ಬ್ರೇಕಿಂಗ್ ನ್ಯೂಸ್
11-05-23 03:36 pm Source: news18 ಸಿನಿಮಾ
ಕಾಂತಾರ ಸಿನಿಮಾ ರಿಲೀಸ್ ಆಗಿ ತಿಂಗಳುಗಳೇ ಕಳೆದರೂ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರಿಗೆ ಪ್ರಶಂಸೆ ವ್ಯಕ್ತವಾಗುತ್ತಲೇ ಇದೆ. ಸ್ಯಾಂಡಲ್ವುಡ್ನಲ್ಲಿ ಹೊಸ ಅಲೆ ಸೃಷ್ಟಿಸಿದ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಕಾಂತಾರಕ್ಕೆ ವ್ಯಾಪಕ ಮೆಚ್ಚುಗೆ ಹರಿದುಬಂತು. ಇತ್ತೀಚೆಗೆ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರು ಕಾಂತಾರ ನಟ ರಿಷಬ್ ಶೆಟ್ಟಿ ಕುರಿತು ಮಾತನಾಡಿದ್ದಾರೆ. ಡಿಸೆಂಬರ್ನಲ್ಲಿ ರಿಷಬ್ ಶೆಟ್ಟಿ ಅವರನ್ನು ಭೇಟಿಯಾದ ಸಮಯದ ಕುರಿತು ನವಾಜುದ್ದೀನ್ ಪ್ರತಿಕ್ರಿಯಿಸಿದ್ದಾರೆ. ನಟ ಅವರ ಭೇಟಿಯ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
ಇತ್ತೀಚೆಗೆ ಪಿಂಕ್ವಿಲ್ಲಾ ಜೊತೆ ಮಾತನಾಡಿದ ನಟ ಈ ಬಗ್ಗೆ ಇನ್ನಷ್ಟು ವಿವರಗಳನ್ನು ಶೇರ್ ಮಾಡಿದ್ದಾರೆ. ರಿಷಬ್ ಹಾಗು ಅವರ ಸ್ನೇಹಿತರು ಥಿಯೇಟರ್ಗೆ ಬೇಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ನಮ್ಮ ಗುರುಗಳು ಸೇಮ್ ಎನ್ನುವುದು ವಿಶೇಷವಾದ ಸಂಗತಿ ಎಂದಿದ್ದಾರೆ ನವಾಜುದ್ದೀನ್ ಸಿದ್ದಿಕಿ. ನಿಮ್ಮೊಂದಿಗೆ ನಮ್ಮ ಮನೆಯಲ್ಲಿ ಸ್ವಲ್ಪ ಕ್ವಾಲಿಟಿ ಸಮಯ ಕಳೆಯಲು ಖುಷಿಯಾಗಿದೆ. ವಿಶೇಷ ಏನೆಂದರೆ ನನ್ನಲ್ಲೂ ರಿಷಬ್ ಶೆಟ್ಟಿ ಅವರಲ್ಲೂ ಬಹಳಷ್ಟು ವಿಚಾರಗಳು ಒಂದೇ ರೀತಿ ಇದೆ. ಇದರ ಬಗ್ಗೆ ನಾವು ಮಾತನಾಡುತ್ತಲೇ ಇರಬಹುದು ಎಂದಿದ್ದಾರೆ.
ಅವರು ಈಗಲೂ ಥಿಯೇಟರ್ ಜೊತೆ ಸಂಬಂಧ ಉಳಿಸಿಕೊಂಡಿದ್ದು ಅವರಿನ್ನೂ ಅವರು ನಡೆದುಬಂದ ಹಾದಿಗೆ ಆತ್ಮೀಯವಾಗಿದ್ದಾರೆ. ಅವರ ಸಂಸ್ಕೃತಿಗೆ ಹೆಚ್ಚು ಕನೆಕ್ಟ್ ಆಗಿದ್ದಾರೆ. ಅದರ ಕುರಿತು ಸಿನಿಮಾ ಕೂಡಾ ಮಾಡಿದ್ದಾರೆ. ನಮ್ಮ ಗುರುಗಳು ಒಂದೇ ಆಗಿರುವುದರಿಂದ ನಮ್ಮ ಸಂಬಂಧ ವಿಶೇಷವಾಗಿದೆ. ಈಗ ನಾವು ಸ್ನೇಹಿತರು ಎಂದಿದ್ದಾರೆ. ಅವರು ತಮ್ಮ ಭೇಟಿಯಲ್ಲಿ ಒಟ್ಟಿಗೆ ಕೆಲಸ ಮಾಡುವ ಬಗ್ಗೆಯೂ ಮಾತನಾಡಿದ್ದಾರೆ. ಕಾಂತಾರ 2ಗೆ ನವಾಜುದ್ದೀನ್ ಸಿದ್ದಿಕಿ ರಿಷಬ್ ಶೆಟ್ಟಿ ಜೊತೆ ಕೆಲಸ ಮಾಡುತ್ತಾರಾ? ನಟರ ಅಭಿಮಾನಿಗಳು ಈ ರೀತಿಯೂ ನಿರೀಕ್ಷಿಸುತ್ತಿದ್ದಾರೆ.
ನಾನ್ಯಾಕೆ ಅವರೊಂದಿಗೆ ಕೆಲಸ ಮಾಡಲು ಬಯಸಬಾರದು? ಅವರು ಅದ್ಭುತ ನಟ, ನಿರ್ದೇಶಕ, ರಾಜ್ ಶೆಟ್ಟಿ ಅವರನ್ನು ಒಳಗೊಂಡಂತೆ ಇಡೀ ತಂಡವೇ ತುಂಬಾ ಟ್ಯಾಲೆಂಟೆಡ್ ಆಗಿದೆ ಎಂದಿದ್ದಾರೆ ಬಾಲಿವುಡ್ ನಟ.
nawazuddin siddiqui says he and rishab shetty are friends opens up on chances of collaboration.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 10:54 am
HK News Desk
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
ಅಮೆರಿಕನ್ ಕಂಪನಿಗಳನ್ನು ಬಹಿಷ್ಕರಿಸಲು ರಾಮದೇವ್ ಕರೆ...
01-09-25 01:06 pm
03-09-25 11:03 pm
Mangalore Correspondent
Kmc Attavar, Mangalore News: 43 ವರ್ಷದ ಮಹಿಳೆಗೆ...
03-09-25 10:52 pm
Sullia, Sampaje Accident: ಸಂಪಾಜೆ ಬಳಿ ಭೀಕರ ಅಪಘ...
03-09-25 08:09 pm
Sowjanya Case, SIT, Uday Jain: 13 ವರ್ಷಗಳ ಬಳಿಕ...
03-09-25 03:45 pm
College student Missing, Mangalore: ಮಂಗಳೂರಿನಲ...
03-09-25 11:53 am
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm