ಬ್ರೇಕಿಂಗ್ ನ್ಯೂಸ್
11-08-21 08:45 am Bengaluru Correspondent ಕರ್ನಾಟಕ
ವಿಜಯನಗರ, ಆಗಸ್ಟ್ 11: ತಮ್ಮ ಸಚಿವ ಸ್ಥಾನದ ಬಗ್ಗೆ ತೀವ್ರ ಮುನಿಸಿಕೊಂಡಿರುವ ಹೊಸಪೇಟೆ ಶಾಸಕ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೇ ರಾಜಿನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಹೊಸಪೇಟೆಯ ತಮ್ಮ ಕಚೇರಿಯನ್ನು ಮಂಗಳವಾರ ರಾತ್ರಿ ದಿಢೀರ್ ತೆರವು ಮಾಡಿದ್ದು ಅದರ ನಾಮಫಲಕ ತೆಗೆದು ಹಾಕಲಾಗಿದೆ.
ಅಲ್ಲದೆ, ಆ.11ರಿಂದ ಕಚೇರಿಯಲ್ಲಿ ಯಾವುದೇ ಸಾರ್ವಜನಿಕರ ಅಹವಾಲು ಸ್ವೀಕರಿಸದಿರಲು ನಿರ್ಧರಿಸಿದ್ದಾರೆ. ಕಚೇರಿ ಬಂದ್ ಕುರಿತು ಪ್ರತಿಕ್ರಿಯಿಸಿದ ಸಚಿವ ಆನಂದ್ ಸಿಂಗ್, ಈ ಬಗ್ಗೆ ನಾನೇನೂ ಪ್ರತಿಕ್ರಿಯಿಸಲಾರೆ. ಏನು ಹೇಳಬೇಕಿತ್ತೋ ಅದನ್ನು ಮುಖ್ಯಮಂತ್ರಿಯವರಿಗೆ ಹೇಳಿದ್ದೇನೆ ಎಂದಿದ್ದಾರೆ.
ಎರಡು ದಿನಗಳ ಹಿಂದೆ ಸಿಎಂ ಬೊಮ್ಮಾಯಿ ಅವರನ್ನು ಸಚಿವ ಸ್ಥಾನದ ವಿಚಾರದಲ್ಲಿ ಭೇಟಿಯಾಗಿದ್ದ ಆನಂದ ಸಿಂಗ್, ಬೇರೆ ಖಾತೆ ನೀಡಲು ಪಟ್ಟು ಹಿಡಿದಿದ್ದರು. ಅಲ್ಲದೆ ಎರಡು ದಿನಗಳ ಗಡುವನ್ನೂ ನೀಡಿದ್ದರು. ಇದೀಗ ಸಿಎಂ ಕಡೆಯಿಂದ ಸ್ಪಂದನೆ ಸಿಕ್ಕಿರದ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ. ಬೇಡಿಕೆ ಈಡೇರದಿದ್ದರೆ ಆ. 15ರಂದು ಧ್ವಜಾರೋಹಣವನ್ನೂ ಮಾಡದಿರಲು ಆನಂದ ಸಿಂಗ್ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ ಮತ್ತು ಪರಿಸರ, ಜೀವಿಶಾಸ್ತ್ರ ಖಾತೆ ನೀಡಲಾಗಿದೆ. ಆದರೆ ಈ ಖಾತೆ ಬೇಡ ಎನ್ನುತ್ತಿರುವ ಆನಂದ್ ಸಿಂಗ್, ಖಾತೆಗಳ ಜವಾಬ್ದಾರಿ ವಹಿಸಿಕೊಳ್ಳದೆ ಮುನಿಸಿಕೊಂಡಿದ್ದಾರೆ.
14 ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದ ಹೊಸಪೇಟೆಯ ರಾಣಿಪೇಟ್ ಎಂಬಲ್ಲಿದ್ದ ಶಾಸಕರ ಕಚೇರಿಯನ್ನು ತೆರವು ಮಾಡಿದ್ದು ಶಾಸಕ ಸ್ಥಾನಕ್ಕೇ ರಾಜಿನಾಮೆ ನೀಡುವ ಸೂಚನೆ ಎನ್ನಲಾಗಿದೆ. ಇತರ ಅತೃಪ್ತ ಶಾಸಕರ ಜೊತೆ ಸಂಪರ್ಕದಲ್ಲಿರುವ ಆನಂದ್ ಸಿಂಗ್, ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತಾರೋ ಮತ್ತೆ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಾರೋ ಎನ್ನುವ ಕುತೂಹಲ ಎದ್ದಿದೆ. ಕಳೆದ ಬಾರಿ ಬಿಜೆಪಿ ಸರಕಾರ ಬರಲು ಆನಂದ್ ಸಿಂಗ್ ಕೂಡ ಕಾರಣರಾಗಿದ್ದರು. ಇದೇ ವಿಚಾರದಲ್ಲಿ ಯಡಿಯೂರಪ್ಪ ಸರಕಾರ ಇದ್ದಾಗ ಒತ್ತಡ ತಂತ್ರ ಅನುಸರಿಸಿ ಸಚಿವರಾಗಿದ್ದರು. ಆದರೆ ಈ ಬಾರಿ ಪ್ರಮುಖ ಖಾತೆಯ ಮೇಲೆ ಕಣ್ಣಿಟ್ಟಿದ್ದರು.
Anand Singh dissatisfaction with his portfolio Likely To Resign Closes MLA Office In Hospet. Just as Chief Minister Basavaraj Bommai allocated ministerial berths, B.S. Anand Singh, MLA for Vijayanagar, expressed his discontentment over the Tourism portfolio allocated to him.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm