ಬ್ರೇಕಿಂಗ್ ನ್ಯೂಸ್
13-09-23 10:43 am Mangalore Correspondent ಕರಾವಳಿ
ಮಂಗಳೂರು, ಸೆ.12: ಕಳೆದ ಐದಾರು ದಿನಗಳಲ್ಲಿ ಜಾಲತಾಣದಲ್ಲಿ ‘ಡ್ರಗ್ಸ್ ಅಮಲಿನಲ್ಲಿ ಯುವತಿ’ ಎಂಬ ಹೆಸರಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಮಂಗಳೂರಿನ ಕದ್ರಿ ಠಾಣೆಯಲ್ಲಿ ಪೊಲೀಸರು ಯುವತಿಯೊಬ್ಬಳನ್ನು ಕೂಡಿ ಹಾಕಿರುವುದು ಮತ್ತು ಕೈಕಾಲು ಕಟ್ಟಿ ಕೋಳ ತೊಡಿಸುವ ದೃಶ್ಯ ಅದರಲ್ಲಿದೆ. ಆ ಯುವತಿಯೂ ಏನೋ ಅಮಲಿನಲ್ಲಿದ್ದ ರೀತಿ ವರ್ತಿಸುತ್ತಿದ್ದಳು. ಪ್ರಶ್ನೆ ಮಾಡುತ್ತಿದ್ದ ಮಹಿಳಾ ಎಸ್ಐ ಒಬ್ಬರಿಗೆ ತುಳಿದು ಹಲ್ಲೆ ನಡೆಸುವ ದೃಶ್ಯಗಳಿದ್ದವು. ಆದರೆ ಠಾಣೆಯ ಒಳಗಡೆ ಪೊಲೀಸರು ವಿಚಾರಣೆ ನಡೆಸುತ್ತಿರುವ ಈ ವಿಡಿಯೋ ಹೊರಗಡೆ ಲೀಕ್ ಆಗಿದ್ದಲ್ಲದೆ, ಆ ಯುವತಿಯ ಮಾನಕ್ಕೆ ಕುಂದುಂಟಾಗಲು ಕಾರಣವಾಗಿದ್ದು ಪೊಲೀಸರೇನಾ ಅನ್ನುವ ಪ್ರಶ್ನೆಗಳನ್ನು ಜನರು ಎತ್ತಿಡುತ್ತಿದ್ದಾರೆ.
ಇಷ್ಟಕ್ಕೂ ಈ ವಿಡಿಯೋ ಠಾಣೆಯ ಒಳಗಿನಿಂದ ಹೇಗೆ ಹೊರಗೆ ಬಂತು ಅನ್ನುವುದೇ ಕುತೂಹಲ. ವಿಡಿಯೋ ಲೀಕ್ ಆದಬಳಿಕ ಪೊಲೀಸ್ ಕಮಿಷನರ್ ಅವರನ್ನು ಪ್ರಶ್ನೆ ಮಾಡಿದಾಗ, ಏನೋ ಸ್ಪಷ್ಟನೆಯನ್ನು ಹಾಕಿದ್ದರು. ಅದರ ಪ್ರಕಾರ, ಇದು ಸೆ.1ರಂದು ಬೆಳಗ್ಗೆ 6.45ಕ್ಕೆ ನಡೆದಿರುವ ಘಟನೆ. ನಗರದ ಪಂಪ್ವೆಲ್ ನಲ್ಲಿ ಗಣೇಶ್ ಮೆಡಿಕಲ್ ಗೆ ಬಂದಿದ್ದ ಯುವತಿ ವ್ಯಗ್ರಳಾಗಿ ವರ್ತಿಸುತ್ತಿದ್ದಳು. ಅಲ್ಲಿಗೆ ಬಂದಿದ್ದ ಅಬಕಾರಿ ದಳದವರು ಆಕೆಯನ್ನು ಕದ್ರಿ ಠಾಣೆಗೆ ಒಯ್ದಿದ್ದಾರೆ. ಡ್ರಗ್ಸ್ ಅಮಲಿನಲ್ಲಿ ಈ ರೀತಿ ವರ್ತಿಸುತ್ತಿದ್ದಾಳೆಂದು ಚೆಕ್ ಮಾಡಿದಾಗ, ಡ್ರಗ್ ನೆಗೆಟಿವ್ ಬಂದಿತ್ತು. ಬೇರೇನೋ ಮಾನಸಿಕ ಸಮಸ್ಯೆ ಇದ್ದಿರಬೇಕೆಂದು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು.
