ಬ್ರೇಕಿಂಗ್ ನ್ಯೂಸ್
10-09-22 10:55 pm Mangalore Correspondent ಕರಾವಳಿ
ಮಂಗಳೂರು, ಸೆ. 10: ಮಹಾನ್ ದಾರ್ಶನಿಕ, ಇಡೀ ಜಗತ್ತಿನಲ್ಲಿ ಹಿಂದು ಧರ್ಮದ ಹೊಸ ಮೈಲಿಗಲ್ಲು ಸೃಷ್ಟಿಸಿದ್ದ ನಾರಾಯಣ ಗುರುಗಳನ್ನು ಗುಡಿ ಗೋಪುರಗಳಿಗೆ ಸೀಮಿತಗೊಳಿಸಿದ್ದೇವೆ. ಯಾರಿಗೆ ದೇಗುಲ ಪ್ರವೇಶ ಇಲ್ಲವೋ, ಅವರಿಗೆ ದೇಗುಲ ನಿರ್ಮಿಸಿಕೊಟ್ಟವರು ಗುರುಗಳು. ಅಂಥವರು ಹೇಳಿಕೊಟ್ಟಿದ್ದನ್ನು ನಾವು ಪಾಲಿಸುತ್ತಿಲ್ಲ. ಬದಲಿಗೆ, ಅವರನ್ನು ನಾವು ಗುಡಿಯಲ್ಲಿ ಕೂರಿಸಿ ತಮ್ಮ ಪಾಡಿಗಿದ್ದೇವೆ ಎಂದು ಉಪನ್ಯಾಸಕ ಕೇಶವ ಬಂಗೇರ ಹೇಳಿದ್ದಾರೆ.
ನಗರದ ಟಿಎಂಎ ಪೈ ಕನ್ವೆನ್ಷನ್ ಸೆಂಟರಿನಲ್ಲಿ ನಡೆದ ನಾರಾಯಣ ಗುರುಗಳ ರಾಜ್ಯ ಮಟ್ಟದ ಜಯಂತಿ ಕಾರ್ಯಕ್ರಮದಲ್ಲಿ ಕೇಶವ ಬಂಗೇರ ಉಪನ್ಯಾಸ ನೀಡಿದರು. ನಮ್ಮ ದೇಶದಲ್ಲಿ ದೇವರನ್ನು ಪ್ರತಿಷ್ಠೆ ಮಾಡುವುದು, ಪೂಜಿಸುವುದು ಸೀಮಿತ ವರ್ಗಕ್ಕೆ ಇತ್ತು. ಯಾವುದೇ ಹಿಂದುಳಿದ ವರ್ಗಕ್ಕೆ ದೇವರನ್ನು ಪೂಜಿಸಲು ಅವಕಾಶ ಇರಲಿಲ್ಲ. ತ್ರೇತಾಯುಗದಲ್ಲಿ ಶ್ರೀರಾಮ ಶಿವನನ್ನು ಪ್ರತಿಷ್ಡೆ ಮಾಡಿ ಪೂಜಿಸಿದ ಬಳಿಕ 1988ರಲ್ಲಿ ಭರತ ಖಂಡದ ಇತಿಹಾಸದಲ್ಲೇ ಮೊದಲ ಬಾರಿಗೆ ನಾರಾಯಣ ಗುರುಗಳು ಶಿವಲಿಂಗ ಪ್ರತಿಷ್ಠೆ ಮಾಡಿ ಹಿಂದುಳಿದ ವರ್ಗಕ್ಕೆ ಪೂಜಿಸಲು ಅವಕಾಶ ಕೊಡುತ್ತಾರೆ. ಹಲವರ ವಿರೋಧದ ಮಧ್ಯೆಯೂ ಶಿವನನ್ನು ಶಿವರಾತ್ರಿಯಂದೇ ಪ್ರತಿಷ್ಠೆಗೈದು ಪೂಜಿಸಿದ್ದು ಹಿಂದು ಧರ್ಮದ ಇತಿಹಾಸದಲ್ಲೇ ಹೊಸ ಮೈಲಿಗಲ್ಲು. ಹಿಂದುಳಿದವರ ಪೂಜೆಗೆಂದೇ ಕೇರಳದಾದ್ಯಂತ 81 ದೇವಸ್ಥಾನಗಳನ್ನು ಕಟ್ಟಿದ್ದರು. ಅದೇ ವೇಳೆಗೆ, ದೇವಸ್ಥಾನ ಚಿಕ್ಕದಾಗಿರಲಿ, ಪರಿಸರ ಚೊಕ್ಕದಾಗಿರಲಿ. ಅಲ್ಲಿನ ಗ್ರಂಥಾಲಯ ದೊಡ್ಡದಾಗಿರಲಿ ಎಂದು ಅದ್ಭುತ ಪರಿಕಲ್ಪನೆಯನ್ನು ಗುರುಗಳು ನೀಡಿದ್ದರು.
ಕೇವಲ ದೇವಸ್ಥಾನ ಸ್ಥಾಪನೆಯಿಂದ ಸಾಧನೆ ಮಾಡಲಾಗದು. ಅದು ನಮ್ಮ ಗುರಿಯಲ್ಲ. ಸಾಮಾಜಿಕ ಬದಲಾವಣೆಗೆ ಶಿಕ್ಷಣವೇ ಮಂತ್ರ. ಅದಕ್ಕಾಗಿ ಶಿಕ್ಷಣ ಕೇಂದ್ರಗಳ ಸ್ಥಾಪನೆ ಆಗಬೇಕೆಂದು ಅಸ್ಪೃಶ್ಯತೆ ವಿರುದ್ಧ ಸೆಟೆದು ನಿಂತು ಸಮಾಜಕ್ಕೆ ಹೊಸ ದಿಕ್ಕು ತೋರಿಸಿದರು. ಅವರೆಂದೂ ನಾನು ಹೇಳಿದ್ದನ್ನು ಕೇಳಿ, ಅನ್ನಲಿಲ್ಲ. ನಾನು ನಡೆದಂತೆ ನಡೆಯಿರಿ ಎಂದಿದ್ದರು. ಆ ಕಾಲದಲ್ಲಿಯೇ ಸಮಾಜಕ್ಕೆ ತ್ರಿಭಾಷಾ ಸೂತ್ರ ಕೊಟ್ಟಿದ್ದರು. ಸಂಸ್ಕೃತದ ಮೂಲಕ ಜ್ಞಾನ ಪಡೆಯಿರಿ, ಇಡೀ ಜಗತ್ತು ಅರಿಯಲು ಇಂಗ್ಲಿಷ್ ಕಲಿಯಿರಿ. ಶಿಕ್ಷಣವನ್ನು ಮಾತೃಭಾಷೆಯಲ್ಲಿ ಪಡೆಯಿರಿ ಎಂದು ಹೇಳಿದ್ದರು.
ನಾರಾಯಣ ಗುರು ಹುಟ್ಟಿ ಬರದಿದ್ದರೆ ಕೇರಳದಲ್ಲಿ ಅರ್ಧಕ್ಕರ್ಧ ಮತಾಂತರ ನಡೀತಿತ್ತು. ಮತಾಂತರ ತಡೆದು ಸನಾತನ ಹಿಂದು ಧರ್ಮದ ಉಳಿವಿಗಾಗಿ ಪಣ ತೊಟ್ಟಿದ್ದು ನಾರಾಯಣ ಗುರುಗಳು. 1924ರಲ್ಲಿ ಇಡೀ ದೇಶದಲ್ಲೇ ಮೊದಲ ಬಾರಿಗೆ ಸರ್ವಧರ್ಮ ಸಮ್ಮೇಳನವನ್ನು ಮಾಡಿದ್ದರು. ಸಮ್ಮೇಳನ ಮಾಡುವುದು ಗುದ್ದಾಡಲು ಅಲ್ಲ. ನಿಮ್ಮಿಂದ ನಾವು, ನಮ್ಮಿಂದ ನೀವು ಧರ್ಮಗಳ ಸತ್ವವನ್ನು ತಿಳಿಯಲು ಎಂದಿದ್ದರು ಗುರುಗಳು. ತನ್ನ ಆಶ್ರಮಕ್ಕೆ ಬಂದ ಹಲವರು ಗುರುಗಳಿಗೆ ಮತಾಂತರದ ಆಮಿಷ ಒಡ್ಡಿದರು. ಬೈಬಲ್ ಓದುವಂತೆ ಹೇಳಿದರು. ಬೈಬಲ್ ಬಗ್ಗೆ ತಿಳಿಯಬೇಕು ಎಂದು ಜಾನ್ ಎಂಬ ಗುರುವನ್ನು ಆಶ್ರಮಕ್ಕೆ ಆಹ್ವಾನಿಸುತ್ತಾರೆ. ಗುರುವಾಗಿ ಬಂದಿದ್ದ ಜಾನ್ ಕೊನೆಗೆ ನಾರಾಯಣ ಗುರುಗಳ ಜ್ಞಾನಕ್ಕೆ ಮಾರುಹೋಗಿ ಅವರದ್ದೇ ಶಿಷ್ಯನಾಗುತ್ತಾನೆ.
ಯಾವ ವಿವೇಕಾನಂದರು ಕೇರಳವನ್ನು ಹುಚ್ಚರ ಸಂತೆ ಎಂದಿದ್ದರೋ ಅದೇ ಜಾಗದಲ್ಲಿ ಶಿಕ್ಷಣ, ಸಾಮಾಜಿಕ, ಧಾರ್ಮಿಕ ಪರಿವರ್ತನೆಗಾಗಿ ಕ್ರಾಂತಿ ಎಬ್ಬಿಸಿದ್ದರು ನಾರಾಯಣ ಗುರುಗಳು. ಗುರುಗಳನ್ನು ಹಲವರು ಅವಧೂತ ಪುರುಷ, ಅವತಾರ ಪುರುಷನೆಂದು ಕೊಂಡಾಡಿದ್ದರು. ಅತ್ಯಂತ ಹಿಂದುಳಿದ ಕೋಯ ಸಮುದಾಯದ ಇಬ್ಬರು ಮಕ್ಕಳನ್ನು ತಮ್ಮ ತೊಡೆಯಲ್ಲಿಟ್ಟು ಒಂದೇ ಜಾತಿ, ಒಂದೇ ಮತ, ಒಂದೇ ಕುಲ ಎಂದು ಬೋಧಿಸಿದವರು. ಈಳವ ಕುಲದಲ್ಲಿ ಹುಟ್ಟಿದರೂ ನಂಬೂದಿರಿ, ನಾಯರ್, ಈಳವಂ ಸೇರಿ ಹಿಂದುಳಿದ ವರ್ಗಗಳ ಏಳ್ಗೆಗಾಗಿಯೇ ಸಂಘಟನೆ ಕಟ್ಟಿದ್ದರು. ಅಂಥ ಮಹಾನ್ ಸಂತನನ್ನು ಜಾತಿಯ ಬಂಧನಕ್ಕೆ ಸಿಲುಕಿಸದೆ, ಎಲ್ಲರೊಳಗೊಂದಾಗಿ ನಾವು ಸ್ವೀಕಾರ ಮಾಡಬೇಕು ಎಂದು ಕೇಶವ ಬಂಗೇರ ತಮ್ಮ ವಿಶೇಷ ಉಪನ್ಯಾಸದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಗುರುಗಳಿಗಾಗಿ ಹಿಂದೇನು ಆಗಿದೆ ಎಂದು ನಾವು ಕೇಳುವುದಿಲ್ಲ. ನಾವೇನು ಮಾಡಿದ್ದೇವೆಂದು ಹೇಳಬೇಕು. ಬೊಮ್ಮಾಯಿ ಸರಕಾರ, ರಾಜ್ಯದಲ್ಲಿ ನಾರಾಯಣ ಗುರುಗಳ ಹೆಸರಲ್ಲಿ ನಾಲ್ಕು ವಸತಿ ಶಾಲೆಗಳನ್ನು ಮಾಡಿದ್ದೇವೆ. ಒಂದು ಶಾಲೆಗೆ 30 ಕೋಟಿ ಖರ್ಚು ಮಾಡಿ ಹಿಂದುಳಿದ ವರ್ಗದ ಮಕ್ಕಳಿಗಾಗಿ ಇಂಗ್ಲಿಷ್ ಮೀಡಿಯಂ ಶಾಲೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಮಬಾಳು, ಸಮಪಾಲು ಅನ್ನುವುದು ಗುರುಗಳ ಚಿಂತನೆ. ಅದಕ್ಕೆ ತಕ್ಕಂತೆ ನಡೆದುಕೊಂಡಿದ್ದೇವೆ. ಉಡುಪಿ ಜಿಲ್ಲೆಯಲ್ಲಿ ಕೋಟಿ ಚೆನ್ನಯರ ಹೆಸರಲ್ಲಿ ಮತ್ತು ದ.ಕ. ಜಿಲ್ಲೆಯಲ್ಲಿ ಅಬ್ಬಕ್ಕ ಹೆಸರಲ್ಲಿ ಸೇನಾ ತರಬೇತಿ ಸಂಸ್ಥೆಗಳನ್ನು ಮಂಜೂರು ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಸೇನಾ ತರಬೇತಿಗೆ ಸಂಸ್ಥೆ ಆರಂಭಿಸುತ್ತೇವೆ ಎಂದಿದ್ದಾರೆ, ಕೋಟ.
ಇಂಧನ ಸಚಿವ ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಸದ ನಳಿನ್ ಕುಮಾರ್, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಹರೀಶ ಪೂಂಜ ಮತ್ತಿತರರಿದ್ದರು.
ಕಾರ್ಯಕ್ರಮಕ್ಕೂ ಮೊದಲು ಲೇಡಿಹಿಲ್ ವೃತ್ತದಿಂದ ಕಾರ್ಯಕ್ರಮ ನಡೆಯುವ ಬಳ್ಳಾಲ್ ಬಾಗ್ ವರೆಗೆ ನಾರಾಯಣ ಗುರುಗಳ ಟ್ಯಾಬ್ಲೋಗಳು, ಭಜನಾ ತಂಡಗಳು, ಹುಲಿ ವೇಷ, ಯಕ್ಷಗಾನ, ಗೊಂಬೆಯಾಟ ಇನ್ನಿತರ ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು.
Kannada and Culture department in collaboration with Dakshina Kannada district administration, Dakshina Kannada zilla panchayat, and Mangaluru City Corporation observed Brahmashree Narayana Guru Jayanthi at TMA Pai Convention Hall here on Saturday September 10.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 10:50 pm
Mangalore Correspondent
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm