ಬ್ರೇಕಿಂಗ್ ನ್ಯೂಸ್
05-09-23 10:25 am Mangalore Correspondent ಕರಾವಳಿ
ಮಂಗಳೂರು, ಸೆ.5: ಭ್ರಷ್ಟ ಅಧಿಕಾರಿಯನ್ನು ನೀರಿಲ್ಲದ ಜಾಗಕ್ಕೆ ವರ್ಗಾಯಿಸ್ತೀನಿ ಎನ್ನುವ ಮಾತು ರಾಜಕಾರಣಿಗಳ ಬಾಯಲ್ಲಿ ಬರೋದು ಕೇಳಿದ್ದೇವೆ. ಆದರೆ ದಕ್ಷ ಅಧಿಕಾರಿಯೆಂದು ಜನಮನ್ನಣೆ ಪಡೆದ, ಸ್ವಸ್ಥ ಸಮಾಜಕ್ಕೆ ಕಂಟಕವಾಗಿದ್ದ ಡ್ರಗ್ಸ್ ದಂಧೆಯ ವಿರುದ್ಧ ಸಮರವನ್ನೇ ಸಾರಿದ್ದ ಅಧಿಕಾರಿಯನ್ನು ಹುದ್ದೆಯನ್ನೇ ತೋರಿಸದೆ ಎತ್ತಂಗಡಿ ಮಾಡೋದಂದ್ರೆ..? ಹೌದು.. ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಕೇವಲ ಐದೇ ತಿಂಗಳಲ್ಲಿ ಯಾರೂ ಊಹಿಸದ ರೀತಿ ಕೆಲಸ ಮಾಡಿದ್ದ ಕುಲದೀಪ್ ಕುಮಾರ್ ಜೈನ್ ಅವರನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಹುದ್ದೆಯನ್ನೇ ತೋರಿಸದೆ ಎತ್ತಂಗಡಿ ಮಾಡಿದೆ.
ಕುಲದೀಪ್ ಕುಮಾರ್ ಜೈನ್ ಕಳೆದ ಫೆಬ್ರವರಿ ತಿಂಗಳ 24ರಂದು ಮಂಗಳೂರು ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಈ ಹಿಂದಿನ ಕಮಿಷನರ್ ಆಗಿದ್ದ ಶಶಿಕುಮಾರ್ ಬಗ್ಗೆ ಭ್ರಷ್ಟಾಚಾರ ಆರೋಪ ಕೇಳಿಬಂದರೂ ಎರಡೂವರೆ ವರ್ಷದ ಬಳಿಕ ವರ್ಗಾವಣೆ ಮಾಡಲಾಗಿತ್ತು. ಆ ಸ್ಥಾನಕ್ಕೆ ಹಾಲುಗಲ್ಲದ, ಮುಗ್ಧ ಹುಡುಗನಂತಿದ್ದ ರಾಜಸ್ಥಾನ ಮೂಲದ ಐಪಿಎಸ್ ಅಧಿಕಾರಿ ಕುಲದೀಪ್ ಕುಮಾರ್ ಜೈನ್ ಅವರನ್ನು ನೇಮಕ ಮಾಡಲಾಗಿತ್ತು. ನೋಡೋಕೆ ಸಾಮಾನ್ಯನಂತಿದ್ದ ಕುಲದೀಪ್ ಜೈನ್ ಕೇವಲ ಐದು ತಿಂಗಳಲ್ಲಿ ಸಾಧಿಸಿದ ಕೆಲಸ, ಕರ್ತವ್ಯ ಪರತೆ ಪದಗಳಲ್ಲಿ ಹೇಳಲಾಗದ್ದು.
‘’ಡ್ರಗ್ಸ್ ಫ್ರೀ ಮಂಗಳೂರು’’ ಅನ್ನುವ ದಿಟ್ಟ ಗುರಿಯಿಟ್ಟುಕೊಂಡು ಕಳೆದ ಮೂರು ತಿಂಗಳಲ್ಲಿ ಸಿಸಿಬಿ ಪೊಲೀಸರನ್ನು ಮುಂದಿಟ್ಟು ನಿರಂತರ ಕಾರ್ಯಾಚರಣೆ ನಡೆಸಿದ್ದರು. 10-15 ವರ್ಷಗಳಲ್ಲಿ ಹತ್ತಾರು ಕೇಸುಗಳಿದ್ದರೂ ತಪ್ಪಿಸಿಕೊಂಡು ತಿರುಗಾಡುತ್ತಿದ್ದ, ಕೋರ್ಟ್ ವಾರಂಟ್ ಇದ್ದರೂ ತಲೆಮರೆಸಿಕೊಂಡಿದ್ದ, ಸದಾ ಡ್ರಗ್ಸ್ ದಂಧೆಯನ್ನೇ ವೃತ್ತಿ ಮಾಡಿಕೊಂಡಿದ್ದ ಮಂಗಳೂರು ಆಸುಪಾಸಿನ ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ಕೊನೆಗೆ, ಡ್ರಗ್ಸ್ ಮೂಲಕ್ಕೇ ಕೈಹಾಕಿದ್ದರು. ಎಲ್ಲಿಂದ ಡ್ರಗ್ಸ್ ಪೂರೈಕೆಯಾಗುತ್ತೆ ಅನ್ನುವುದನ್ನು ಪತ್ತೆ ಮಾಡಿ ಮೊನ್ನೆಯಷ್ಟೇ ಬೆಂಗಳೂರಿನ ಡ್ರಗ್ಸ್ ಕಿಂಗ್ ಪಿನ್ ಮಹಿಳೆಯನ್ನು ಬಂಧಿಸಿ ಕರೆತಂದಿದ್ದರು. ನೈಜೀರಿಯನ್ ಪ್ರಜೆಯಾಗಿದ್ದರೂ ಅಕ್ರಮವಾಗಿ ಬೆಂಗಳೂರಿನ ಯಲಹಂಕದಲ್ಲಿದ್ದುಕೊಂಡು ಮಂಗಳೂರು, ಬೆಂಗಳೂರಿಗೆ ಎಂಡಿಎಂಎ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಲೇಡಿ ಡಾನ್ ಆಗಿದ್ದ ಮಹಿಳೆಯನ್ನು ಹಿಡಿದಾಕಿದ್ದರು.
![]()
ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸಿಕ್ಕಿಬಿದ್ದವರು ತಮಗೆ ಡ್ರಗ್ಸ್ ಅನ್ನು ಬೆಂಗಳೂರಿನಲ್ಲಿ ನೈಜಿರಿಯನ್ ಪ್ರಜೆಗಳು ನೀಡುತ್ತಿದ್ದಾರೆ ಎಂದು ಹೇಳುತ್ತಿದ್ದರೂ, ಅವರನ್ನು ಪತ್ತೆಹಚ್ಚುವುದು ಸಾಧ್ಯವಾಗಿರಲಿಲ್ಲ. ಈ ಕ್ರಿಮಿಗಳು ತಾವು ಮೊಬೈಲ್ ಬಳಸದೆ, ಕೇವಲ ವೈಫೈನಲ್ಲಿ ವಾಟ್ಸಪ್ ಮೆಸೇಜ್ ಮಾತ್ರ ಮಾಡುತ್ತಿದ್ದುದರಿಂದ ಅವರು ಎಲ್ಲಿದ್ದಾರೆಂದು ಪತ್ತೆ ಮಾಡುವುದು ಕಷ್ಟವಾಗಿತ್ತು. ಕಳೆದ ಬಾರಿ ಮಂಗಳೂರಿನಲ್ಲಿ ಡಿಸಿಪಿ ಆಗಿದ್ದ ಹರಿರಾಮ್ ಶಂಕರ್ ಇದೇ ರೀತಿ ಡ್ರಗ್ಸ್ ಹಿಂದೆ ಬಿದ್ದಾಗಲೂ ಅವರ ಕೈ ಕಟ್ಟಿ ಹಾಕುವ ಪ್ರಯತ್ನ ನಡೆದಿತ್ತು ಅನ್ನುವುದನ್ನು ಮರೆಯುವಂತಿಲ್ಲ.

ಇದಲ್ಲದೆ, ಮಂಗಳೂರಿನಲ್ಲಿ ಖಾಸಗಿ ಬಸ್ಸುಗಳಿಗೆ ಕಡಿವಾಣ ಹಾಕಿದ್ದು, ನಿರಂತರ ಎರ್ರಾಬಿರ್ರಿ ಚಲಾಯಿಸುತ್ತಾ ಅಮಾಯಕರ ಪ್ರಾಣ ಹಿಂಡುತ್ತಿದ್ದುದಕ್ಕೆ ಬಸ್ ಚಾಲಕರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದು, ರಸ್ತೆ ನಿಯಮ ಪಾಲಿಸದ 500ಕ್ಕೂ ಹೆಚ್ಚು ಮಂದಿಯ ಡ್ರೈವಿಂಗ್ ಲೈಸನ್ಸ್ ಕ್ಯಾನ್ಸಲ್ ಮಾಡಲು ಆರ್ ಟಿಓಗೆ ರವಾನಿಸಿದ್ದು, ಫೋನ್ ಇನ್ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಾ ಸ್ಥಳದಲ್ಲೇ ಪರಿಹಾರ ಸೂಚಿಸುತ್ತಿದ್ದ ಪೊಲೀಸ್ ಕಮಿಷನರ್ ಸಮಾಜದಲ್ಲಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಇಷ್ಟೇ ಅಲ್ಲ, ಕಮಿಷನರ್ ಆಗಿ ಬಂದ ಬಳಿಕ ವಸೂಲಿ ಅಡ್ಡೆಗಳಾಗಿದ್ದ ಪೊಲೀಸ್ ಠಾಣೆಗಳಲ್ಲಿದ್ದವರೂ ಮೈಕೊಡವಿಕೊಂಡಿದ್ದರು. ಇಂಥದ್ದೇ ಕೆಲಸ ಮಾಡಬೇಕೆಂದು ಹೇಳಿ ನಾಲ್ಕು ದಿನಕ್ಕೊಮ್ಮೆ ಪ್ರತಿ ಠಾಣೆಗೆ ತೆರಳಿ ಅಲ್ಲಿನ ಅಧಿಕಾರಿಗಳ ಚಳಿ ಬಿಡಿಸುತ್ತಿದ್ದರು.
ಡ್ರಗ್ಸ್ ಲಾಬಿಯೇ ಈಗ ರಾಜ್ಯ ಸರ್ಕಾರದ ಮೇಲೆ ಪ್ರಭಾವ ಬೀರಿ ಮಂಗಳೂರು ಕಮಿಷನರ್ ಅವರನ್ನು ಕರ್ತವ್ಯದ ನಡುವಲ್ಲೇ ಎತ್ತಂಗಡಿ ಮಾಡಿದೆ ಅನ್ನೋದಂತು ಸತ್ಯ. ಇವರ ಜಾಗಕ್ಕೆ ಅನುಪಮ್ ಅಗರ್ವಾಲ್ ಎನ್ನುವ 2008ರ ಸಾಲಿನ ಹಿರಿಯ ಐಪಿಎಸ್ ಅಧಿಕಾರಿ ಅವರನ್ನು ಮಂಗಳೂರು ಕಮಿಷನರ್ ಆಗಿ ನೇಮಕ ಮಾಡಲಾಗಿದೆ.
Anupam Agrawal appointed new Mangalore police commissioner, kuldeep jain transferred just in 5 months after he was know as a strict police officer who was in the urge of making drug free city. In addition, Anshu Kumar, who was serving as the DCP law and order, has been appointed as the superintendent of police of Coastal Security Police, Udupi.
12-11-25 09:03 pm
Bangalore Correspondent
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm