ಬ್ರೇಕಿಂಗ್ ನ್ಯೂಸ್
09-09-23 11:06 pm Mangalore Correspondent ಕರಾವಳಿ
ಮಂಗಳೂರು, ಸೆ.9: ಆರೆಸ್ಸೆಸ್ ಮತ್ತು ಪ್ರಧಾನಿ ಮೋದಿಯ ಕಟು ವಿರೋಧಿಯಾಗಿರುವ ದೆಹಲಿ ಮೂಲದ ಪ್ರೊಫೆಸರ್, ಡಾ.ಶಂಸುಲ್ ಇಸ್ಲಾಂ ಮಂಗಳೂರಿನಲ್ಲಿ ಉಪನ್ಯಾಸ ನೀಡುವುದಕ್ಕೆ ಬಿಡಲ್ಲ ಎಂದು ಎಬಿವಿಪಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಆದರೆ ಕಾರ್ಯಕ್ರಮ ಆಯೋಜಿಸಿದ್ದ ಎಡಪಂಥೀಯರು ಕಾಂಗ್ರೆಸ್ ಸರ್ಕಾರದ ನೈತಿಕ ಬೆಂಬಲ ಪಡೆದು ಕಾರ್ಯಕ್ರಮ ಮಾಡಿಯೇ ತೀರುತ್ತೇವೆಂದು ಪಟ್ಟು ಹಿಡಿದು ಹಠಸಾಧನೆ ಮಾಡಿದ್ದಾರೆ.
ಒಂದೆಡೆ ವಿದ್ಯಾರ್ಥಿಗಳ ಧಿಕ್ಕಾರ ಕೂಗು, ಭಾರತ್ ಮಾತೆಗೆ ಜೈಕಾರ.. ಕಾಲೇಜು ಆವರಣಕ್ಕೆ ನುಗ್ಗಲು ಯತ್ನಿಸಿದಾಗ ಪೊಲೀಸರ ಜೊತೆಗೆ ಸಂಘರ್ಷ.. ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜು ಆವರಣದಲ್ಲಿ ಶನಿವಾರ ಹೈಡ್ರಾಮಾವೇ ನಡೆದಿತ್ತು. ಮಂಗಳೂರಿನ ಬಿವಿ ಕಕ್ಕಿಲ್ಲಾಯ ಪ್ರತಿಷ್ಠಾನದಿಂದ ಯುನಿವರ್ಸಿಟಿ ಕಾಲೇಜಿನಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ-1957, ಜಂಟಿ ಬಲಿದಾನಗಳು ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೆಹಲಿ ಜೆನ್ ಯು ವಿವಿಯ ನಿವೃತ್ತ ಪ್ರೊಫೆಸರ್ ಡಾ.ಶಂಸುಲ್ ಇಸ್ಲಾಂ ಎಂಬವರನ್ನು ಉಪನ್ಯಾಸಕ್ಕೆ ಕರೆಸಲಾಗಿತ್ತು. ಆದರೆ, ಶಂಸುಲ್ ಇಸ್ಲಾಂ ಆರೆಸ್ಸೆಸ್ ವಿರೋಧಿ ಮತ್ತು ಮೋದಿ ನಿಂದಕ ಎನ್ನುವ ಕಾರಣಕ್ಕೆ ಎಬಿವಿಪಿ ವಿದ್ಯಾರ್ಥಿಗಳು ಜಟಾಪಟಿ ನಡೆಸಿದ್ದಾರೆ.
ಕಾಲೇಜು ಆವರಣಕ್ಕೆ ನುಗ್ಗಿದ ಎಬಿವಿಪಿಯ ಪ್ರಮುಖ ಕಾರ್ಯಕರ್ತರನ್ನು ಮೊದಲಿಗೆ ಪೊಲೀಸರು ವಶಕ್ಕೆ ಪಡೆದು ಹೊತ್ತೊಯ್ದಿದ್ದರು. ಅಷ್ಟರಲ್ಲಿ ಕಾಲೇಜು ಒಳಗಡೆಯೇ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಕಾಲೇಜು ಗೇಟ್ ಹೊರಭಾಗದಲ್ಲಿಯೂ ಸಾಕಷ್ಟು ಮಂದಿ ವಿದ್ಯಾರ್ಥಿಗಳು ಜಮಾಯಿಸಿ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೆ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರೆ, ಪೊಲೀಸರು ಯಾವುದಕ್ಕೂ ಜಗ್ಗದೆ ತಡೆ ಹಾಕಿದ್ದರು.