ಆದರೆ ಈ ಘಟನೆಯ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಸೆ.6ರಂದು ದೂರು ದಾಖಲಾಗಿದೆ. ಅಬಕಾರಿ ಸಿಬಂದಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾಳೆಂದು ಯುವತಿ ವಿರುದ್ಧ ಅಬಕಾರಿ ಪೊಲೀಸರೇ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಾಗಲೇ ಅಬಕಾರಿ ಇಲಾಖೆಯಿಂದ ದೂರು ನೀಡಿರುವಂತೆ ತೋರುತ್ತಿದೆ. ಆದರೆ ಈ ವಿಡಿಯೋ ಬಗ್ಗೆ ಯಾವುದೇ ಉಲ್ಲೇಖ ಇಲ್ಲ ಎನ್ನಲಾಗುತ್ತಿದೆ. ಪೊಲೀಸರ ಮಾಹಿತಿ ಪ್ರಕಾರ, ಆ ಯುವತಿಗೆ ಏನೋ ಮಾನಸಿಕ ಸಮಸ್ಯೆ ಇದೆಯಂತೆ. ಯುವತಿಯನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಡ್ರಗ್ ತಪಾಸಣೆ ಬಳಿಕ ಮೆಂಟಲ್ ಆಸ್ಪತ್ರೆಗೆಂದು ಕೆಎಸ್ ಹೆಗ್ಡೆ ಆಸ್ಪತ್ರೆಗೆ ಒಯ್ಯುತ್ತಿದ್ದಾಗ, ಆಕೆಯೇ ತನ್ನ ಮನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ. ಆನಂತರ ಮನೆಯವರ ವಶಕ್ಕೊಪ್ಪಿಸಿ, ಆಕೆಯನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಆ ಯುವತಿ 19 ವರ್ಷದ ಹೆಣ್ಮಗಳಾಗಿದ್ದು, ಪಂಪ್ವೆಲ್ ಬಳಿಯ ಅಪಾರ್ಟ್ಮೆಂಟಿನಲ್ಲಿ ಹೆತ್ತವರ ಜೊತೆಗೆ ವಾಸವಿದ್ದಾಳೆ. ಹಲವಾರು ವರ್ಷ ಸೌದಿಯಲ್ಲೇ ವಾಸವಿದ್ದ ಡಾಕ್ಟರ್ ಒಬ್ಬರ ಮಗಳು. ಸಿರಿವಂತ ಕುಟುಂಬದ ಹೆಣ್ಮಗಳು. ಮೊನ್ನೆ ಯಾವುದೋ ಔಷಧಿಗೆಂದು ಮೆಡಿಕಲ್ ಗೆ ಬಂದಿದ್ದಳು. ಡಾಕ್ಟರ್ ಪೊಲೀಸರಿಗೆ ತಿಳಿಸಿರುವ ಮಾಹಿತಿ ಪ್ರಕಾರ, ಆಕೆಗೆ ಮಾನಸಿಕ ಸಮಸ್ಯೆ ಇದೆ. ಮನೆಯಲ್ಲೇ ಇರಿಸಿ ಚಿಕಿತ್ಸೆ ನೀಡುತ್ತಿದ್ದೆವು ಎಂದಿದ್ದಲ್ಲದೆ, ಅದಕ್ಕೆ ಸಂಬಂಧಿಸಿ ಸಾಕ್ಷ್ಯಾಧಾರಗಳನ್ನೂ ನೀಡಿದ್ದಾರೆ. ಆದರೆ ಆ ಯುವತಿಯನ್ನು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾಗಿನ ವಿಡಿಯೋ ಹೊರಬಂದಿರುವುದು ಕುಟುಂಬಕ್ಕೆ ಮುಜುಗರ ಉಂಟುಮಾಡಿದೆ. ಮಹಿಳಾ ಸಿಬಂದಿಯೇ ವಿಚಾರಣೆ ನಡೆಸುತ್ತಿದ್ದಾಗ ಆಕೆ ವ್ಯಗ್ರಳಾಗಿರುವುದು, ಯಾವುದೇ ಪ್ರಶ್ನೆಗೂ ಉತ್ತರ ನೀಡದೇ ಸಿಟ್ಟು ಮಾಡಿಕೊಳ್ಳುವ ಸನ್ನಿವೇಶ ವಿಡಿಯೋದಲ್ಲಿದೆ.
ಅಲ್ಲದೆ, ಆಕೆಯನ್ನು ಕೈಕಾಲು ಕಟ್ಟಿ ಹಾಕುವ ಯತ್ನದಲ್ಲಿ ಪೊಲೀಸರು ಅಪರಾಧ ಪ್ರಕರಣದಲ್ಲಿ ಆರೋಪಿಗಳಿಗೆ ತೊಡಿಸುವ ಕೈಕೋಳವನ್ನೇ ಯುವತಿಯ ಕಾಲು ಮತ್ತು ಕೈಗಳಿಗೆ ತೊಡಿಸಿದ್ದಾರೆ. ಯಾವುದೇ ಪ್ರಕರಣದಲ್ಲಿ ಆರಂಭಿಕ ತನಿಖೆಯಲ್ಲಿ ಆರೋಪಿಗಳೆಂದು ತನಿಖಾಧಿಕಾರಿ ದೃಢಪಡಿಸಿದ ಬಳಿಕವಷ್ಟೇ ಕೈಕೋಳ ತೊಡಿಸುವುದು ವಾಡಿಕೆ. ಸಾಮಾನ್ಯವಾಗಿ ಅರೆಸ್ಟ್ ಬಳಿಕ ಕೋರ್ಟಿಗೆ ಹಾಜರುಪಡಿಸುವ ಸಂದರ್ಭದಲ್ಲಿ ಮಾತ್ರ ಆರೋಪಿಗಳಿಗೆ ಕೈಕೋಳ ಬಳಕೆ ಮಾಡುತ್ತಾರೆ. ಇಲ್ಲಿ ಈ ಯುವತಿ ಏನೋ ಸಮಸ್ಯೆ ಇರುವಂತೆ ಕಂಡುಬರುತ್ತಿದ್ದರೂ, ಆಕೆಗೆ ಪೊಲೀಸರು ಕೋಳ ತೊಡಿಸಿ ನೆಲಕ್ಕೆ ಬೀಳಿಸಿ ಹಲ್ಲೆ ಮಾಡುವ ದೃಶ್ಯಗಳಿವೆ. ಪೊಲೀಸರು ಈ ರೀತಿ ವರ್ತಿಸಬಾರದಿತ್ತು. ಅಷ್ಟೇ ಅಲ್ಲ, ಅದನ್ನು ಮುಂಜಾಗ್ರತೆಗೆ ಇರಲೆಂದು ವಿಡಿಯೋ ಮಾಡಿದ್ದರೂ, ಅದನ್ನು ಹೊರಗೆ ಲೀಕ್ ಮಾಡಬಾರದಿತ್ತು.
ಪೊಲೀಸರ ಮೇಲೆ ಕ್ರಮ ಯಾಕಿಲ್ಲ ?
ಈ ರೀತಿ ವಿಡಿಯೋ ಹೊರಗೆ ಬಿಟ್ಟು ಯುವತಿ ಮತ್ತು ಕುಟುಂಬದ ಮಾನಕ್ಕೆ ಕುಂದುಂಟಾಗುವ ರೀತಿಯಲ್ಲಿ ವರ್ತಿಸಿದ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಮಂಗಳೂರಿನ ಪೊಲೀಸ್ ಕಮಿಷನರ್ ಮಾತ್ರ ಎಲ್ಲದಕ್ಕೂ ಜಾಣ ಮೌನ ವಹಿಸಿದ್ದಾರೆ. ಈ ರೀತಿಯ ಮೌನದಿಂದ ಯುವತಿಯ ಜೊತೆಗೆ ಮಂಗಳೂರು ಪೊಲೀಸರ ಮಾನವೂ ಹರಾಜಾಗುತ್ತಿರುವುದು ಸುಳ್ಳಲ್ಲ. ಇಂತಹ ಪ್ರಕರಣಗಳಲ್ಲಿ ಈ ವಿಡಿಯೋ ಷೇರ್ ಮಾಡಿದರೂ ಕ್ರಮ ಕೈಗೊಳ್ಳುತ್ತೀವಿ ಎಂದು ಖಡಕ್ ವಾರ್ನಿಂಗ್ ಆದರೂ ನೀಡುತ್ತಿದ್ದರೆ, ಸಾರ್ವಜನಿಕರು ವಿಡಿಯೋ ವೈರಲ್ ಮಾಡುವುದರಿಂದ ದೂರ ಇರುತ್ತಿದ್ದರು. ಈಗ ವಿಡಿಯೋ ಪೂರ್ತಿ ವೈರಲ್ ಆಗುತ್ತಿದ್ದು, ಮಂಗಳೂರಿನಲ್ಲಿ ಇದೇನು ಅನ್ನುವ ಪ್ರಶ್ನೆಗಳನ್ನು ದೇಶ- ವಿದೇಶದ ಜನರು ಮುಂದಿಡುತ್ತಿದ್ದಾರೆ. ಆದರೆ, ಇದಕ್ಕೆಲ್ಲ ಉತ್ತರ ನೀಡಬೇಕಾದ ಮಂಗಳೂರಿನ ಪೊಲೀಸರು ಮಾತ್ರ ಮೌನವೇ ಆಭರಣ ಎನ್ನುತ್ತಿದ್ದಾರೆ.
Mangalore Girl taken into custody by Kadri Police station assuming as Drug addict, viral video creates problem to Police after she was seen lying on the floor surrounded by several policewomen who were trying to get a hold on her. It is stated that shes a depression patient since Long time and her father is a well know Doctor working in Dubai.
21-08-25 06:02 pm
Bangalore Correspondent
Mandya Police Torture, Suicide: ಪೊಲೀಸ್ ಠಾಣೆಯ...
21-08-25 02:03 pm
Mangalore Electric Auto, High Court: ಮಂಗಳೂರಿನ...
21-08-25 12:58 pm
Dharmasthala Case: ಧರ್ಮಸ್ಥಳ ಪ್ರಕರಣ ; ಎಫ್ಎಸ್ಎಲ...
20-08-25 10:54 pm
Congress MP Sasikanth Senthil, Janardhana Red...
20-08-25 09:54 pm
21-08-25 12:54 pm
HK News Desk
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
21-08-25 03:44 pm
Mangalore Correspondent
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
MLA Vedavyas Kamath: ಶ್ರೀಕೃಷ್ಣ ಜನ್ಮಾಷ್ಟಮಿಯ ಸಂ...
20-08-25 10:19 pm
Ananya–Sujatha Bhatt Case, Lawyer Manjunath:...
20-08-25 04:28 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm