ಬ್ರೇಕಿಂಗ್ ನ್ಯೂಸ್
15-11-25 02:47 pm Mangalore Correspondent ಕರಾವಳಿ
ಮಂಗಳೂರು, ನ.15 : ಮಂಗಳೂರು ಹೊರವಲಯದ ಪಣಂಬೂರು ಜಂಕ್ಷನ್ ಬಳಿ ಸರಣಿ ಅಪಘಾತ ನಡೆದಿದ್ದು ಎರಡು ಟ್ಯಾಂಕರ್ ಗಳ ನಡುವೆ ಸಿಲುಕಿದ ಆಟೋ ಅಪ್ಪಚ್ಚಿಯಾಗಿ ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಮತ್ತು ಆಟೋ ಚಾಲಕ ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ್ದಾರೆ.
ಕೊಣಾಜೆ ಮೊಂಟೆಪದವಿನ ನಿವಾಸಿಗಳಾದ ಅಬುಬಕ್ಕರ್ (65), ಇಬ್ರಾಹಿಂ (68) ಮತ್ತು ಉಳ್ಳಾಲದ ಆಟೋ ಚಾಲಕ ಮೊಯ್ದೀನ್ ಕುಂಞ (25) ಮೃತರು. ಇವರು ಬೀಡಿ ಕಾರ್ಮಿಕರಾಗಿದ್ದು ಉಳ್ಳಾಲದಿಂದ ಬೈಕಂಪಾಡಿಗೆ ಬೀಡಿ ಕೊಟ್ಟು ಆಟೋದಲ್ಲಿ ಮತ್ತೆ ಉಳ್ಳಾಲದತ್ತ ಮರಳುತ್ತಿದ್ದರು.



ರಾಷ್ಟ್ರೀಯ ಹೆದ್ದಾರಿಯ ಪಣಂಬೂರು ಸಿಗ್ನಲ್ ನಲ್ಲಿ ವಾಹನಗಳು ಸರತಿಯಲ್ಲಿದ್ದ ವೇಳೆ ಎರಡು ಟ್ಯಾಂಕರ್, ಆಟೋ ರಿಕ್ಷಾ ಮತ್ತು ಕಾರು ಅಪಘಾತಕ್ಕೀಡಾಗಿದೆ. ಆಟೋ ರಿಕ್ಷಾ ಒಂದು ಟ್ಯಾಂಕರಿನ ಹಿಂದೆ ನಿಂತಿತ್ತು. ಈ ವೇಳೆ, ಹಿಂದಿನಿಂದ ಮತ್ತೊಂದು ಟ್ಯಾಂಕರ್ ವೇಗವಾಗಿ ಬಂದು ಡಿಕ್ಕಿಯಾಗಿದ್ದು ನಡುವೆ ಸಿಲುಕಿದ ಆಟೋ ಅಪ್ಪಚ್ಚಿಯಾಗಿದೆ. ರಿಕ್ಷಾದಲ್ಲಿದ್ದ ಇಬ್ಬರು ಪ್ರಯಾಣಿಕರು ಮತ್ತು ರಿಕ್ಷಾ ಚಾಲಕ ಕುಳಿತಲ್ಲೇ ದುರಂತ ಸಾವನ್ನಪ್ಪಿದ್ದಾರೆ. ಸುರತ್ಕಲ್ ಸಂಚಾರಿ ಪೊಲೀಸರು ಸ್ಥಳಕ್ಕೆ ಬಂದು ಟ್ಯಾಂಕರ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಇಂದು ನಸುಕಿನಲ್ಲಿ ಬಿಸಿ ರೋಡ್ ಬಳಿ ಭೀಕರ ಅಪಘಾತಕ್ಕೀಡಾಗಿ ಬೆಂಗಳೂರು ಮೂಲದ ಮೂವರು ಮೃತಪಟ್ಟಿದ್ದರು. ಇದೀಗ ಮತ್ತೊಂದು ದುರಂತ ಎದುರಾಗಿದೆ.
A tragic chain collision near Panambur Junction on the outskirts of Mangaluru claimed three lives after an auto-rickshaw got sandwiched between two tanker lorries.
29-01-26 11:03 pm
Bangalore Correspondent
ಡಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವಕಾಶ...
29-01-26 10:48 pm
18 ಕೋಟಿ ಮೌಲ್ಯದ 11 ಕೇಜಿ ಚಿನ್ನ ಲೂಟಿ ; ಬೆಂಗಳೂರಿನ...
29-01-26 01:16 pm
ಮೈಸೂರಿನಲ್ಲಿ ಮತ್ತೆ ಡ್ರಗ್ಸ್ ಫ್ಯಾಕ್ಟರಿ ಶಂಕೆಯಲ್ಲಿ...
28-01-26 09:54 pm
ಅಕ್ರಮ ಮರಳು ಗಣಿಗಾರಿಕೆ, ಮಟ್ಕಾ, ಜೂಜು, ಇಸ್ಪೀಟು ದಂ...
27-01-26 09:57 pm
29-01-26 11:07 pm
HK News Desk
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಅಲ್ಪಸಂಖ್ಯಾತ ಮೀಸಲಾತ...
28-01-26 11:14 pm
ಶಿಮ್ಲಾದಲ್ಲಿ ಹಿಮಪಾತ ; ರೀಲ್ಸ್ ಮಾಡಲು ಹೋಗಿದ್ದ ಹುಡ...
28-01-26 02:35 pm
ತಮ್ಮ ಕರ್ಮಭೂಮಿಯಲ್ಲೇ ಅಜಿತ್ ಪವಾರ್ ಕೊನೆಯುಸಿರು ; ವ...
28-01-26 01:28 pm
29-01-26 10:38 pm
Mangalore Correspondent
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
ನಿರ್ಲಕ್ಷ್ಯದಿಂದಲೇ ಅಪಘಾತ ಹೆಚ್ಚಳ, ಕುಡಿದು ವಾಹನ ಚಲ...
27-01-26 10:50 pm
ಫೆ.1ರಂದು "ನಮ್ಮ ನಡಿಗೆ ತಲಪಾಡಿ ದೇವಿಪುರದ ಕಡೆಗೆ" ಬ...
27-01-26 08:58 pm
27-01-26 10:18 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm
JAKEA Michael Rego, Rajeev Gowda Arrest: ಧಮ್ಕ...
27-01-26 12:22 pm