ಬ್ರೇಕಿಂಗ್ ನ್ಯೂಸ್
03-09-23 12:25 pm Mangalore Correspondent ಕರಾವಳಿ
ಬೆಳ್ತಂಗಡಿ, ಸೆ.3: ಸೌಜನ್ಯಾ ಸ್ತ್ರೀ ಸ್ವರೂಪ ತೊರೆದು ಕಾಳಿ ಸ್ವರೂಪವನ್ನ ಪಡೆದಿದ್ದಾಳೆ. ಅವಳ ಆತ್ಮ ಭೀಕರ ಸ್ವರೂಪ ಪಡೆಯುವ ಮುನ್ನ ಸರಕಾರ ಎಚ್ಚೆತ್ತು ಕೊಳ್ಳಬೇಕು ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಹೇಳಿದ್ದಾರೆ.
ಸೌಜನ್ಯಾ ಪರವಾಗಿ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಧರ್ಮಪಾಲನಾಥ ಸ್ವಾಮೀಜಿ ಭಾಷಣ ಮಾಡಿದ್ದಾರೆ. ಸತ್ಯ, ನ್ಯಾಯದ ಹೋರಾಟಕ್ಕೆ ಆದಿಚುಂಚನಗಿರಿ ಮಠದ ಸಂಪೂರ್ಣ ಬೆಂಬಲವಿದೆ. ಒಕ್ಕಲಿಗ ಸಮಾಜದ ಬೆಂಬಲ ಇದೆ.


ಆರು ವರ್ಷ ಜೈಲಿನಲ್ಲಿದ್ದ ಸಂತೋಷ ರಾವ್ ಗೆ ಮರಳಿ ಜೀವನ ನೀಡಲು ಸಾಧ್ಯವಿಲ್ಲ. ಅದಕ್ಕಾಗಿ ರಾಜ್ಯ ಸರಕಾರ ಅವನ ಬದುಕಿಗೆ ಏನಾದ್ರು ವ್ಯವಸ್ಥೆ ಮಾಡಬೇಕು. ಜೊತೆಗೆ ಸೌಜನ್ಯಾ ಕುಟುಂಬಕ್ಕೂ ರಾಜ್ಯ ಸರಕಾರ ರಕ್ಷಣೆ ನೀಡಬೇಕು. 11 ವರ್ಷಗಳ ಸಿಬಿಐ ತನಿಖೆಯಲ್ಲಿ ನ್ಯಾಯ ಸಿಗದೇ ಇರುವುದು ನಮ್ಮ ವ್ಯವಸ್ಥೆಯ ದುರಂತ.
ತನಿಖೆಯ ಸಂದರ್ಭದಲ್ಲಿ ಒಬ್ಬನಿಂದ ಆಗಿರುವ ಕೃತ್ಯ ಅಲ್ಲ. ಸಾಮೂಹಿಕ ಅತ್ಯಾಚಾರ ಆಗಿರುವುದು ಪತ್ತೆಯಾಗಿತ್ತು. ಹಾಗಾದರೆ ಯಾರು ಈ ಕೃತ್ಯ ಎಸಗಿದ್ದೆಂದು ಪತ್ತೆಯಾಗಬೇಕು. ಅದಕ್ಕಾಗಿ ಶವ ಪರೀಕ್ಷೆ ಮಾಡಿದ ವೈದ್ಯರು ಮತ್ತು ಪೊಲೀಸ್ ತನಿಖಾಧಿಕಾರಿಯನ್ನ ಮಂಪರು ಪರೀಕ್ಷೆ ಮಾಡಬೇಕು. ಮಹೇಶ್ ಶೆಟ್ಟಿ ಅವರ ಹೋರಾಟಕ್ಕೆ ಆದಿಚುಂಚನಗಿರಿ ಮಠ ಮತ್ತು ಒಕ್ಕಲಿಗ ಸಮಾಜದ ಬೆಂಬಲ ಇದೆ. ನಮ್ಮ ಮಠದ ಹಿರಿಯ ಸ್ವಾಮೀಜಿಗಳು ಸಭೆ ಕರೆದಿದ್ದಾರೆ. ಮಾಹಿತಿ ನೀಡುತ್ತೇವೆ. ಸರಕಾರ ಶೀಘ್ರ ತನಿಖೆ ನಡೆಸಿ ಯಾರು ಆರೋಪಿ ಎಂಬುದನ್ನು ಪತ್ತೆ ಮಾಡಬೇಕು ಎಂದು ಸ್ವಾಮೀಜಿ ಪ್ರಖರ ಭಾಷಣ ಮಾಡಿದ್ದಾರೆ.
ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್, ಗಿರೀಶ್ ಮಟ್ಟೆಣ್ಣವರ್, ತಮ್ಮಣ್ಣ ಶೆಟ್ಟಿ, ಪ್ರಸನ್ನ ರವಿ ಮತ್ತಿತರರು ಇದ್ದಾರೆ. ಸಾವಿರಾರು ಜನರು ಸೇರಿದ್ದಾರೆ.
Sowjanya rape case, massive protest held at Belthangady, Mangalore Shaka math swamiji warns about voilent protest.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 07:34 pm
HK News Desk
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am