ಬ್ರೇಕಿಂಗ್ ನ್ಯೂಸ್
09-12-24 07:40 pm Mangalore Correspondent ಕರಾವಳಿ
ಮಂಗಳೂರು, ಡಿ.9: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದು ಅತಿ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದಾರೆ. ಹಿಂದೂಗಳ ರಕ್ಷಣೆಗೆ ವಿಶ್ವದ ಯಾವುದೇ ದೇಶ ಧ್ವನಿ ಎತ್ತುತ್ತಿಲ್ಲ. ಬಾಂಗ್ಲಾದ ಹಿಂದೂಗಳ ರಕ್ಷಣೆಯನ್ನು ಭಾರತವೇ ಮಾಡಬೇಕಾಗಿದೆ. ಬಾಂಗ್ಲಾದ ಹಿಂದೂಗಳ ರಕ್ಷಣೆಗೆ ಇಸ್ರೇಲ್ ಮಾದರಿಯಲ್ಲಿ ರಕ್ಷಣೆ ಅನಿವಾರ್ಯವಾಗಿದೆ ಎಂದು ಅಖಿಲ ಭಾರತೀಯ ಸಂತ ಸಮಿತಿ ಅಧ್ಯಕ್ಷ ಓಂ ಶ್ರೀ ಮಠದ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.
ಬಾಂಗ್ಲಾ ವಿಚಾರದಲ್ಲಿ ಕೇಂದ್ರ ಸರಕಾರ ಕೂಡಲೇ ಮಧ್ಯ ಪ್ರವೇಶಿಸಬೇಕು. ಹಿಂದೂಗಳ ರಕ್ಷಣೆಗೆ ಇಸ್ರೇಲ್ ರೀತಿಯ ಸೈನ್ಯ ಕಾರ್ಯಾಚರಣೆಯನ್ನು ಕೇಂದ್ರ ಸರಕಾರ ನಡೆಸಬೇಕು. ಈ ಕೆಲಸ ಮಾಡಿದರೆ ದೇಶದ ಎಲ್ಲಾ ಸಂತ ಸಮಾಜ ಕೇಂದ್ರ ಸರಕಾರದ ಪರ ನಿಲ್ಲಲಿದೆ. ಬಾಂಗ್ಲಾದೇಶ ಈ ಹಿಂದೆ ಭಾರತದ ಭಾಗವೇ ಆಗಿತ್ತು. ಅನಿವಾರ್ಯವಾದರೆ ಬಾಂಗ್ಲಾದೇಶವನ್ನು ಕೇಂದ್ರ ಸರಕಾರ ಮತ್ತೆ ವಶಕ್ಕೆ ಪಡೆಯಬೇಕು ಎಂದು ಹೇಳಿದರು.
ಈ ಬಗ್ಗೆ ಇತರೇ ಸ್ವಾಮೀಜಿಗಳ ಜೊತೆಗೆ ಸುದ್ದಿಗೋಷ್ಟಿ ನಡೆಸಿದ ಅವರು, ಸನಾತನ ಹಿಂದು ಧರ್ಮವನ್ನು ಮುಗಿಸಲು ಅಂತರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರದ ನಡೆಯುತ್ತಿದೆ. ಅದರ ಭಾಗವಾಗಿ ನಮ್ಮ ನೆರೆಯ ರಾಷ್ಟ್ರಗಳಲ್ಲಿ ಮುಸ್ಮಿಂ ಮೂಲಭೂತವಾದಿಗಳು ಅಧಿಕಾರಕ್ಕೆ ಬರುತ್ತಿದ್ದಾರೆ. ಪಕ್ಕದ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಮೂಲಭೂತವಾದಿಗಳು ಪ್ರಬಲರಾಗುತ್ತಿದ್ದಾರೆ. ಹಿಂದೂ ಧರ್ಮದ ವಿರುದ್ಧ ಮುಸ್ಲಿಂ ಮೂಲಭೂತವಾದಿಗಳನ್ನು ಪ್ರಬಲರನ್ನಾಗಿಸುವ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ವಕ್ಫ್ ಬೊರ್ಡ್ ಗೆ ಒಂದಿಂಚು ಜಾಗವನ್ನೂ
ಬಿಟ್ಟು ಕೊಡುವುದಿಲ್ಲ ಎಂದು ಇದೇ ವೇಳೆ ಎಚ್ಚರಿಕೆ ನೀಡಿದ ಸ್ವಾಮೀಜಿ, ಓಟ್ ಬ್ಯಾಂಕ್ ಗೋಸ್ಕರ ಈ ವಕ್ಫ್ ಬೋರ್ಡ್ ಮಾಡಲಾಗಿತ್ತು. ಈಗ ಅದೇ ವಕ್ಫ್ ಬೋರ್ಡ್ ಹಿಂದೂಗಳ ಭೂಮಿ ಕಿತ್ತುಕೊಳ್ಳುತ್ತಿದೆ. ದೇವಾಲಯದ, ರೈತರ ಭೂಮಿ ಕಿತ್ತುಕೊಳ್ಳುತ್ತಿದೆ. ವಕ್ಫ್ ಬೋರ್ಡನ್ನು ಕೂಡಲೇ ರದ್ದು ಮಾಡಬೇಕು. ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಈ ಕೂಡಲೇ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ನಾಟಕದಲ್ಲಿ ರಾಜ್ಯ ಸರಕಾರ ರೈತರಿಗೆ ನೋಟೀಸ್ ನೀಡಲು ಆರಂಭಿಸಿದೆ. ಆದರೆ ಒಂದಿಂಚು ಜಾಗವನ್ನು ಬಿಟ್ಟುಕೊಡಲು ನಾವು ಸಂತ ಸಮಾಜ ಬಿಡುವುದಿಲ್ಲ. ವಕ್ಫ್ ಬೊರ್ಡ್ ವಿರುದ್ದ ಬೃಹತ್ ಸಂತ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಕುಂಭ ಮೇಳದ ಬಳಿಕ ಬೃಹತ್ ಸಮಾವೇಶ ನಡೆಸಲಾಗುವುದು. ರಾಜ್ಯದ ಎಲ್ಲಾ ಸಂತರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ
ಸುದ್ದಿಗೋಷ್ಠಿಯಲ್ಲಿ ಓಂ ಶ್ರೀ ಮಠದ ಮಾತಾಶ್ರೀ ಶಿವಜ್ಞಾನಮಯೀ ಸರಸ್ವತಿ, ಅಖಿಲ ಭಾರತೀಯ ಸಂತ ಸಮಿತಿ ಕೋಶಾಧಿಕಾರಿ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ, ಮುಖ್ಯ ಕಾರ್ಯದರ್ಶಿ ರಾಜೇಶ್ ನಾಥ್ ಗುರೂಜಿ, ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀ ನಿಶ್ಚಲ ನಿರಂಜನ ಸ್ವಾಮೀಜಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮೋಹನದಾಸ ಸ್ವಾಮೀಜಿ, ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ತೀರ್ಥ ಸ್ವಾಮೀಜಿ, ಮಂಗಳೂರು ಚಿತ್ರಾಪುರ ಮಠದ ವಿಧ್ಯೇಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
Israel model military operation against Bangladesh, we are for Modi, no inch of land for Waqf, Swamijis warn in Mangalore.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
05-07-25 11:04 pm
HK News Desk
Puttur News, Girl Pregnant, Father Arrest: ಸಹ...
05-07-25 09:06 pm
Puttur, Pregnant, Arrest, Jagannivasa Rao: ಸಹ...
05-07-25 01:20 pm
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm