ಬ್ರೇಕಿಂಗ್ ನ್ಯೂಸ್
14-11-24 05:58 pm HK News Desk ದೇಶ - ವಿದೇಶ
ವಾಷಿಂಗ್ಟನ್, ನ.14: ಅಮೆರಿಕ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು
ರಾಷ್ಟ್ರೀಯ ಗುಪ್ತಚರ ಇಲಾಖೆ ನಿರ್ದೇಶಕರಾಗಿ ಮಾಜಿ ಮಿಲಿಟರಿ ಯೋಧೆ, ಹಿಂದು ಧರ್ಮಕ್ಕೆ ಸೇರಿದ ಮೊದಲ ಮಹಿಳಾ ಸೆನೆಟರ್ ಎಂದು ಹೆಸರಾಗಿದ್ದ ತುಳಸಿ ಗಬ್ಬಾರ್ಡ್ ಅವರನ್ನು ನೇಮಿಸಿದ್ದಾರೆ. ತುಳಸಿ ಗಬ್ಬಾರ್ಡ್ ಅವರನ್ನು "ಹೆಮ್ಮೆಯ ರಿಪಬ್ಲಿಕನ್" ಎಂದು ಟ್ರಂಪ್ ಬಣ್ಣಿಸಿದ್ದಾರೆ.
ಅಮೆರಿಕದ ಮೊಟ್ಟ ಮೊದಲ ಹಿಂದೂ ಅಮೆರಿಕನ್ ಶಾಸಕಿ ಎನಿಸಿಕೊಂಡಿದ್ದ ತುಳಸಿ ಗಬ್ಬಾರ್ಡ್ ಎರಡು ವರ್ಷಗಳ ಹಿಂದೆ ಡೆಮಾಕ್ರಟಿಕ್ ಪಕ್ಷವನ್ನು ತೊರೆದಿದ್ದರು. ಇದೀಗ ರಿಪಬ್ಲಿಕನ್ ಪಕ್ಷದ ಜೊತೆ ಕೈ ಜೋಡಿಸಿದ್ದು ಟ್ರಂಪ್ ಸರ್ಕಾರದಲ್ಲಿ ಅತ್ಯುನ್ನತ ಹುದ್ದೆ ಪಡೆದಿದ್ದಾರೆ. ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳಲ್ಲಿ ವ್ಯಾಪಕ ಬೆಂಬಲ ಹೊಂದಿರುವ ತುಳಸಿ ಗಬ್ಬಾರ್ಡ್ ಗುಪ್ತಚರ ಇಲಾಖೆಯನ್ನು ಇನ್ನಷ್ಟು ಭದ್ರಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಟ್ರಂಪ್ ತಿಳಿಸಿದ್ದಾರೆ.
ತುಳಸಿ ಗಬ್ಬಾರ್ಡ್ ಯಾರಿವಳು ?
ತುಳಸಿ ಗಬ್ಬಾರ್ಡ್ ಹವಾಯಿ ದ್ವೀಪ ಸಮೂಹದಿಂದ 2013 ರಲ್ಲಿ ಅಮೆರಿಕದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್‌ಗೆ ಚುನಾಯಿತರಾದ ಮೊದಲ ಹಿಂದೂ ಅಮೇರಿಕನ್ ವ್ಯಕ್ತಿ. ಆನಂತರ ಸತತ ನಾಲ್ಕು ಅವಧಿಗೆ ತುಳಸಿ ಅದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2020ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು US ಕಾಂಗ್ರೆಸ್‌ನಲ್ಲಿ ಆಸಕ್ತಿ ತೋರಿದ್ದರು. ಆದರೆ ಜೋ ಬಿಡೆನ್ ಪರ ಲಾಬಿಯಿಂದಾಗಿ ಈಕೆಯನ್ನು ಮುಂದಕ್ಕೆ ಹೋಗಲು ಬಿಟ್ಟಿರಲಿಲ್ಲ. 2022ರಲ್ಲಿ ತನ್ನ ಪಕ್ಷವನ್ನೇ ತೊರೆದು ರಿಪಬ್ಲಿಕನ್ ಸೇರಿದ್ದಲ್ಲದೆ, ಡೊನಾಲ್ಡ್ ಟ್ರಂಪ್ ಪರವಾಗಿ ಪ್ರಚಾರದಲ್ಲಿ ತೊಡಗಿದ್ದರು. ರಾಜಕೀಯಕ್ಕೆ ಬರೋದಕ್ಕೂ ಹಿಂದೆ ಇರಾಕ್, ಕುವೈತ್ ಯುದ್ಧದಲ್ಲಿ ಯೋಧೆಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಸ್ವತಃ ಯುದ್ಧ ವಿರೋಧಿ ಮನಸ್ಥಿತಿ ಹೊಂದಿರುವ ತುಳಸಿ, ಅಮೆರಿಕವನ್ನು ಬೇರೆ ದೇಶಗಳೊಂದಿಗೆ ಸಂಘರ್ಷಗಳಿಗೆ ಎಳೆದಿದ್ದಕ್ಕಾಗಿ ಜೋ ಬಿಡೆನ್ ನಡೆಯನ್ನು ಖಂಡಿಸಿದ್ದರು. ಯುಎಸ್ ಮಿಲಿಟರಿಯಲ್ಲಿ ಎರಡು ದಶಕ ಹೆಚ್ಚು ಕಾಲ ಸೇವೆ ಸಲ್ಲಿಸಿದ ಅನುಭವದಲ್ಲಿ ಗುಪ್ತಚರ ಸಂಸ್ಥೆಯ ಅಧ್ಯಕ್ಷ ಪದವಿಗೇರಿದ್ದಾರೆ ಎನ್ನಲಾಗುತ್ತಿದೆ. ಗುಪ್ತಚರ ಸಂಸ್ಥೆ ಮೂಲಕ ಅಮೆರಿಕದ 18 ಸ್ಪೈ ಏಜನ್ಸಿಗಳನ್ನು ತುಳಸಿ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲಿದ್ದಾರೆ.