ಆರೆಸ್ಸೆಸ್, ಎಬಿವಿಪಿ ದೇಶದ್ರೋಹಿಗಳು
ಇದೇ ವೇಳೆ, ಪೊಲೀಸ್ ಭದ್ರತೆಯಲ್ಲಿ ಡಾ.ಶಂಸುಲ್ ಇಸ್ಲಾಂ ಕಾಲೇಜಿಗೆ ಆಗಮಿಸಿದ್ದು, ಹೊರಗೆ ಪ್ರತಿಭಟನೆ ನಡೆಯುತ್ತಿದ್ದಂತೆಯೇ ಒಳಗೆ ಉಪನ್ಯಾಸ ನೀಡಿದ್ದಾರೆ. ಅಲ್ಲದೆ, ಪ್ರತಿಭಟನೆ ನಡೆಸಿದ ಎಬಿವಿಪಿ ವಿದ್ಯಾರ್ಥಿಗಳು ರಾಷ್ಟ್ರದ್ರೋಹಿಗಳು. ಸ್ವಾತಂತ್ರ್ಯ ಸಂಗ್ರಾಮ ನೆನಪಿಸುವ ಕಾರ್ಯಕ್ರಮ ವಿರೋಧಿಸುವವರು ದೇಶದ್ರೋಹಿಗಳು ಎಂದು ಜರೆದಿದ್ದಾರೆ. ಎಬಿವಿಪಿ ಅನ್ನುವುದು ಆರೆಸ್ಸೆಸ್ ಸಂಘಟನೆಯ ಭಾಗ. ಆರೆಸ್ಸೆಸ್ ಯಾವತ್ತೂ ದೇಶದ ಪರವಾಗಿರಲಿಲ್ಲ. ಬ್ರಿಟಿಷರ ಪರವಾಗಿದ್ದರು. ಇಂದಿಗೂ ಅದನ್ನೇ ಮಾಡುತ್ತಿದ್ದಾರೆ. ಮಹಾತ್ಮ ಗಾಂಧೀಜಿ ನಿಜವಾದ ಸನಾತನಿಯಾಗಿದ್ದರು. ಅವರನ್ನು ಇದೇ ಆರೆಸ್ಸೆಸ್ ಮಂದಿ ಕೊಂದಿರುವುದು. ಗಾಂಧಿಯನ್ನು ಕೊಂದಿದ್ದ ಗೋಡ್ಸೆಯನ್ನು ಆರೆಸ್ಸೆಸ್ ಕೃಷ್ಣನಿಗೆ ಹೋಲಿಸಿದ್ದಕ್ಕೆ ತನ್ನಲ್ಲಿ ದಾಖಲೆಯಿದೆ ಎಂದು ಆಪಾದನೆ ಮಾಡಿದ್ದಾರೆ.
ಕಾರ್ಯಕ್ರಮ ಮುಗಿದ ಬಳಿಕ ವಿವಿ ಕಾಲೇಜಿನ ಪ್ರಿನ್ಸಿಪಾಲ್ ಅನಸೂಯ ರೈ ಅವರನ್ನು ವಿದ್ಯಾರ್ಥಿಗಳು ತರಾಟೆಗೆತ್ತಿಕೊಂಡಿದ್ದಾರೆ. ನೀವು ಮತ್ತು ಉಪ ಕುಲಪತಿಗಳು ಯಾಕೆ ಕಾರ್ಯಕ್ರಮಕ್ಕೆ ಹೋಗಿದ್ದು.. ಇಂತಹ ಕಾರ್ಯಕ್ರಮಕ್ಕೆ ಯಾಕೆ ಅವಕಾಶ ನೀಡಿದ್ದು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಿನ್ಸಿಪಾಲ್ ಮೇಡಂ, ಕಾಲೇಜು ನಡೆಸೋದು ನಾನಲ್ಲ. ವಿವಿಯ ಉಪ ಕುಲಪತಿಗಳೇ ಮುಖ್ಯಸ್ಥರು. ಅವರು ಹೇಳಿದ್ದನ್ನು ನಾವು ಮಾಡೋದು. ನಮ್ಮ ಮುಖ್ಯಸ್ಥರು ಬಂದಿದ್ದರಿಂದ ನಾವು ಕಾರ್ಯಕ್ರಮಕ್ಕೆ ಹೋಗಿದ್ದೇವೆ. ಅಷ್ಟಕ್ಕೇ ಹೋಗಿದ್ದು ಬಿಟ್ಟರೆ ನನಗೇನೂ ಸಂಬಂಧ ಇಲ್ಲ. ನೀವು ಅಸಂಬದ್ಧ ಪ್ರಶ್ನೆ ಕೇಳಿದರೆ, ನನ್ನಲ್ಲಿ ಉತ್ತರ ಇಲ್ಲ ಎಂದು ಖಾರವಾಗಿ ಮಾತನಾಡಿದ್ದಾರೆ.
ಹೊರಗೆ ವಿದ್ಯಾರ್ಥಿಗಳ ಪ್ರತಿಭಟನೆ ಆಗುತ್ತಿದ್ದರೆ, ಒಳಗಡೆ ರವೀಂದ್ರ ಕಲಾಕ್ಷೇತ್ರದಲ್ಲಿ ಪೊಲೀಸ್ ಭದ್ರತೆಯಲ್ಲಿ ನಾಮ್ಕೇವಾಸ್ತೆ ಎನ್ನುವ ರೀತಿ ಶ್ರೀನಿವಾಸ ಕಕ್ಕಿಲ್ಲಾಯರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದೆ. ಉಪನ್ಯಾಸ ನೀಡಿದ ಶಂಸುಲ್ ಇಸ್ಲಾಂ, ಆರೆಸ್ಸೆಸ್ ವಿರೋಧಿ ಭಾವನೆಯನ್ನು ಹೊರ ಹಾಕಿದ್ದಾರೆ. ಅಷ್ಟಕ್ಕೆ ಕಾರ್ಯಕ್ರಮ ಮುಗಿದಿದ್ದು, ಅತಿಥಿಗಳು ಹೊರಗೆ ತೆರಳುತ್ತಿದ್ದಂತೆ ಪ್ರತಿಭಟನೆಯೂ ಅಂತ್ಯಗೊಂಡಿದೆ. ಮಂಗಳೂರು ಯುನಿವರ್ಸಿಟಿ ಕಾಲೇಜಿನಲ್ಲಿ ಈ ಹಿಂದೆಯೂ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇಂತಹದ್ದೇ ಎಡಪಂಥೀಯರ ಕಾರ್ಯಕ್ರಮ ನಡೆದಿತ್ತು. ಆಗಲೂ ಇದೇ ರೀತಿ ವಿರೋಧ, ಜಟಾಪಟಿ ನಡೆದಿತ್ತು. ಈಗಿನ ವಿವಿಯ ಉಪ ಕುಲಪತಿ ಜಯರಾಜ ಅಮೀನ್ ಎಡಪಂಥೀಯ ಚಿಂತನೆಯುಳ್ಳವರಾಗಿದ್ದು ಮತ್ತೆ ಅಂತಹದ್ದೇ ಕಾರ್ಯಕ್ರಮ ನಡೆಸಿದ್ದು ಚರ್ಚೆಗೆ ಕಾರಣವಾಗಿದೆ.
Dr Shamsul slams AVBP says these are anti nationals amid protest of Abvp at Mangalore Univercity. Akhil Bharatiya Vidyarthi Parishad (ABVP) members staged a protest at the Mangalore University campus opposing the lecture of noted researcher, author and former associate professor of political science at the University of Delhi Dr Shamsul Islam. The ABVP workers raised slogans against the professor and tried to enter the University but were stopped by the police.
21-08-25 06:02 pm
Bangalore Correspondent
Mandya Police Torture, Suicide: ಪೊಲೀಸ್ ಠಾಣೆಯ...
21-08-25 02:03 pm
Mangalore Electric Auto, High Court: ಮಂಗಳೂರಿನ...
21-08-25 12:58 pm
Dharmasthala Case: ಧರ್ಮಸ್ಥಳ ಪ್ರಕರಣ ; ಎಫ್ಎಸ್ಎಲ...
20-08-25 10:54 pm
Congress MP Sasikanth Senthil, Janardhana Red...
20-08-25 09:54 pm
21-08-25 06:09 pm
HK News Desk
ಹೈದರಾಬಾದ್ ನಲ್ಲಿ ಕಲಬುರಗಿ ಮೂಲದ 2 ವರ್ಷದ ಮಗು ಸೇರ...
21-08-25 12:54 pm
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
21-08-25 03:44 pm
Mangalore Correspondent
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
MLA Vedavyas Kamath: ಶ್ರೀಕೃಷ್ಣ ಜನ್ಮಾಷ್ಟಮಿಯ ಸಂ...
20-08-25 10:19 pm
Ananya–Sujatha Bhatt Case, Lawyer Manjunath:...
20-08-25 04:28 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm