ್ಯವಾಗಿಲ್ಲ. ವೇದ ಮತ್ತು ಗೀತೆಯಿಂದ ನಮ್ಮ ಸಂಸ್ಕೃತಿ ಉಳಿಸಿಕೊಂಡೆವು, ಸ್ವಾಮಿಗಳು ಆಹ್ವಾನ ನೀಡಿರುವುದು ಅಚ್ಚರಿ ಮೂಡಿದೆ, ನನಗೆ ಕರ್ಮ ಯೋಗದಲ್ಲಿ ನಂಬಿಕೆ ಇದೆ. ಫಲಗಳ ನಿರೀಕ್ಷೆ ನನಗೆ ಇಲ್ಲ, ನಾನು ವಿದ್ವಾಂಸರ ಕುಟುಂಬದಿಂದ ಬಂದವನಲ್ಲ. ಭಕ್ತರ ಕುಟುಂಬದಿಂದ ಬಂದವನು, ಹನುಮ ಭಕ್ತರ ಕುಟುಂಬ ನಮ್ಮದು. ಹರೇ ರಾಮ ಹರೇ ಕೃಷ್ಣ ಎಂದು ನಮಗೆ ತಂದೆ ಕಲಿಸಿದ್ದರು.
ತಾರಕ ಮಂತ್ರ ನನ್ನ ಜೀವನದಲ್ಲಿ ಪವಾಡ ಮಾಡಿದೆ. ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ ಹರೇ ಹರೇ ಎಂದು ಹೇಳುತ್ತಾ ಬಂದ ಕುಟುಂಬ, ಮಾನಸಿಕವಾಗಿ ಕುಗ್ಗಿದಾಗಲೆಲ್ಲ ಈ ಮಂತ್ರ ನನ್ನನ್ನು ಮೇಲಕ್ಕೆ ಎತ್ತಿದೆ. ಉಡುಪಿ ವೈಕುಂಠವಾಗಿದ್ದು, ಆಧ್ಯಾತ್ಮದ ಸೆಳೆತ ಇಲ್ಲಿ ನಾನು ಕಂಡಿದ್ದೇನೆ. ಇದು ಆಧ್ಯಾತ್ಮದ ಪವರ್ ಹೌಸ್ ಎಂದರು.
Andhra Pradesh Deputy Chief Minister Pawan Kalyan visited Udupi Sri Krishna Math and offered prayers through the newly gold-plated Kanakana Kindi. Speaking at the Geetotsava event, he said the Taraka Mantra “Hare Rama Hare Krishna” uplifted him during tough times and praised Udupi as a “spiritual powerhouse.”
30-04-26 08:16 pm
HK News Staffer
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
29-04-26 11:18 pm
HK News Staffer
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
01-05-26 09:39 am
HK News Staffer
ಸೌಜನ್ಯಾ ಪ್ರಕರಣ ಮರು ತನಿಖೆಗೆ ಸುಪ್ರೀಂ ಕೋರ್ಟಿಗೆ ಅ...
30-04-26 04:30 pm
ಪ್ರೀ ವೆಡ್ಡಿಂಗ್ ಶೂಟ್ ಗೆ ವಧುವನ್ನು ಕರೆತರಲು ಹೋಗುತ...
30-04-26 12:31 pm
ರಾಜ್ಯದಲ್ಲಿ ನಕಲಿ ಪಿಎಚ್ಡಿ ಬಾಂಬ್; 400ಕ್ಕೂ ಹೆಚ್ಚ...
30-04-26 10:45 am
ವಾಹನ ಪಾರ್ಕ್ ಮಾಡುವಾಗ ವಿದ್ಯುತ್ ವೈರ್ ಬಿದ್ದು 17...
30-04-26 10:14 am