ತುಳಸಿಗೂ ಭಾರತಕ್ಕೂ ಸಂಬಂಧ ಇಲ್ಲ !
ತುಳಸಿ ಹೆಸರಿನಿಂದಾಗಿ ಸಾಮಾನ್ಯವಾಗಿ ಈಕೆ ಭಾರತೀಯ ಮೂಲದವಳು ಎಂದು ತಪ್ಪಾಗಿ ಭಾವಿಸುವುದಿದೆ. ಆದರೆ ಆಕೆಗೂ ಭಾರತಕ್ಕೂ ಯಾವುದೇ ಸಂಬಂಧ ಇಲ್ಲ. ತುಳಸಿ ತಾಯಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು ತನ್ನ ಎಲ್ಲಾ ಮಕ್ಕಳಿಗೆ ಹಿಂದೂ ಹೆಸರುಗಳನ್ನು ಇಟ್ಟಿದ್ದರು. ತುಳಸಿ ಗಬ್ಬಾರ್ಡ್ ಕೂಡ ಹಿಂದೂವಾಗಿಯೇ ಗುರುತಿಸಿಕೊಳ್ಳುತ್ತಾರೆ ಮತ್ತು ಮೊದಲ ಹಿಂದೂ ಯುಎಸ್ ಕಾಂಗ್ರೆಸ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಗೊಂಡ ಸಂದರ್ಭದಲ್ಲಿ ತುಳಸಿ ಗಬ್ಬಾರ್ಡ್ ಅವರು ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ್ದರು.
— Donald J. Trump (@realDonaldTrump) November 13, 2024
President-elect Donald Trump on Wednesday announced that former Democrat Representative turned Republican supporter Tulsi Gabbard has been selected to lead the National Intelligence. Gabbard, who helped Trump in his debate preparation with Vice President Kamala Harris, was expecting a reward after Trump’s victory.
03-07-25 05:24 pm
Bangalore Correspondent
Rain kadaba, Sullia, Mangalore: ಕಡಬ, ಸುಳ್ಯದಲ್...
03-07-25 10:54 am
Tumakuru, Fathers Jail, Traffic, Bike: ತುಮಕೂರ...
03-07-25 10:52 am
Dk Shivakumar, CM Siddaramaiah: ನನ್ನ ಹೆಸ್ರು ಹ...
02-07-25 11:02 pm
Vikas Kumar IPS, CAT: ವಿಕಾಸ್ ಕುಮಾರ್ ಅಮಾನತು ರದ...
02-07-25 10:47 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
03-07-25 10:50 pm
Mangalore Correspondent
ರಹಿಮಾನ್ ಕೊಲೆ ಪ್ರಕರಣ ; ಅನುಮತಿ ನಿರಾಕರಿಸಿದ್ದರೂ ಬ...
03-07-25 10:39 pm
Mangalore Police, New Rules, Festival; ಮೊಸರು...
03-07-25 03:43 pm
Mangalore, Heart Attack Spike: ದಕ್ಷಿಣ ಕನ್ನಡ ಜ...
03-07-25 02:33 pm
Mangalore Police, Task Force: ಕೋಮು ಗಲಭೆ ನಿಗ್ರ...
03-07-25 10:50 am
03-07-25 11:03 pm
Mangalore Correspondent
ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ; ಸಿಸಿಬಿ ಪೊಲೀಸರ...
03-07-25 08:38 pm
ಮಹಾದೇವ್ ಬೆಟ್ಟಿಂಗ್ ಹಗರಣ ; ಮೋಸ್ಟ್ ವಾಂಟೆಡ್ ಆರೋಪಿ...
03-07-25 07:09 pm
Infosys Employee, Video Recording, Crime: ಇನ್...
02-07-25 10:15 pm
Massive Scam, Mangalore City Corporation, Fak...
02-07-25 12:24 pm