ಬ್ರೇಕಿಂಗ್ ನ್ಯೂಸ್
11-08-21 09:36 pm Headline Karnataka Political Bureau ಕರ್ನಾಟಕ
ಬೆಳಗಾವಿ, ಆಗಸ್ಟ್ 11: ಒಂದು ತೆಗೆದ್ರೆ ಎರಡು ತೆಗೀತೀವಿ, ನಾವೀಗ ಪ್ರಬಲರಾಗಿದ್ದೇವೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದ ಸಚಿವ ಕೆ.ಎಸ್.ಈಶ್ವರಪ್ಪ ನಿನ್ನೆಯಷ್ಟೇ ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಕೇಳಿದ್ದರು. ಇಂದು ಬೆಳಗಾವಿಗೆ ತೆರಳಿದ್ದ ಈಶ್ವರಪ್ಪ ಹೊಸ ರಾಗ ಎಳೆದಿದ್ದಾರೆ. ನನಗೆ ಬಿಪಿ, ಶುಗರ್ ಸಮಸ್ಯೆ ಇಲ್ಲ. ನನ್ನ ತಂಟೆಗೆ ಬಂದವರಿಗೆ ಬಿಪಿ ಶುಗರ್ ಬಂದೇ ಬರುತ್ತದೆ ಎಂದು ಶಾಪ ಹಾಕಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ನಾನು ನಾಗಪುರದ ಯೂನಿವರ್ಸಿಟಿಯಲ್ಲಿ ಕಲಿತು ಬಂದವನು ಎಂದು ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ಹೇಳಿದ್ದಾರೆ. ಅಲ್ಲಿ ಕಲಿತು ಬಂದಿದ್ದರಿಂದಲೇ ಒಳ್ಳೆಯ ಸಂಸ್ಕಾರ ಬೆಳೆಸಿಕೊಂಡಿದ್ದೇನೆ. ಶಿವಮೊಗ್ಗದ ಜನರು ನನ್ನನ್ನು ಐದು ಬಾರಿ ಆಯ್ಕೆ ಮಾಡಿದ್ದಾರೆ. ಜಗತ್ತು ಮೆಚ್ಚಿಕೊಂಡಿರುವ ಮೋದಿ ಬಗ್ಗೆ ಅವರ ಹೆಸರನ್ನು ಶೌಚಾಲಯಕ್ಕೆ ಇಡಬೇಕು ಎಂದ ಕಾಂಗ್ರೆಸಿಗರ ಸಂಸ್ಕೃತಿ ಎಂಥದ್ದು. ಇವರು ಇಟಲಿ ಯೂನಿವರ್ಸಿಟಿಯಲ್ಲಿ ಓದಿ ಬಂದವರೆಲ್ಲ ಇದನ್ನು ಒಪ್ಪುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಮೋದಿ ಬಗ್ಗೇ ಕೇವಲವಾಗಿ ಮಾತನಾಡಿದ್ದರಿಂದ ಸಿಟ್ಟು ಬಂದು ಆ ರೀತಿಯ ಪದ ಬಳಸಿದ್ದೆ. ಆದರೆ ತಪ್ಪು ಅರಿವಾಗಿ ಪದವನ್ನು ಹಿಂದಕ್ಕೆ ಪಡೆದಿದ್ದೇನೆ. ಆದರೆ ಕಾಂಗ್ರೆಸಿನವರು ಅದನ್ನೇ ರಾಜಕಾರಣಕ್ಕೆ ಬಳಸಿಕೊಂಡರೆ ಏನು ಮಾಡಲು ಬರುತ್ತದೆ ಎಂದು ಕೇಳಿದ ಈಶ್ವರಪ್ಪ, ವಾಜಪೇಯಿ, ದೀನದಯಾಳ ಉಪಾಧ್ಯಾಯ, ಸಾವರ್ಕರ್ ಫೋಟೋಗಳಿಗೆ ಮಸಿ ಬಳಿಯುತ್ತೇವೆ ಎಂದ ಕಾಂಗ್ರೆಸಿಗರ ಸಂಸ್ಕೃತಿ ಏನು ಎಂದು ಪ್ರಶ್ನೆ ಮಾಡಿದರು.
ಜೆಡಿಎಸ್ ಬಗ್ಗೆ ಬಿಜೆಪಿ ಮೃದು ಧೋರಣೆ ತಳೆದಿದೆಯೇ ಎಂಬ ಪ್ರಶ್ನೆಗೆ, ಏನು ಮಾಡೋಣ ಸ್ವಾಮಿ.. ಕುಮಾರಸ್ವಾಮಿ ಅವರನ್ನು ಕರ್ಕೊಂಡು ಬಂದು ಹೊಡಿಯೋಕ್ಕಾಗುತ್ತಾ.. ಅವರ ರಾಜಕೀಯ ಅವ್ರು ಮಾಡ್ತಾರೆ. ನಾವು ನಮ್ಮದನ್ನು ಮಾಡುತ್ತೇವೆ. ಜೆಡಿಎಸ್ ಬೆಂಬಲ ಪಡೆಯುವ ಅಗತ್ಯ ನಮಗಿಲ್ಲ. ಬಿಜೆಪಿ ಅಧಿಕಾರ ಪೂರೈಸುತ್ತದೆ. ಸಿದ್ದರಾಮಯ್ಯ ಸರ್ಕಾರ ಬಿದ್ದು ಹೋಗುತ್ತೆ ಎಂದು ಕೆಟ್ಟ ಕನಸು ಕಾಣುತ್ತಿದ್ದಾರೆ. ಅದೇನೂ ನನಸಾಗುವುದಿಲ್ಲ ಎಂದು ಹೇಳಿದರು.
K S Eshwarappa asks apology after sparking row using abusive language.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm