ಬ್ರೇಕಿಂಗ್ ನ್ಯೂಸ್
13-08-21 02:16 pm Mangaluru Correspondent ಕರ್ನಾಟಕ
ಬೆಳಗಾವಿ, ಆಗಸ್ಟ್ 13: ಮುಸ್ಲಿಂ ಮಾಲೀಕರಿಗೆ ಸೇರಿದ ರೆಸ್ಟೋರೆಂಟ್ ಒಂದರಲ್ಲಿ ಬಿರಿಯಾನಿ ಪ್ರಚಾರಕ್ಕಾಗಿ ಹಿಂದು ಸಂತನ ಪೋಟೋ ಬಳಸಿದ ವಿಚಾರ ಬೆಳಗಾವಿಯಲ್ಲಿ ಹೊಸ ವಿವಾದ ಎಬ್ಬಿಸಿದೆ. ಹಿಂದು ಸಂಘಟನೆಗಳ ಆಕ್ರೋಶ, ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಆರೋಪಕ್ಕೀಡಾದ ಹೊಟೇಲ್, ರೆಸ್ಟೋರೆಂಟ್ ಗಳನ್ನು ಮುಚ್ಚಿಸಿದ್ದಾರೆ.
ಬೆಳಗಾವಿ ನಿಯಾಜ್ ರೆಸ್ಟೋರೆಂಟ್ ತನ್ನ ಇನ್ ಸ್ಟಾ ಗ್ರಾಂನಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿತ್ತು. ಸತ್ಸಂಗ ಮಾಡುತ್ತಿರುವ ಗುರೂಜಿ ಫೋಟೊ ಬಳಸಿದ್ದಲ್ಲದೆ, ಗುರೂಜಿ ಆಫ್ಟರ್ ಟೇಸ್ಟಿಂಗ್ ನಿಯಾಜ್, ಬಲಿದಾನ (ಬಿರಿಯಾನಿ) ದೇನಾ ಹೋಗಾ ಎಂದು ಫೋಸ್ಟ್ ಮಾಡಿತ್ತು.
ರೆಸ್ಟೋರೆಂಟ್ ಮಂದಿ ಪ್ರಚಾರಕ್ಕಾಗಿ ಹಾಕಿದ್ದ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಿಂದು ಸಂಘಟನೆ ಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. 24 ಗಂಟೆಯಲ್ಲಿ ಪೋಸ್ಟ್ ತೆರವು ಮಾಡಿ ನಿಯಾಜ್ ಹೊಟೇಲ್ ಮಾಲೀಕರು ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅದರಿಂದ ಆಗುವ ಪರಿಸ್ಥಿತಿಗೆ ಅವರೇ ಹೊಣೆಯಾಗುತ್ತಾರೆ ಎಂದು ಬಜರಂಗದಳ ಮುಖಂಡರು ಎಚ್ಚರಿಕೆ ನೀಡಿದ್ದರು.
ಅಲ್ಲದೆ, ಈ ಬಗ್ಗೆ ಬೆಳಗಾವಿ ಡಿಸಿಪಿ ವಿಕ್ರಮ್ ಆಮ್ಟೆ ಗೆ ಹಿಂದು ಸಂಘಟನೆಗಳ ಕಾರ್ಯಕರ್ತರು ದೂರು ನೀಡಿ, ಕ್ರಮಕ್ಕೆ ಆಗ್ರಹ ಮಾಡಿದ್ದರು. ಪೊಲೀಸ್ ದೂರು ದಾಖಲಾದ ಬೆನ್ನಲ್ಲೇ ಬೆಳಗಾವಿ ನಗರದಲ್ಲಿ ಇರುವ ಮೂರು ನಿಯಾಜ್ ಹೋಟೆಲ್ ಗಳನ್ನು ಬಂದ್ ಮಾಡಲಾಗಿದೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Niyaz Hotel Belgaum biryani advertisement turns controversy sparks outrage. The Police have now shut down the restaurant after VHP turned furious. Hindu organisations demand an apology from the owners.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm