ಬ್ರೇಕಿಂಗ್ ನ್ಯೂಸ್
15-09-23 10:06 pm Mangalore Correspondent ಕರಾವಳಿ
ಮಂಗಳೂರು, ಸೆ.15: ದೆಹಲಿಯಲ್ಲಿ ಎನ್ಐಎ ಅಧಿಕಾರಿಗಳ ಬಲೆಗೆ ಬಿದ್ದಿರುವ ಶಿವಮೊಗ್ಗ ಮೂಲದ ಅರಾಫತ್ ಆಲಿ, ಕರ್ನಾಟಕದಲ್ಲಿ ಉಗ್ರವಾದ, ಐಸಿಸ್ ನೆಟ್ವರ್ಕ್ ಬೆಳೆಸುವಲ್ಲಿ ಹಣಕಾಸು ನೆರವು ನೀಡುತ್ತಿದ್ದುದರಲ್ಲಿ ಮುಂಚೂಣಿಯಲ್ಲಿದ್ದ ಅನ್ನುವ ಅಂಶ ಬಯಲಾಗಿದೆ. ಮಂಗಳೂರಿನ ಗೋಡೆ ಬರಹ, ಕುಕ್ಕರ್ ಬಾಂಬ್ ಪ್ರಕರಣ. ಶಿವಮೊಗ್ಗದ ಬಾಂಬ್ ಟ್ರಯಲ್ ಪ್ರಕರಣದ ಆರೋಪಿಗಳಿಗೆ ಅರಾಫತ್ ಆಲಿಯೇ ಕ್ರಿಪ್ಟೋ ಕರೆನ್ಸಿ ಮೂಲಕ ಹಣಕಾಸು ಸಹಾಯ ಮಾಡುತ್ತಿದ್ದ ಎನ್ನಲಾಗುತ್ತಿದೆ.
ಶಿವಮೊಗ್ಗ ಬಾಂಬ್ ಟ್ರಯಲ್ ಮತ್ತು ಕುಕ್ಕರ್ ಬಾಂಬ್ ಪ್ರಕರಣದ ಬಳಿಕ ಕರ್ನಾಟಕದಲ್ಲಿ ಉಗ್ರವಾದ ಪೋಷಣೆಗೆ ವಿದೇಶದಿಂದ ಹಣಕಾಸು ನೆರವು ಸಿಗುತ್ತಿರುವ ವಿಚಾರ ತಿಳಿದು ಎನ್ಐಎ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದರು. ಬಂಟ್ವಾಳ, ಮಂಗಳೂರು, ಪುತ್ತೂರು, ಕಾಸರಗೋಡು ಸೇರಿದಂತೆ ವಿವಿಧ ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಕ್ರಿಪ್ಟೋ ಕರೆನ್ಸಿ ಮೂಲಕ ಬೇನಾಮಿ ರೂಪದಲ್ಲಿ ಹಣಕಾಸು ನೆರವು ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು.
ತೀರ್ಥಹಳ್ಳಿಯಿಂದ 2019ರಲ್ಲಿ ಬೆಂಗಳೂರಿಗೆ ತೆರಳಿದ್ದ ಅರಾಫತ್ ಕೆಲಕಾಲ ಅಲ್ಲಿ ಇಂಜಿನಿಯರಿಂಗ್ ಓದಿದ್ದ. ಆನಂತರ, 2020ರಲ್ಲಿ ದುಬೈಗೆ ತೆರಳಿದ್ದ ಅರಾಫತ್, ಪರ್ಫ್ಯೂಮ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. 2020ರ ಆಗಸ್ಟ್ ನಲ್ಲಿ ಮಂಗಳೂರಿನ ಬಿಜೈನಲ್ಲಿ ಲಷ್ಕರ್ ಉಗ್ರರ ಪರವಾಗಿ ಗೋಡೆ ಬರಹ ಬರೆದಿದ್ದ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮಾಝ್ ಮುನೀರ್ ಮತ್ತು ಮೊಹಮ್ಮದ್ ಶಾರೀಕ್, ಮೊದಲ ಬಾರಿಗೆ ಅರಾಫತ್ ಆಲಿ ಹೆಸರನ್ನು ಬಾಯಿಬಿಟ್ಟಿದ್ದರು. ಆನಂತರ, ಶಿವಮೊಗ್ಗ ಬಾಂಬ್ ಟ್ರಯಲ್ ಪ್ರಕರಣದ ತನಿಖೆಯ ವೇಳೆ ಮೊಹಮ್ಮದ್ ಶಾರೀಕ್ ಮತ್ತು ಇತರ ಆರೋಪಿಗಳು ಅರಾಫತ್ ಆಲಿ ಜೊತೆಗೆ ಸಂಪರ್ಕದಲ್ಲಿದ್ದುದು ಪತ್ತೆಯಾಗಿತ್ತು. ಆದರೆ 2020ರಿಂದಲೇ ವಿದೇಶದಲ್ಲಿದ್ದ ಅರಾಫತ್ ಆಲಿ, ಯಾವುದೇ ಭಯೋತ್ಪಾದಕ ಕೃತ್ಯದಲ್ಲಿಯೂ ನೇರವಾಗಿ ಪಾಲ್ಗೊಂಡಿಲ್ಲ. ಬದಲಿಗೆ, ಆರೋಪಿಗಳಿಗೆ ಸಹಾಯ ಮಾಡಿದ ಆರೋಪವಷ್ಟೇ ಹೊತ್ತಿದ್ದಾನೆ.
ನನ್ನ ಮಗ ತಪ್ಪು ಮಾಡಿಲ್ಲ ; ತಂದೆ ಅಳಲು
ದೆಹಲಿಯಲ್ಲಿ ಮಗ ಅರೆಸ್ಟ್ ಆಗಿರುವ ಬಗ್ಗೆ ಅರಾಫತ್ ಆಲಿ ತಂದೆ ಅಹ್ಮದ್ ಬಾವ ತೀರ್ಥಹಳ್ಳಿಯಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ, ತನ್ನ ಮಗ ಅಮಾಯಕ, ಪೊಲೀಸರು ಯಾಕಾಗಿ ಬಂಧಿಸಿದ್ದಾರೆಂದು ಗೊತ್ತಿಲ್ಲ ಎಂದಿದ್ದಾರೆ. ಅವನು ದುಬೈಗೆ ಹೋಗಿ ಮೂರೂವರೆ ವರ್ಷ ಆಯ್ತು. ಅವನ ಮೇಲೆ ಯಾವ ಕೇಸ್ ಹಾಕಿದ್ದಾರೋ ಗೊತ್ತಿಲ್ಲ. ಅವನೇನೂ ಮಾಡಿಲ್ಲ, ಸುಮ್ಮನೆ ಸಿಕ್ಕಿಸಿ ಹಾಕಿದ್ದಾರೆ. ತೀರ್ಥಹಳ್ಳಿಯ ಸಹ್ಯಾದ್ರಿ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೊಮಾ ಮಾಡಿದ್ದು ಫೇಲ್ ಆಗಿದ್ದ. ಬಳಿಕ ದುಬೈಗೆ ಹೋಗಿದ್ದ. ಆಗಾಗ ಹಣ ಕಳಿಸುತ್ತಿದ್ದ. ನಮ್ಮ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಗೋಡೆ ಬರಹ ಪ್ರಕರಣದ ಬಳಿಕ ಪೊಲೀಸರು ನಮ್ಮ ಮನೆಗೆ ಬಂದಿದ್ದರು. ದುಬೈಗೆ ಹೋಗಿ ಹತ್ತು ತಿಂಗಳಾಗಿದೆ ಎಂದಿದ್ದೆ. ಅಲ್ಲಿ ಸೆರೆಸಿಕ್ಕವರು ಆತನ ಸ್ನೇಹಿತರಾಗಿದ್ದರು. ನಾನು ಯಾವ ಕೇಸಲ್ಲೂ ಇಲ್ಲ, ನನಗೇನೂ ಗೊತ್ತಿಲ್ಲ ಎನ್ನುತ್ತಿದ್ದ. ಅವನು ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ, ಆದರೆ ತಪ್ಪು ಮಾಡದೆ ಹಿಂಸೆ ನೀಡಬಾರದು ಎಂದಿದ್ದಾರೆ.
The National Investigation Agency (NIA) Thursday arrested Arafath Ali, a key ISIS terror conspirator from Karnataka, after he landed at the Indira Gandhi International Airport in New Delhi from Kenya’s Nairobi.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm